Advertisement

Bengaluru Kambala;ಸೋಮವಾರ ಮುಂಜಾನೆ ಸಂಪನ್ನಗೊಂಡ ಐತಿಹಾಸಿಕ ಕಂಬಳ; ಇಲ್ಲಿದೆ ಫಲಿತಾಂಶ ವಿವರ

10:42 AM Nov 27, 2023 | Team Udayavani |

ಬೆಂಗಳೂರು: ಇಲ್ಲಿ ಅರಮನೆ ಮೈದಾನದಲ್ಲಿ ನಡೆದ ಐತಿಹಾಸಿಕ ‘ರಾಜ – ಮಹಾರಾಜ’ ಜೋಡುಕರೆ ಕಂಬಳ ಕೂಟವು ಸೋಮವಾರ ಮುಂಜಾನೆ ಸಂಪನ್ನವಾಯಿತು. ಸುಮಾರು ಸತತ 44 ಗಂಟೆಗಳ ಕಾಲ ಸಾಗಿದ ಕಂಬಳ ಕೂಟವನ್ನು ಲಕ್ಷಾಂತರ ಜನರು ವೀಕ್ಷಿಸಿದರು.

Advertisement

ಕರಾವಳಿ ಭಾಗದಲ್ಲಿ ನಡೆಯುವ ಕಂಬಳ ಕೂಟವು ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ನಡೆಯಿತು. ಒಟ್ಟು 159 ಜೋಡಿ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ ಏಳು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಆರು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 21 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 32 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 31 ಜೊತೆ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ 62 ಜೊತೆ ಕೋಣಗಳಿದ್ದವು.

ಪ್ರಥಮ ಸ್ಥಾನ ಪಡೆದವರಿಗೆ ಎರಡು ಪವನ್ ಚಿನ್ನ ಮತ್ತು ಒಂದು ಲಕ್ಷ ರೂ, ದ್ವಿತೀಯ ಸ್ಥಾನ ಪಡೆದವರಿಗೆ ಒಂದು ಪವನ್ ಚಿನ್ನ ಮತ್ತು ಐವತ್ತು ಸಾವಿರ ರೂ ನಗದು ಬಹುಮಾನ ನೀಡಲಾಯಿತು. ಇದೇ ಮೊದಲ ಬಾರಿಗೆ ತೃತೀಯ ಮತ್ತು ಚತುರ್ಥ ಬಹುಮಾನವನ್ನು ನೀಡಲಾಯಿತು.

ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಅಡ್ಡಹಲಗೆ ವಿಭಾಗದ ಫೈನಲ್ ಪಂದ್ಯವು ಒಮ್ಮೆ ಟೈ ಆಗಿತ್ತು. ಎರಡೂ ಜೊತೆ ಕೋಣಗಳು 9.59 ಸೆಕೆಂಡ್ಸ್ ನಲ್ಲಿ ಓಟ ಮುಗಿಸಿದ್ದವು. ಮತ್ತೆ ನಡೆದ ಸ್ಪರ್ಧೆಯಲ್ಲಿ ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು ಅವರ ಕೋಣಗಳು ಅತ್ಯಲ್ಪ ಅಂತರದ ಗೆಲುವು ಸಾಧಿಸಿ ಪದಕ ಪಡೆದವು.

ಬೆಂಗಳೂರು ಕಂಬಳ 2023 – ಫಲಿತಾಂಶ

Advertisement

ಕನೆಹಲಗೆ

6.5 ಕೋಲು ನಿಶಾನೆಗೆ ನೀರು ಹಾಯಿಸಿದ ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ “ಬಿ”

ಹಲಗೆ ಮೆಟ್ಟಿದವರು: ಉಲ್ಲೂರು ಕಂದಾವರ ಗಣೇಶ್

ಅಡ್ಡ ಹಲಗೆ:

ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು

ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮೆಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ಹಗ್ಗ ಹಿರಿಯ:

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಸಿ”

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ

ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್

ಹಗ್ಗ ಕಿರಿಯ:

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ

ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ “ಎ”

ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ:

ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ

ಓಡಿಸಿದವರು: ಸರಪಾಡಿ ಧನಂಜಯ ಗೌಡ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ

ಓಡಿಸಿದವರು: ಪಟ್ಟೆ ಗುರುಚರಣ್

ನೇಗಿಲು ಕಿರಿಯ:

ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ

ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next