Advertisement
ವಾಹನ ಸವಾರರು ತಮ್ಮ ವಾಹನಗಳ ಎಮಿಷನ್ ಟೆಸ್ಟ್, ದೃಢತೆ ಪ್ರಮಾಣ ಪತ್ರ, ವಾಹನ ವಿಮೆ (ಇನ್ಶೂರೆನ್ಸ್) ಪಾವತಿ ಜತೆಯಲ್ಲಿಯೇ ಬಾಕಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಕಡ್ಡಾಯ ವಾಗಿ ದಂಡ ಪಾವತಿಯನ್ನೂ ಮಾಡುವ ಸಂಬಂಧ ಬಿಗಿ ನಿಯಮ ರೂಪಿಸಲು ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
Related Articles
Advertisement
ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಬಾಕಿ ಹಳೆ ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ. ಸಂಬಂಧಪಟ್ಟ ವಾಹನ ಮಾಲಿಕರಿಗೆ ನೋಟಿಸ್ ನೀಡಲಾಗುತ್ತಿದೆ. ಜತೆಗೆ, ವಾಹನ ಮಾಲಿಕರ ವಿಳಾಸ ಪತ್ತೆಹಚ್ಚಿ ಮನೆಗಳಿಗ ಪೊಲೀಸರು ತೆರಳುತ್ತಿದ್ದಾರೆ. ಈ ಕಾರ್ಯಕ್ಕಾಗಿ ಠಾಣೆಗಳಲ್ಲಿ ಎಎಸ್‌ಐ ನೇತೃತ್ವದ ತಂಡಗಳು ವಿಶೇಷ ಕಾರ್ಯಾಚರಣೆ ನಡೆಸುತ್ತಿವೆ. ಜತೆಗೆ, ಸಂಚಾರ ನಿಯಮಗಳ ಉಲ್ಲಂಘನೆ ವೇಳೆ ಸಿಕ್ಕಿಬಿದ್ದ ವಾಹನ ಸವಾರರಿಂದ ಅವರ ವಾಹನಗಳ ಮೇಲೆ ಬಾಕಿ ಉಳಿದಿರುವ ಹಳೆ ಕೇಸ್‌ಗಳ ದಂಡವನ್ನೂ ಸಾಧ್ಯವಾದಷ್ಟು ಪಾವತಿ ಮಾಡಿಸಿಕೊಳ್ಳಲಾಗುತ್ತಿದೆ. ಈ ವಿಶೇಷ ಕಾರ್ಯಾಚರಣೆ ಭಾಗವಾಗಿಯೇ ಅಕ್ಟೋಬರ್‌ನಲ್ಲಿಯೇ ಹಳೆ ಕೇಸ್‌ಗಳಿಗೆಸಂಬಂಧಿಸಿದಂತೆ 18 ಕೋಟಿ ರೂ. ಬಾಕಿ ದಂಡದ ಮೊತ್ತ ಸಂಗ್ರಹಿಸಿದ್ದು, ಕಾರ್ಯಚರಣೆ ನಿರಂತರವಾಗಿರಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು
ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
“ಸಂಚಾರ ನಿಯಮಗಳ ಉಲ್ಲಂಘನೆಯ ಹಳೆ ಪ್ರಕರಣಗಳ ಬಾಕಿ ದಂಡದ ಮೊತ್ತ ಸಂಗ್ರಹಿಸಲು ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದ್ದು ನಿರಂತರವಾಗಿರಲಿದೆ. ಜತೆಗೆ, ವಾಹನಗಳ ವಿಮೆ ಪಾವತಿ, ಎಮಿಷನ್ ಟೆಸ್ಟ್, ದೃಢತೆ ಪ್ರಮಾಣ ಪತ್ರ ಪಡೆಯುವ ವೇಳೆ ಸಂಚಾರ ನಿಯಮಗಳ ಉಲ್ಲಂಘನೆ ಬಾಕಿ ದಂಡ ಪಾವತಿಸಿಕೊಳ್ಳುವ ಸಂಬಂಧದ ನಿಯಮದ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತರಾದ ಡಾ. ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
“ರಾಜ್ಯಕ್ಕೆ ಅನ್ವಯ ಸಾಧ್ಯತೆ’
ಹಳೆ ಸಂಚಾರ ನಿಯಮಗಳ ದಂಡ ಪಾವತಿಸಿಕೊಳ್ಳುವುದು ಜತೆಗೆ ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸರು ಸಲ್ಲಿಸಿರುವ ಪ್ರಸ್ತಾವನೆ ಜಾರಿ ಬಗ್ಗೆ ಸರ್ಕಾರದಿಂದಲೂ ಸಕಾರಾತ್ಮಕವಾಗಿ ಸ್ಪಂದನೆ ಹೊಂದಿದೆ.ಈ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರಗಳ ಜತೆ ಸರ್ಕಾರ ಚರ್ಚೆ ನಡೆಸಿದೆ ಎಂದು ಹೇಳಲಾಗುತ್ತಿದೆ. ನಗರ ಸಂಚಾರ ಪೊಲೀಸರ ಪ್ರಸ್ತಾವನೆಯನ್ನು ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ಜಾರಿಗೊಳಿಸುವ ಬಗ್ಗೆಯೂ ಒಲವು ಹೊಂದಿದೆ ರಾಜ್ಯ ಸರ್ಕಾರಕೆ ಎಂದು ಮೂಲಗಳು ತಿಳಿಸಿವೆ.
ಮಂಜುನಾಥ ಲಘುಮೇನಹಳ್ಳಿ