ಬೆಂಗಳೂರು: ರಾಜಧಾನಿಯಲ್ಲಿ ಸಂಭವಿಸಿದ ಮತ್ತೊಂದು ಅನುಮಾನಾಸ್ಪದ ಸ್ಫೋಟವು ಹಲವು ಆಯಾಮಗಳಲ್ಲಿ ತನಿಖೆ (Investigation) ನಡೆಸಲು ಪೊಲೀಸರು (Police) ಮುಂದಾಗಿದ್ದಾರೆ. ನಗರದ ಜೆಪಿ ನಗರದ ಉಡುಪಿ ಉಪಹಾರದ ಬಳಿಯ ಮನೆಯೊಂದರಲ್ಲಿ ನಡೆದ ಕುಕ್ಕರ್ ಸ್ಫೋಟ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (NIA) ತಂಡವೂ ವಿವರ ಕಲೆ ಹಾಕಲು ಸ್ಥಳಕ್ಕೆ ಭೇಟಿ ನೀಡಿದೆ.
ಜೆಪಿ ನಗರದಲ್ಲಿಸೋಮವಾರ ಬೆಳಿಗ್ಗೆ ನಡೆದಿರುವ ಕುಕ್ಕರ್ ಸ್ಫೋಟದಿಂದ ದಿಲ್ಲಿ ಮೂಲದ ಮೋಸಿನ್ (23) ಹಾಗೂ ಖಾದರ್ ಖಾನ್ (27) ಗಾಯಗೊಂಡಿದ್ದರು. ಸ್ಫೋಟದ ಶಬ್ದ ಬರುತ್ತಿದ್ದಂತೆ ಸ್ಥಳೀಯರು ಬಂದು ಗಾಯಾಳುಗಳ ಆಸ್ಪತ್ರೆಗೆ ಕರೆದೊಯ್ದರು. ಸ್ಪೋಟದ ತೀವ್ರತೆಗೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ.
ಸ್ಥಳೀಯ ಪೊಲೀಸರ ಸಹಕಾರದಲ್ಲಿ ಪರಿಶೀಲನೆ:
ಕುಕ್ಕರ್ ಬ್ಲಾಸ್ಟ್‌ಗಿಂತಲೂ ತೀವ್ರವಾಗಿ ಸ್ಪೋಟ ನಡೆದಿದ್ದು, ಸ್ಪೋಟದ ತೀವ್ರತೆಗೆ ಕೊಠಡಿ ಸಂಪೂರ್ಣ ಛಿದ್ರವಾಗಿದೆ. ಸ್ಪೋಟದ ತೀವ್ರತೆಯ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕುಕ್ಕರ್ ಸ್ಪೋಟಕ್ಕಿಂತ ತೀವ್ರತರವಾದ ಹಾನಿ ಹಿನ್ನೆಲೆಯಲ್ಲಿ ಈ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಎನ್ ಐಎ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಸಾಥ್ ನೀಡಿದ್ದು, ಗಾಯಗೊಂಡ ಯುವಕರ ಪೂರ್ವಾಪರವನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ಒಬ್ಬ ಯುವಕ ಮೃತ್ಯು: ಸೋಮವಾರ ಬೆಳಿಗ್ಗೆ ನಡೆದಿರುವ ಕುಕ್ಕರ್ ಸ್ಫೋಟದಲ್ಲಿ ಗಾಯಗೊಂಡವರಲ್ಲಿ ಒಬ್ಬ ಮೋಸಿನ್ ಎಂಬ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಹಿಂದೆ ಬ್ರೂಕ್‌ಫೀಲ್ಢ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ಸಿಲಿಂಡರ್ ಸ್ಫೋಟವೆಂದು ಮೊದಲು ಅನುಮಾನಿಸಿ ಬಳಿಕ ಉಗ್ರಕೃತ್ಯವೆಂದು ತಿಳಿದು ಬಂದಿತ್ತು. ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ 10 ಮಂದಿ ಗಾಯಗೊಂಡಿದ್ದರು.