Advertisement
ಐಟಿಸಿ ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿಯಿಂದ ತಯಾರಾಗಿರುವ ಈ ವಿನೂತನ ಸೈನ್ಸ್ ಬಸ್ ಅನ್ನು ಇಸ್ರೋ ಮಾಜಿ ನಿರ್ದೇಶಕ ಪ್ರಕಾಶ್ ರಾವ್, ಬಾಲಿವುಡ್ ನಟಿ ಮಂದಿರಾ ಬೇಡಿ, ನಿಮ್ಹಾನ್ಸ್‌ನ ಡಿಎಂ ಡಾ. ಮೇಘಾ ಮಹಾಜನ್, ಐಟಿಸಿ ಲಿಮಿಟೆಡ್ ಬಿಸ್ಕೆಟ್ಸ್ ಮತ್ತು ಕೇಕ್ಸ್ ಕ್ಲಸ್ಟರ್, ಫುಡ್ಸ್ ವಿಭಾಗದ ಸಿಒಒ ಅಲಿ ಹ್ಯಾರಿಸ್ ಶೇರ್ ಅವರು “ಸೈನ್ಸ್ ಬಸ್’ ಅನ್ನು ನಗರದ ಸೆಂಟ್ ಜೋಸೆಫ್ ಹೈಸ್ಕೂಲ್ ಮೈದಾನದಲ್ಲಿ ಅನಾವರಣಗೊಳಿಸಿದರು.
Related Articles
Advertisement
ನಾಸಾ ಭೇಟಿಗೆ ಅವಕಾಶ
ಸೈನ್ಸ್ ಬಸ್‌ನಲ್ಲಿ ಮಕ್ಕಳು ತಮ್ಮ ಆಸಕ್ತಿದಾ ಯಕ ವಿಚಾರ ಹಾಗೂ ಕಲೆಯನ್ನು ಪ್ರದರ್ಶಿ ಸಬಹುದು. ಯಾವ ಮಗುವಿನ ಕಲ್ಪನೆಯು ಹೆಚ್ಚು ವಿಭಿನ್ನ ಹಾಗೂ ವಿಶೇಷವಾಗಿರುತ್ತ ದೆಯೋ ಆ ಆಯ್ದ ಮಕ್ಕಳನ್ನು ನಾಸಾಗೆ ಭೇಟಿ ನೀಡುವ ಅವಕಾಶವನ್ನು ಐಟಿಸಿ ಡಾರ್ಕ್ ಫ್ಯಾಂಟಸಿ ತಂಡ ಮಾಡಲಿದೆ. ಪ್ರಸ್ತು ತ ಬೆಂಗಳೂರಿನಲ್ಲಿ ನೂತನ ಬಸ್‌ಗೆ ಚಾಲನೆ ಸಿಕ್ಕಿದ್ದು, ಈ ಬಸ್ ಇಡೀ ದೇಶಾ ದ್ಯಂತ ಎಲ್ಲೆ ಡೆ ಸಂಚರಿಸಿ, ಕೋಟ್ಯಂತರ ಮಕ್ಕಳ ಕ್ರಿಯಾ ತ್ಮಕತೆ ಹಾಗೂ ಕಲ್ಪನೆಗೆ ಸಾಕ್ಷಿಯಾಗಲಿದೆ.
ಸೈನ್ಸ್ ಬಸ್‌ನ ವಿಶೇಷತೆ
ಈ ಬಸ್ ಹಲವು ವಿಶೇಷ ಹಾಗೂ ಕೌತುಕದಿಂದ ಕೂಡಿದೆ. ಈ ಬಸ್‌ನಲ್ಲಿ ವಿಸ್ತಾರವಾದ ಸಂವಾದಾತ್ಮಕ ಪರದೆ ಇದ್ದು, ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯಿಂದ ನಡೆಸಲ್ಪಡುತ್ತದೆ. ಇದರಲ್ಲಿ ಮಕ್ಕಳ ತಮ್ಮ ಕೈಯಿಂದ ಬಿಡಿಸಿದ ಚಿತ್ರ ಅಥವಾ ಪಾತ್ರವು ರೋಮಾಂಚಕ ಡಿಜಿಟಲ್ ರಚನೆಗಳಾಗಿ ಪರಿವರ್ತನೆಗೊಳ್ಳಲಿದೆ. ಮಕ್ಕಳು ಪೇಪರ್ ಮೇಲೆ ಬರೆದ ಈ ಕಲಾಕೃತಿಯನ್ನು ಸ್ಕ್ಯಾನ್ ಮಾಡಿದ ನಂತರ, ಅವರ ಪಾತ್ರಗಳು ಅಥವಾ ಕಲಾಕೃತಿಗಳು ಸ್ಪೇಸ್ ಶಿಪ್‌ನಲ್ಲಿ ಡಿಜಿಟಲ್ ಆಗಿ ರೂಪದಲ್ಲಿ 3ಡಿ ಸಂವಾದಾತ್ಮಕ ಅಕ್ಷರಗಳಾಗಿ ಪ್ರದರ್ಶನಗೊಳ್ಳಲಿದೆ.