Advertisement

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

10:07 AM Nov 08, 2024 | Team Udayavani |

ಬೆಂಗಳೂರು: ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ತೆರಳಿದ್ದ ಮಹಿಳೆಯೊಬ್ಬರ ಜತೆ ಮದ್ಯದ ಅಮಲಿನಲ್ಲಿ ವೈದ್ಯ ಹಾಗೂ ಪುರುಷ ನರ್ಸ್‌ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಬಗ್ಗೆ ವಸಂತಪುರದ ಮಾರುತಿ ಲೇಔಟ್‌ ನಿವಾಸಿ ಸ್ನೇಹಾ ಭಟ್‌ ನೀಡಿದ ದೂರಿನ ಮೇರೆಗೆ ಪ್ರಗತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯ ಪ್ರದೀಪ್‌ ಮತ್ತು ಬ್ರದರ್‌ ಮಹೇಂದ್ರ ವಿರುದ್ಧ ಗಂಭೀರ ಸ್ವರೂಪವಲ್ಲದ ಪ್ರಕರಣವನ್ನು ಕುಮಾರಸ್ವಾಮಿ ಲೇಔಟ್‌ ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

ಆರೋಪವೇನು?: ನ.3ರಂದು ಸ್ನೇಹಭಟ್‌ ಅನಾರೋಗ್ಯ ನಿಮಿತ್ತ ವಸಂತಪುರ ಮುಖ್ಯರಸ್ತೆಯಲ್ಲಿರುವ ಪ್ರಗತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ತಮ್ಮ ಕರ್ತವ್ಯ ಮುಗಿದಿದ್ದರೂ ವೈದ್ಯ ಪ್ರದೀಪ್‌ ಮತ್ತು ಬ್ರದರ್‌ ಮಹೇಂದ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಮದ್ಯದ ಅಮಲಿನಲ್ಲಿದ್ದ ಇಬ್ಬರು ಸ್ನೇಹಾ ಭಟ್‌ ಕೈಗೆ ಇಂಜೆಕ್ಷನ್‌ ನೀಡುವಾಗ ನಾಲ್ಕೈದು ಕಡೆಗೆ ಚುಚ್ಚಿದ್ದಾರೆ.

ಅದನ್ನು ಪ್ರಶ್ನಿಸಿದ್ದಕ್ಕೆ ದೂರುದಾರ ಮಹಿಳೆ ಜತೆ ಇಬ್ಬರು ಅಸಭ್ಯವಾಗಿ ವರ್ತಿಸಿ, ಮಾತನಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಇಬ್ಬರು ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಸಂಬಂಧಿಕರಿಂದ ಸಿಬ್ಬಂದಿಗೆ ತರಾಟೆ: ಮದ್ಯದ ಅಮಲಿನಲ್ಲಿದ್ದ ವೈದ್ಯ ಹಾಗೂ ಬ್ರದರ್‌ ವಿರುದ್ಧ ದೂರುದಾರೆ ಸ್ನೇಹಭಟ್‌ ಸಂಬಂಧಿಕರು ಆಸ್ಪತ್ರೆಯಲ್ಲೇ ಇಬ್ಬರನ್ನೂ ತರಾಟೆ ತೆಗೆದುಕೊಂಡಿದ್ದಾರೆ. ಸಂಬಂಧಿಗಳ ಆಕ್ರೋಶ ಹೆಚ್ಚಾಗುತ್ತಿದ್ದಂತೆ ವೈದ್ಯ ಸೇರಿ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ. ಮದ್ಯ ಸೇವಿಸಿ ಚಿಕಿತ್ಸೆ ನೀಡಿದ ವೈದ್ಯ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಆಗಬೇಕೆಂದು ರೋಗಿ ಹಾಗೂ ಸಂಬಂಧಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next