Advertisement

ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಂದು ಕತೆ ಕಟ್ಟಿದಳು!

10:58 PM Oct 27, 2022 | Team Udayavani |

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆಗೈದ ಆರೋಪದಲ್ಲಿ  ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕೊಂಡಪ್ಪಲೇಔಟ್‌ ನಿವಾಸಿ ಶ್ವೇತಾ (22) ಮತ್ತು ಆಕೆಯ ಪ್ರಿಯಕರ ಸುರೇಶ್‌ ಅಲಿಯಾಸ್‌ ಮೂಲಿ ಸೂರಿ (25) ಬಂಧಿತರು. ಆರೋಪಿಗಳು ಅ.21ರಂದು ಕೊಂಡಪ್ಪಲೇಔಟ್‌ನಲ್ಲಿ ಚಂದ್ರಶೇಖರ್‌(33) ಎಂಬವರನ್ನು ಮರ್ಮಾಂಗ ಹಾಗೂ ತಲೆಗೆ ಹೊಡೆದು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಆಂಧ್ರಪ್ರದೇಶದ ಹಿಂದೂಪುರ ಮೂಲದ ಚಂದ್ರಶೇಖರ್‌ ನೇಯ್ಗೆ ಕೆಲಸ ಮಾಡುತ್ತಿದ್ದರು.  ಪತ್ನಿ ಶ್ವೇತಾ ಎಂಎಸ್ಸಿ ಪದವೀಧರೆಯಾಗಿದ್ದಳು. ಆಕೆ  ತನ್ನ  ಊರಿನ ಸುರೇಶ್‌ ಎಂಬಾತನನ್ನು ಪ್ರೀತಿಸುತ್ತಿದ್ದು, ದೈಹಿಕ ಸಂಪರ್ಕ ಕೂಡ ಹೊಂದಿದ್ದರು.

ಶ್ವೇತಾ ಪೋಷಕರ ಒತ್ತಾಯದ ಮೇರೆಗೆ ಚಂದ್ರಶೇಖರ್‌ನನ್ನು ಮದುವೆಯಾಗಿದ್ದಳು.  ಆದರೆ ದಂಪತಿ ನಡುವೆ ಉತ್ತಮ ಬಾಂಧವ್ಯ ಇರಲಿಲ್ಲ.  ವಯಸ್ಸು ಹಾಗೂ ವಿದ್ಯೆಯ ಅಂತರವಿದೆ ಎಂದು ಆಕೆಯೇ ಪತಿಯಿಂದ ದೂರ ಇದ್ದಳು. ಏತ ನ್ಮ ಧ್ಯೆ, ಪೆನಕೊಂಡದಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸುರೇಶ್‌ನನ್ನು ಆಗಾಗ್ಗೆ ಬೆಂಗಳೂರಿಗೆ ಕರೆಸಿಕೊಂಡು  ದೈಹಿಕ ಸಂಪರ್ಕ ಹೊಂದುತ್ತಿದ್ದಳು ಎಂಬುದು ತನಿಖೆಯಿಂದ ಗೊತ್ತಾಗಿದೆ. ಈ ವಿಚಾರ ತಿಳಿದ ಪತಿಯು ಆಕೆಗೆ  ಎಚ್ಚರಿಕೆ ನೀಡಿದ್ದ ಎನ್ನಲಾಗಿದ್ದು, ಇದೇ ಕಾರಣದಿಂದ  ಪತಿಯ ಹತ್ಯೆಗೆ ಶ್ವೇತಾ ಸಂಚು ರೂಪಿಸಿದ್ದಳು  ಎಂದು ಪೊಲೀಸರು ಹೇಳಿದರು.

ಪ್ರಿಯಕರನ ಕರೆಸಿ ಹತ್ಯೆ:

Advertisement

ಅ.21ರಂದು  ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಟೆರೇಸ್‌ ಮೇಲೆ ಅಡಗಿಸಿಟ್ಟಿದ್ದಳು.  ರಾತ್ರಿ 9 ಗಂಟೆ ಸುಮಾರಿಗೆ ಪತಿಯನ್ನು ಅನಗತ್ಯ ನೆಪ ಹೇಳಿ ಟೆರೇಸ್‌ ಮೇಲೆ ಕಳುಹಿಸಿದ್ದಳು. ಬಳಿಕ ಚಂದ್ರಶೇಖರ್‌ ಅಲ್ಲೇ ಇದ್ದ ಚಾಪೆಯಲ್ಲಿ ಮಲಗಿದ್ದ. ಆ ಹೊತ್ತಿಗೆ ಸುರೇಶ್‌ ಆತನನ್ನು ಹೊಡೆದು  ಪರಾರಿಯಾಗಿದ್ದ. ಬಳಿಕ ಶ್ವೇತಾಳು ಪೊಲೀಸರ ದಿಕ್ಕು ತಪ್ಪಿಸಲು ಸ್ಥಳೀಯರ ನೆರವಿನಿಂದ ಪತಿಯನ್ನು ಆಸ್ಪತ್ರೆಗೆ ಸೇರಿಸಿದ್ದಳು. ಅಲ್ಲಿ ಆತ ಮೃತಪಟ್ಟಿದ್ದ.

ಚಪ್ಪಲಿಯಿಂದ ಹೊಡೆದ ಕತೆ ಕಟ್ಟಿದ ಶ್ವೇತಾ? :

ಶ್ವೇತಾಳನ್ನು ಆಂಧ್ರಪ್ರದೇಶದಲ್ಲಿ ಯುವಕರ ಗುಂಪೊಂದು ಚುಡಾಯಿಸಿತ್ತು. ಈ ವಿಚಾರದಲ್ಲಿ ಶ್ವೇತಾ ಯುವಕರೊಂದಿಗೆ ಗಲಾಟೆವಾಡಿ ಪೊಲೀಸರಿಗೆ  ದೂರು ನೀಡಿದ್ದಳು. ಅನಂತರ ಪೊಲೀಸರು ಈಕೆಯಿಂದಲೇ ಯುವಕರಿಗೆ ಚಪ್ಪಲಿಯಲ್ಲಿ ಹೊಡೆಸಿದ್ದರು ಎಂದು ಹೇಳಲಾಗಿದೆ. ಅದೇ ದ್ವೇಷಕ್ಕೆ ಮಹಿಳೆಯ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಪತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಕಥೆ ಕಟ್ಟಿದ್ದಳು. ಹೀಗಾಗಿ ಪೊಲೀಸರು ಅಂಧ್ರಪ್ರದೇಶದ ಠಾಣೆಗೆ ಮಾಹಿತಿ ನೀಡಿ, ಗಲಾಟೆಯಲ್ಲಿ ಬಂಧನಕ್ಕೊಳಗಾಗಿದ್ದ ಯುವಕರನ್ನು ಕರೆದು ವಿಚಾರಣೆ ನಡೆಸಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಶ್ವೇತಾಳ ಮೇಲೆ ಅನುಮಾನ ಬಂದಿದ್ದು,  ತೀವ್ರ  ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next