Advertisement

Bengaluru: ಚಿಂದಿ ಆಯುವವರ ಸೋಗಿನಲ್ಲಿ ಮನೆಗಳ್ಳತನ: ಇಬ್ಬರ ಬಂಧನ

12:58 PM Aug 31, 2024 | Team Udayavani |

ಬೆಂಗಳೂರು: ಕದ್ದ ಬೈಕ್‌ನಲ್ಲೇ ನಗರದೆಲ್ಲೆಡೆ ಸುತ್ತಾಡಿ ರಾತ್ರಿ ವೇಳೆ ಚಿಂದಿ ಆಯುವವರ ಸೋಗಿನಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವೈಟ್‌ ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ವೈಟ್‌ ಫೀಲ್ಡ್‌ ನಿವಾಸಿ ಅಲ್‌ ಮೋಹಿನ್‌ ಮುಲ್ಲಾ (23) ಹಾಗೂ ಮೊಹಮ್ಮದ್‌ ಶಾರಿಫ್ (24) ಬಂಧಿತರು.

ಬಂಧಿತರಿಂದ 5.81 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4 ವಾಚ್‌ ಗಳು, ಕೃತ್ಯಕ್ಕೆ ಬಳಸಿದ್ದ ಬೈಕ್‌ ಅನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳು ಕಳ್ಳತನ ಮಾಡಲೆಂದೇ ನಗರದಲ್ಲಿ ಬೈಕ್‌ಗಳನ್ನು ಕದಿಯುತ್ತಿದ್ದರು. ಕದ್ದ ಬೈಕ್‌ನಲ್ಲಿ ನಗರದ ವಿವಿಧೆಡೆ ಸುತ್ತಾಡಿ ಯಾರೂ ಇಲ್ಲದ ಮನೆಗಳನ್ನು ಗಮನಿ ಸುತ್ತಿದ್ದರು.

ರಾತ್ರಿ ಆಗುತ್ತಿದ್ದಂತೆ ಚಿಂದಿ ಆಯುವ ನೆಪದಲ್ಲಿ ಬೆಳಗ್ಗೆ ಗುರುತಿಸಿದ ಮನೆಗಳ ಬಳಿ ಎಂಟ್ರಿ ಕೊಡುತ್ತಿದ್ದರು. ನಂತರ ಮನೆ ಬೀಗ ಮುರಿದು ಮನೆಗೆ ಚಿನ್ನಾಭರಣ ಕದಿಯು ತ್ತಿದ್ದರು. ಇದೇ ಶೈಲಿಯಲ್ಲಿ ವೈಟ್‌ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಮನೆಯ ವರು ಹೊರಗಡೆ ಹೋಗಿದ್ದಾಗ ಆರೋಪಿಗಳು ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next