Advertisement
ಕಳೆದೊಂದು ವರ್ಷದಿಂದ ಈ ಹೆದ್ದಾರಿ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ದಶಪಥ ಯೋಜನೆಯ ಲಾಭ ಪಡೆಯು ವುದಕ್ಕೆ ಮೂರೂ ರಾಜಕೀಯ ಪಕ್ಷಗಳು ಹಣಾ ಹಣಿ ನಡೆಸುತ್ತಿವೆ. ಹಳೆ ಮೈಸೂರು ಭಾಗದ ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಇದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಆದರೆ ಅದೇ ಮಾರ್ಗದ ಉದ್ಘಾಟನೆಗೆ ಈಗ ಪ್ರಧಾನಿ ಮೋದಿಯೇ ಆಗಮಿಸುತ್ತಿರುವುದರಿಂದ ಚುನಾವಣೆಯ ಹೊಸ್ತಿಲಲ್ಲಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕ್ರೆಡಿಟ್ ಕಲಹದ ಮಧ್ಯೆಯೂ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇಯನ್ನು “ಮೋದಿ ರಸ್ತೆ’ ಎಂದು ಜನ ಕರೆಯಲಾರಂಭಿಸಿದ್ದಾರೆ. ಇದ ರಿಂದಾಗಿ ಈ ಯೋಜನೆ ಮತದಾರರ ಮನಸ್ಸಿ ನಲ್ಲಿ ಮನೆ ಮಾಡಿದೆ ಎಂದೇ ಹೇಳ ಬಹುದು. ಇದರ ಜತೆಗೆ ಇನ್ನಷ್ಟು ಅಭಿವೃದ್ಧಿ ಯೋಜನೆ ಗಳಿಗೂ ಪ್ರಧಾನಿ ಶಂಕು ಸ್ಥಾಪನೆ ಮಾಡಲಿದ್ದಾರೆ. ಜತೆಗೆ ರಾಜಕೀಯವಾಗಿ ಒಂದಿಷ್ಟು ಕುಟುಕು ವಂಥ ಮಾತುಗಳನ್ನು ಮೋದಿ ಆಡಲೂ ಬಹುದು. ಇದು ಚುನಾವಣೆಯವರೆಗೂ ಚರ್ಚೆಗೆ ಕಾರಣವಾಗಬಹುದು.
Related Articles
Advertisement
ಐಐಟಿಗೆ ಚಾಲನೆಹೈವೇ ಉದ್ಘಾಟನೆ ಬಳಿಕ ಮೋದಿ ಧಾರವಾಡ ಐಐಟಿ ಉದ್ಘಾಟಿಸಲಿದ್ದಾರೆ. ಜತೆಗೆ ವಿಶ್ವದ ಅತಿ ಉದ್ದನೆಯ ಹುಬ್ಬಳ್ಳಿ ರೈಲು ನಿಲ್ದಾಣ ಉದ್ಘಾಟನೆ ಹಾಗೂ ಜಯದೇವ ಆಸ್ಪತ್ರೆ ನಿರ್ಮಾಣಕ್ಕೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಹೊಸಪೇಟೆಯಲ್ಲಿ ಹಂಪಿ ವಾಸ್ತುಶಿಲ್ಪ ಮಾದರಿ ಯಲ್ಲಿ ನವೀಕರಣ ಗೊಂಡಿರುವ ರೈಲು ನಿಲ್ದಾಣವನ್ನೂ ಮೋದಿ ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ. ಇದೇ ರವಿವಾರ ನಾನು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ಮಂಡ್ಯ ಮತ್ತು ಹುಬ್ಬಳ್ಳಿ – ಧಾರವಾಡದಲ್ಲಿ 16 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳ ಶಿಲಾನ್ಯಾಸ, ಉದ್ಘಾ ಟನೆ ನೆರವೇರಿಸಲಿದ್ದೇನೆ. ಈ ಯೋಜನೆಗಳು ಸಂಪರ್ಕ ಮತ್ತು ಸಾಮಾಜಿಕ-ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲಿವೆ.
-ನರೇಂದ್ರ ಮೋದಿ, ಪ್ರಧಾನಿ ಇದು ಎನ್‌ಡಿಎಯ ಯೋಜನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣದ ವಾಸ್ತಾವಂಶಗಳನ್ನು ಜನರ ಮುಂದಿಡಲಾಗುವುದು. ಅದನ್ನು ನಿರ್ಮಿಸಿದ್ದು ಯಾರು ಎಂಬುದನ್ನು ಸಾರ್ವಜನಿಕರೇ ತೀರ್ಮಾನಿಸಲಿ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ