Advertisement

Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!

11:36 AM Nov 30, 2024 | Team Udayavani |

ಬೆಂಗಳೂರು: ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊತ್ತನೂರಿನಲ್ಲಿ ಪತ್ನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪತಿ ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ಪ್ರಭು ಜಂಗ್ಲಿ (26) ಎಂಬಾತ ಪತ್ನಿ ಪ್ರಿಯಾಂಕಾ (24) ಮೈ ಮೇಲೆ ಪೆಟ್ರೋಲ್‌ ಸುರಿದು ಬೆಂಕಿಯಿಟ್ಟಿದ್ದು, ಅದೃಷ್ಟವಶಾತ್‌ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎರಡು ವರ್ಷದ ಹಿಂದೆ ಪ್ರಿಯಾಂಕಾ ಜೊತೆಗೆ ಮದುವೆಯಾಗಿದ್ದ ಪ್ರಭು, ಇತ್ತೀಚಿಗೆ ಆಕೆಯ ಮೇಲೆ ಅನುಮಾನ ಪಟ್ಟು ಪದೇ ಪದೆ ಜಗಳವಾಡುತ್ತಿದ್ದ. ಕಳೆದ ಬುಧವಾರ ಸಂಜೆ ಪೆಟ್ರೋಲ್‌ ತಂದಿದ್ದ ಪ್ರಭು, ತನ್ನ ಪತ್ನಿ ಹಾಗೂ ತನ್ನ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿದ್ದ. ಬೆಂಕಿ ಉರಿ ತಾಳಲಾರದೆ ಕಿರುಚಾಡುತ್ತ ಪ್ರಭು ಮನೆಯಿಂದ ಹೊರಗಡೆ ಓಡಿ ಬಂದಾಗ ಸ್ಥಳಿಯರು ಅಲ್ಲಿಗೆ ಧಾವಿಸಿ ಇಬ್ಬರನ್ನೂ ರಕ್ಷಿಸಿದ್ದಾರೆ. ಬಳಿಕ ದಂಪತಿಯನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಬ್ಬರಿಗೂ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಗಾಯಾಳು ಪ್ರಿಯಾಂಕಾಳ ಹೇಳಿಕೆ ಪಡೆದುಕೊಂಡಿರುವ ಕೋಣನಕುಂಟೆ ಠಾಣೆ ಪೊಲೀಸರು ಆಕೆಯ ಪತಿ ಪ್ರಭು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆಗಿದ್ದೇನು?

Advertisement

ಹೆಂಡತಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪತಿ

ಬಳಿಕ ತನ್ನ ಮೇಲೆಯೇ ಬೆಂಕಿ ಹಚ್ಚಿಕೊಂಡ ಆರೋಪಿ

ಇಬ್ಬರನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಸ್ಥಳೀಯರು

ಪತ್ನಿಯನ್ನು ಅನುಮಾನಿಸಿ ಕೃತ್ಯ ಎಸಗಿದ ಪತಿ, ಕೊತ್ತನೂರಿನಲ್ಲಿ ಘಟನೆ

Advertisement

Udayavani is now on Telegram. Click here to join our channel and stay updated with the latest news.

Next