Advertisement

Bengaluru Rameshwaram Cafe Case: ಜೈಲಲ್ಲಿರುವ ನಾಲ್ವರ ವಿಚಾರಣೆ

11:05 PM Mar 08, 2024 | Team Udayavani |

ಬೆಂಗಳೂರು/ಬಳ್ಳಾರಿ: ಬೆಂಗಳೂರಿನ “ರಾಮೇಶ್ವರಂ ಕೆಫೆ’ ಯಲ್ಲಿ ನಡೆದ ಬಾಂಬ್‌ ಸ್ಫೋಟಕ್ಕೂ “ಬಳ್ಳಾರಿ ಮಾಡ್ಯೂಲ್‌’ಗೂ ಸಾಮ್ಯತೆ ಇರುವುದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ತನಿಖೆ ಯಲ್ಲಿ ಬೆಳಕಿಗೆ ಬಂದಿದೆ.

Advertisement

ಎನ್‌ಐಎ ಅಧಿಕಾರಿ ಗಳು ಕಳೆದ ವರ್ಷ ಡಿ. 18ರಂದು ಬಳ್ಳಾರಿ ಮಾಡ್ಯೂಲ್‌ (ಬಳ್ಳಾರಿಯನ್ನು ಕೇಂದ್ರವನ್ನಾಗಿಸಿ ಕೊಂಡು ಕೃತ್ಯ) ಪ್ರಕರಣದಲ್ಲಿ ಬಂಧನ ಕ್ಕೊಳಗಾಗಿ, ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಳ್ಳಾರಿ ಮೂಲದ ಮಿನಾಜ್‌ ಅಲಿಯಾಸ್‌ ಎಂ.ಡಿ. ಸುಲೇಮಾನ್‌, ಸೈಯದ್‌ ಸಮೀರ್‌ ಮತ್ತು ಮಹಾ ರಾಷ್ಟ್ರದ ಮುಂಬಯಿಯಲ್ಲಿ ಅನಾಸ್‌ ಇಕ್ಬಾಲ್‌ ಶೇಖ್‌, ದಿಲ್ಲಿಯಲ್ಲಿ ಶಯಾನ್‌ ರೆಹಮಾನ್‌ ಅಲಿಯಾಸ್‌ ಹುಸೇನ್‌ನನ್ನು ಎರಡು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಶಂಕಿತ ಬೆಂಗಳೂರಿನಿಂದ ತುಮಕೂರು ಮಾರ್ಗ ವಾಗಿ ಬಳ್ಳಾರಿಗೆ ತೆರಳಿ ಕೆಲವು ತಾಸು ಉಳಿದುಕೊಂಡಿದ್ದ ಎಂಬುದು ಪತ್ತೆಯಾಗಿದೆ. ಶಂಕಿತರು ಬಳಸಿದ್ದ ರಾಸಾಯನಿಕ ವಸ್ತುಗಳನ್ನೇ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಶಂಕಿತ ಬಳಸಿದ್ದಾನೆ.

ಬಂಧಿತರು ಬಳ್ಳಾರಿ, ಬೆಂಗಳೂರಿ ನಲ್ಲಿ ವಿದ್ಯಾರ್ಥಿಗಳನ್ನು ಸಂಘಟನೆ ಮಾಡುತ್ತಿರುವುದು ಪತ್ತೆಯಾಗಿದೆ. ಜತೆಗೆ ಬ್ಯಾಡರಹಳ್ಳಿಯಲ್ಲಿ ಬಂಧನಕ್ಕೆ ಒಳಗಾದ ಮೂವರು ಶಂಕಿತರು ಕೆಲವು ಯುವಕರನ್ನು ಪ್ರಚೋದಿಸಿ ಸಂಘಟನೆ ಬಗ್ಗೆ ಒಲವು ಬರುವಂತೆ ಮಾಡಿರುವುದು ಪತ್ತೆಯಾಗಿತ್ತು.

ಐಸಿಸ್‌ ನಂಟಿನ ತನಿಖೆ
ಐಸಿಸ್‌ ಸಂಪರ್ಕ ಹೊಂದಿದ್ದ ಸುಲೇಮಾನ್‌ “ಬಳ್ಳಾರಿ ಮಾಡ್ಯೂಲ್‌’ ಹೆಸರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ. ಬಳ್ಳಾರಿಯ ಫರ್ಟಿಲೈಸರ್‌ ಮಳಿಗೆಯಲ್ಲಿ ಅಮೋನಿಯಂ ನೈಟ್ರೇಟ್‌ ಖರೀದಿಸಿದ್ದ. ಹೀಗಾಗಿ ಸುಲೇಮಾನ್‌ ಹಾಗೂ ಸಮೀರ್‌ ಇಬ್ಬರನ್ನೂ ಈಗ ಎನ್‌ಐಎ ಅಧಿಕಾರಿಗಳು ಪುನಃ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next