Advertisement
ರಾಮನಗರ ಜಿಲ್ಲೆ ಮಾಡಿದ್ದ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ? ರಾಮನ ಹೆಸರು ಇರುವುದು ಒಂದು ಭಾಗ. ಈ ಜಿಲ್ಲೆಗೆ ತನ್ನದೇ ಆದ ಇತಿಹಾಸ ಇದೆ. ಪುರಾಣ ಐತಿಹ್ಯವಿದೆ. ಈ ಹೆಸರಲ್ಲಿ ರಾಮನ ಹೆಸರು ಇದೆ. ರಾಮದೇವರಿಗೆ ಇವರು ಅಪಚಾರ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಮಾಡುತ್ತೇವೆ, ಬೆಂಗಳೂರನ್ನು ಆ ರೀತಿ ಮಾಡುತ್ತೇವೆ. ಈ ರೀತಿ ಮಾಡುತ್ತೇವೆ ಎಂದರಲ್ಲ, ಅದು ಏನಾಯ್ತು ಎಂದು ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಹೆಸರಿಡುವ ಡಿ.ಕೆ. ಶಿವಕುಮಾರ್ ಕ್ರಮದ ಬಗ್ಗೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು. ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಹಣ ದೋಚುತ್ತಿದ್ದಾರೆ. ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ ಎಂದರು. ರಾಮನ ಹೆಸರೇ ಇವರಿಗಾಗದು: ಡಾ. ಅಶ್ವತ್ಥನಾರಾಯಣ
ರಾಮನಗರ ಜಿಲ್ಲೆಯಲ್ಲಿ ರಾಮ ಇದ್ದಾನೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನವರು ಹೆಸರು ಬದಲಾಯಿಸುತ್ತಿದ್ದಾರೆ. ಇವರದು ತುಷ್ಟೀಕರಣ ರಾಜಕಾರಣ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.
ಯಾವುದೇ ಕಾರಣಕ್ಕೂ ಇವರು ರಾಮನ ಹೆಸರು ಸಹಿಸಿಕೊಳ್ಳುವುದಿಲ್ಲ. ಅದೇ ಕಾರಣಕ್ಕೆ ಜಿಲ್ಲೆಯ ಹೆಸರು ಬದಲಿಸಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ನಿಮ್ಮ ತುಷ್ಟೀಕರಣ ರಾಜಕಾರಣವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದಿದ್ದಾರೆ.