Advertisement
ಸ್ಟಾರ್ ಫೈಟರ್, ರಕ್ತದ ಹೊಳೆಯನ್ನು ಹರಿಸುವವರು ಬೇರ್ಯಾರು ಅಲ್ಲ, ಕರಾವಳಿಯ ಅಂಕದ ಸ್ಟಾರ್ ಕೋಳಿಗಳು. ಹೌದುಸಾಮಾನ್ಯವಾಗಿ ಕಂಬಳದ ಬಳಿಕ ಕರಾವಳಿ ಯಲ್ಲಿ ಕೋಳಿ ಅಂಕ ನಡೆಯುತ್ತದೆ. ಆದರೆ ಬೆಂಗಳೂರು ಕಂಬಳದಲ್ಲಿ ಕೋಳಿ ಅಂಕವಿಲ್ಲ. ಆದರೆ ಫೈಟರ್ ಕೋಳಿ ಲಕ್ಕಿಡಿಪ್ ಕೌಂಟರ್ ತೆರೆಯಲಾಗಿದ್ದು, ವಿಜೇತರಿಗೆ ರುಚಿಯಾದ ಅಂಕದ ಕೋಳಿ ಸಿಗಲಿದೆ. ಆ ಮೂಲಕ ಸಿಲಿ ಕಾನ್ ಸಿಟಿಯವರಿಗೆ ಅಂಕದ ಕೋಳಿಯ ರುಚಿ ತೋರಿಸಲು ಕರಾವಳಿ ಭಾಗದಿಂದ 300ಕ್ಕೂ ಅಧಿಕ ಅಂಕದ ಹುಂಜ ಗಳನ್ನು ತರಲಾಗಿದೆ. ಇವುಗಳನ್ನು ವಿಶೇಷ ವಾಗಿ ಕಣ್ಣಿಗೆ ಬಟ್ಟೆ ಹಾಕಿ ಇಡಲಾಗಿದೆ.
ಅಂಕ ಹುಂಜದ ಬೆಲೆ, ಬೆಂಗಳೂರಿಗರ ಯೋಚನೆಗೂ ಸಿಗದು. ಸಾಮಾನ್ಯವಾಗಿ 3ರಿಂದ 10 ಸಾವಿರದ ವರೆಗೆ ಅಂಕದ ಕೋಳಿಯ ಬೆಲೆಯಿದೆ. ಇವುಗಳನ್ನು ಮಾಲೀಕರು ವಿಶೇಷವಾಗಿ ಸಾಕುತ್ತಾರೆ. ಪ್ರತ್ಯೇಕ ಗೂಡು ನಿರ್ಮಿಸಿ, ಅದರಲ್ಲಿ ಕಟ್ಟಿ ಹಾಕಿ ಸಮಯಕ್ಕೆ ಸರಿಯಾಗಿ ಡಯೆಟ್ ಆಹಾರ ನೀಡಲಾಗುತ್ತದೆ. ದಿನಕ್ಕೆ ಒಂದರಿಂದ ಎರಡು ಬಾರಿ ಕಾಲಿಗೆ ಹಗ್ಗ ಕಟ್ಟಿಯೇ ವಿಹಾರಕ್ಕೆ ಬಿಡಲಾಗುತ್ತದೆ. ನಿರಂತರವಾಗಿ ಗೂಡಿನಲ್ಲಿ ಕಟ್ಟಿ ಹಾಕಿ ಸಾಕುವುದರಿಂದ ಅವರಲ್ಲಿ ಕಾದಾಡುವ ಹುಮ್ಮಸ್ಸು ಬರುತ್ತದೆ. ಇದರ ಮಾಂಸದ ರುಚಿ ಸಾಮಾನ್ಯ ನಾಟಿ ಕೋಳಿಗಿಂತ ಸ್ವಾದಿಷ್ಟವಾಗಿರುತ್ತದೆ. ಇದರಿಂದಲೇ ಕರಾವಳಿಯಲ್ಲಿ ಕಟ್ಟಿದ ಕೋಳಿ ಮಾಂಸಕ್ಕೆ ದುಬಾರಿ ಬೆಲೆ ನೀಡಬೇಕು. ಗೆದ್ದ ಬಂಟೆಗೆ ಜೈ ಜೈ
ಕೋಳಿ ಅಂಕದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಕೋಳಿಗೆ ಬಂಟೆ ಹಾಗೂ ಸೋತ ಕೋಳಿಗೆ ಒಟ್ಟೆ ಎನ್ನುವುದಾಗಿ ಕರೆಯಲಾಗುತ್ತದೆ. ಅಂಕದಲ್ಲಿ ಸೋತ ಕೋಳಿಯನ್ನು ಗೆದ್ದವರು ತೆಗೆದುಕೊಂಡು ಹೋಗುತ್ತಾರೆ. ಈ ವೇಳೆ ಸೋತ ಕೋಳಿ ಜೀವಂತವಾಗಿದ್ದರೆ, ರಕ್ತ ಸ್ರಾವ ಕಡಿಮೆ ಯಿದ್ದರೆ ವೈದ್ಯರಿಗೂ ಅಥವಾ ಸ್ವಯಂ ವೈದ್ಯ ಪದ್ಧತಿಯ ಮೂಲಕ ಚಿಕಿತ್ಸೆ ಮಾಡಿ, ಇನ್ನೊಂದು ಅಂಕಕ್ಕೆ ತೆಗೆದು ಕೊಂಡು ಹೋಗುತ್ತಾರೆ. ಯಾವುದೇ ರೀತಿಯಾದ ಅಂಗವೈಕಲ್ಯ ಗಳಾದರೆ ಅದನ್ನು ಮನೆ ಅಡುಗೆ ಬಳಕೆ ಮಾಡುತ್ತಾರೆ.
Related Articles
ಸಾಮಾನ್ಯವಾಗಿ ಕೋಳಿ ಅಂಕಕ್ಕೆ ಹೋಗುವವರಿಗೆ ಅನೇಕ ಶಕುನಗಳಿವೆ. ಕೋಳಿ ಅಂಕದಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ. ಇನ್ನೂ ಅಂಕಕ್ಕೆ ತೆರಳುವ ವ್ಯಕ್ತಿಗೆ ನಾಗರಹಾವು, ವಿಧವೆ-ವಿಧುರನ ಎದುರಾದರೆ ಸೋಲು ಖಚಿತ ಎಂದೇ
ನಂಬುತ್ತಾರೆ. ಈ ವೇಳೆ ಯಾರು ಅಂಕ ಕಟ್ಟುವುದಿಲ್ಲ. ಕೆರೆ ಹಾವು, ಮಕ್ಕಳು, ವಿವಾಹಿತರು ಕಂಡರೆ ಶುಭ ಎನ್ನುತ್ತಾರೆ.
Advertisement
ಕೋಳಿಗಳ ಹೆಸರುಅಂಕದ ಕೋಳಿಗಳನ್ನು ಅದರ ಬಣ್ಣ ಹಾಗೂ ಹಾವಭಾವಕ್ಕೆ ಅನುಗುಣವಾಗಿ ಕರೆಯಲಾಗುತ್ತದೆ. ಬೊಳ್ಳೆ (ಬಿಳಿ ಕೋಳಿ),
ಕಪ್ಪು ಗಿಡಿಯೆ(ಕಪ್ಪು ಚುಕ್ಕಿಯ ಕೋಳಿ), ಪರಂ ದ್ ಗಿಡಿಯೆ( ಹಳದಿ ಚುಕ್ಕಿಯ ಕೋಳಿ), ಕರ್ಬೋಳ್ಳೆ (ಕಪ್ಪು ,ಬಿಳಿ), ಉರ್ಯೆ (ಕೆಂಪು ಕಪ್ಪು ), ಪೆರಡಿಂಗೆ (ಹೇಂಟೆ ತರ ಇರುವ ಹುಂಜ), ಮೈಪೆ ಹೀಗೆ ಬಣ್ಣದ ಮೇಲೆ ಕೋಳಿಗಳಿಗೆ ಹೆಸರಿಡಲಾಗುತ್ತದೆ. ಬೆಂಗಳೂರು ಕಂಬಳಕ್ಕೆ 100ರಿಂದ 150 ಫೈಟರ್ ಕೋಳಿ ತರಲಾಗಿದೆ. ಇವುಗಳ ಬೆಲೆ 5,000ರೂ.ನಿಂದ 7,000 ರೂ. ರವರೆಗೆ ಇದೆ.
●ರಮೇಶ್, ಫೈಟರ್ ಕೋಳಿ ಮಾಲೀಕ.