Advertisement

ಬೆಂಗಳೂರು: 100 ದಾಟಿದ ಕೊರೊನಾ ಕಂಟೈನ್‌ಮೆಂಟ್ ವಲಯಗಳು!

02:50 PM Dec 20, 2021 | Team Udayavani |

ಬೆಂಗಳೂರು: ನಗರದಲ್ಲಿ ಒಟ್ಟು 106 ಸಕ್ರಿಯ ಕೊರೊನಾ ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸಲಾಗಿದ್ದು, ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 39 ವಲಯಗಳಿವೆ.

Advertisement

ಬಿಬಿಎಂಪಿ ಸೋಮವಾರ ಪ್ರಕಟಿಸಿದದ ಅಂಕಿಅಂಶಗಳ ಪ್ರಕಾರ , ಬೆಂಗಳೂರು ದಕ್ಷಿಣ ಮತ್ತು ಮಹದೇವಪುರದಲ್ಲಿ ಕ್ರಮವಾಗಿ 24 ಮತ್ತು 12 ವಲಯಗಳಿದ್ದು ಎರಡನೇ ಮತ್ತು ಮೂರನೇ ಅತಿ ಹೆಚ್ಚು ಕಂಟೈನ್‌ಮೆಂಟ್ ವಲಯಗಳನ್ನು ಹೊಂದಿವೆ.

ಬೆಂಗಳೂರು ಪೂರ್ವದಲ್ಲಿ 10, ಬೆಂಗಳೂರು ಪಶ್ಚಿಮದಲ್ಲಿ 8, ಯಲಹಂಕದಲ್ಲಿ ಏಳು, ಆರ್‌ಆರ್‌ನಗರದಲ್ಲಿ 4 ಮತ್ತು ದಾಸರಹಳ್ಳಿಯಲ್ಲಿ 2 ಕಂಟೈನ್‌ಮೆಂಟ್ ವಲಯಗಳಿವೆ. ನಗರದಲ್ಲಿ ಭಾನುವಾರ 168 ಕೋವಿಡ್ ಸೋಂಕುಗಳು ವರದಿಯಾಗಿದ್ದವು.

300 ಹೊಸ ಪ್ರಕರಣಗಳೊಂದಿಗೆ, ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಭಾನುವಾರ 30,02,427 ಕ್ಕೆ ತಲುಪಿದೆ. ಆರೋಗ್ಯ ಇಲಾಖೆ ತನ್ನ ಬುಲೆಟಿನ್‌ನಲ್ಲಿ 279 ಜನರನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆಯನ್ನು 29,56,970. ಸಕ್ರಿಯ ಪ್ರಕರಣಗಳ ಸಂಖ್ಯೆ 7,140 ಎಂದು ತಿಳಿಸಿದೆ. ದಿನದ ಪಾಸಿಟಿವಿಟಿ ರೇಟ್ ಶೇಕಡಾ 0.26 ಮತ್ತು ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 0.33 ರಷ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next