Advertisement

ರಾಷ್ಟ್ರೀಯ ಜಿಮ್ನಾಸ್ಟಿಕ್‌ಗೆ ಬೆಂಗ್ಳೂರಲ್ಲಿ ಚಾಲನೆ

08:35 AM Jul 17, 2017 | Team Udayavani |

ಬೆಂಗಳೂರು: ಉದ್ಯಾನನಗರಿಯ ವೈಟ್‌ಫಿಲ್ಡ್‌ನ ಗೋಪಾಲನ್‌ ನ್ಪೋರ್ಟ್ಸ್ ಕೇಂದ್ರದಲ್ಲಿ 14ನೇ ಏರೋಬಿಕ್‌ ಜಿಮ್ನಾಸ್ಟಿಕ್‌ ರಾಷ್ಟ್ರೀಯ ಕಿರಿಯರ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಲಾಗಿದೆ. ಭಾನುವಾರ ಗೋಪಾಲನ್‌ ಸಮೂಹದ ಸಿ.ಪ್ರಭಾಕರ್‌ ಕೂಟಕ್ಕೆ
ಚಾಲನೆ ನೀಡಿದರು. 11 ವರ್ಷ, 14 ವರ್ಷ, 17 ವರ್ಷ ಹಾಗೂ 18 ವರ್ಷ ವಯೋಮಿತಿ ಯೊಳಗಿನವರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿದೆ. 4 ದಿನದ ಕೂಟ ಬುಧವಾರ ಮುಕ್ತಾಯವಾಗಲಿದೆ. ಸುಮಾರು 50ಕ್ಕೂ ಹೆಚ್ಚು ವಿವಿಧ ರಾಜ್ಯಗಳ ಕ್ರೀಡಾಪಟುಗಳು ಕೂಟದಲ್ಲಿ ಪಾಲ್ಗೊಂಡಿರುವುದು ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next