Advertisement
ಹೆಬ್ಟಾಳದ ಕೆಂಪಾಪುರದ ನಿವಾಸಿ ಸುಚಿತ್ (22), ಕೋಲಾರ ಜಿಲ್ಲೆಯ ಕೆಜಿಎಫ್ನ ಹರ್ಷವರ್ಧನ್ (21) ಹಾಗೂ ಚಿಕ್ಕಬಳ್ಳಾಪುರದ ರೋಹಿತ್(21) ಮೃತಪಟ್ಟ ವಿದ್ಯಾರ್ಥಿಗಳು.
Related Articles
Advertisement
ಅಪಘಾತ ವೆಸಗಿದ ಬಳಿಕ ಲಾರಿ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮೂವರ ಮೃತ ದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ ಪ್ರಕ ರಣ ದಾಖಲಿಸಿಕೊಂಡಿದ್ದಾರೆ. ಅಪಘಾತ ಎಸಗಿದ ವಾಹನ ಹಾಗೂ ಚಾಲಕನ ಪತ್ತೆಗಾಗಿ ದುರ್ಘಟನೆ ನಡೆದ ಸ್ಥಳದ ಸುತ್ತಮುತ್ತಲಿರುವ ಸಿಸಿ ಕ್ಯಾಮೆರಾ ಗಳನ್ನು ಪೊಲೀಸರು ಪರಿಶೀಲಿಸಿದ್ದರು.
ನಂತರ ಟೋಲ್ ಸೇರಿದಂತೆ ವಿವಿಧೆಡೆಯ ಸಿಸಿ ಕ್ಯಾಮೆರಾ ಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ವಾಹನದ ನೋಂದಣಿ ಸಂಖ್ಯೆಯ ಸುಳಿವು ಸಿಕ್ಕಿತ್ತು. ಇದರ ಆಧಾರದ ಮೇಲೆ ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.
ವಿದ್ಯಾರ್ಥಿಗಳ ಪರ್ಸ್‌ನಲ್ಲಿದ್ದ ಗುರುತಿನ ಚೀಟಿ ಪರಿಶೀಲಿಸಿ ಪೊಲೀಸರು, ವಿದ್ಯಾರ್ಥಿಗಳ ವಿಳಾಸ ಪತ್ತೆ ಹಚ್ಚಿ ಅವರ ಪೋಷಕರಿಗೆ ಮಾಹಿತಿ ನೀಡಿದ್ದರು. ಅಪಘಾತದಲ್ಲಿ ತಮ್ಮ ಮಕ್ಕಳು ಮೃತಪಟ್ಟಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಪೋಷಕರು ಅಂಬೇಡ್ಕರ್ ಆಸ್ಪತ್ರೆ ಬಳಿ ದೌಡಾಯಿಸಿದರು. ಮಕ್ಕಳ ಮೃತದೇಹ ಕಂಡು ಪಾಲಕರು ರೋದಿಸುತ್ತಿದ್ದ ದೃಶ್ಯ ಮನಕುಲುಕುವಂತಿತ್ತು.
ಸೇಹಿತನ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ಜಾಲಿರೈಡ್
ಮೂಲಗಳ ಪ್ರಕಾರ, ಮೃತಪಟ್ಟಿರುವ ಮೂವರು ವಿದ್ಯಾರ್ಥಿಗಳು ಸೇರಿದಂತೆ ಐವರು ವಿದ್ಯಾರ್ಥಿಗಳು ಬುಧವಾರ ತಡರಾತ್ರಿ ಏರ್‌ಪೋರ್ಟ್ ರಸ್ತೆ ಬಳಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಿದ್ದರು. ತಡರಾತ್ರಿ ವರೆಗೂ ನಡೆದ ಪಾರ್ಟಿ ಮುಗಿಸಿಕೊಂಡು ಜಾಲಿ ರೈಡ್ ಹೊರಟಿದ್ದರು ಎನ್ನಲಾಗಿದೆ. ಈ ಪೈಕಿ ಒಂದು ಬೈಕ್‌ನಲ್ಲಿ ಮೂವರು ಹಾಗೂ ಮತ್ತೂಂದು ಬೈಕ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಲಾಂಗ್‌ಡ್ರೈವ್ ಹೋಗುತ್ತಿದ್ದಾಗ ದುರ್ಘಟನೆ ನಡೆಸಿದೆ ಎಂಬ ಶಂಕೆ ವ್ಯಕ್ತವಾಗಿದೆ.