Advertisement

Bengaluru: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 23 ಲಕ್ಷ ರೂ. ವಂಚನೆ!

12:17 PM Sep 20, 2024 | Team Udayavani |

ಬೆಂಗಳೂರು: ಬೆಸ್ಕಾಂ, ಕೆಪಿಟಿಸಿಎಲ್‌ ಸೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ 23 ಲಕ್ಷ ರೂ. ವಂಚಿಸಿದ್ದ ಆರೋಪದಡಿ ಹಲಸೂರುಗೇಟ್‌ ಪೊಲೀಸ್‌ ಠಾಣೆಯಲ್ಲಿ ಆರು ಮಂದಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Advertisement

ಮಾದವನಗರ ನಿವಾಸಿ ಲೋಹಿತ್‌ಗೌಡ ಎಂಬುವರು ನೀಡಿದ ದೂರಿನ ಮೇರೆಗೆ ಟಿ.ದಾಸರಹಳ್ಳಿಯ ಪ್ರವೀಣ್‌ ಎಂ. ಸೋಮನಕಟ್ಟಿ (30), ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ವಿಘ್ನೇಶ್‌ ಹೆಗಡೆ (44), ದಾಬಸ್‌ ಪೇಟೆಯ ವೆಂಕಟೇಶಯ್ಯ, ಆರ್‌.ಟಿ ನಗರದ ಶಿವಣ್ಣ, ತಿಪ್ಪಸಂದ್ರದ ಶ್ರೀನಿವಾಸ್‌ (29), ಸಹಕಾರ ನಗರದ ರಜನೀಶ್‌ (42) ಎಂಬುವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ದೂರುದಾರ ಲೋಹಿತ್‌ಗೌಡ ಎಂಬುವರಿಗೆ 2021ರಲ್ಲಿ ಆರೋಪಿಗಳಾದ ಪ್ರವೀಣ್‌ ಹಾಗೂ ವಿಘ್ನೇಶ್‌ ಪರಿಚಯವಾಗಿದ್ದರು. ಈ ವೇಳೆ ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾರೆ. ನಂತರ, ದೂರುದಾರರನ್ನು ಇಬ್ಬರು ಆರೋಪಿಗಳು ಹೋಟೆಲ್‌ವೊಂದಕ್ಕೆ ಕರೆಸಿಕೊಂಡಿದ್ದು, ಅಲ್ಲಿಗೆ ಇತರೆ ಮೂವರು ಆರೋಪಿಗಳು ಬಂದಿದ್ದರು. ಆಗ ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದರು.

ಈ ವೇಳೆ ಆರೋಪಿ ಪ್ರವೀಣ್‌ ತಾನು ಬೆಸ್ಕಾಂ ಉದ್ಯೋಗಿ ಎಂದು ಹೇಳಿಕೊಂಡಿದ್ದ. ವೆಂಕಟೇಶಯ್ಯ ಹಾಗೂ ಶಿವಣ್ಣ ಸಹ ರೈಲ್ವೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಶ್ರೀನಿವಾಸ್‌ ಬೆಸ್ಕಾಂನ ರೀಡರ್‌ ಎಂದು ಪರಿಚಯಿಸಿಕೊಂಡಿದ್ದ. ಹೀಗೆ ನಕಲಿ ಗುರುತಿನ ಚೀಟಿ ತೋರಿಸಿದ್ದರು.

ಆರೋಪಿಗಳ ಮಾತು ನಂಬಿದ ಲೋಹಿತ್‌ಗೌಡ, ತಮಗೆ ಪರಿಚಯ ಇದ್ದವರಿಗೂ ಉದ್ಯೋಗದ ಬಗ್ಗೆ ಮಾಹಿತಿ ನೀಡಿದ್ದರು. ಉದ್ಯೋಗ ಆಕಾಂಕ್ಷಿಗಳು ಸೇರಿ ಒಟ್ಟು 23 ಲಕ್ಷ ರೂ. ನೀಡಿದ್ದರು. ಆ ಬಳಿಕ ಲೋಹಿತ್‌ ಗೌಡ ಸೇರಿ ಕೆಲ ಆಕಾಂಕ್ಷಿಗಳಿಗೆ ಉದ್ಯೋಗದ ನಕಲಿ ನೇಮಕಾತಿ ಪತ್ರ ನೀಡಿದ್ದರು. ಅಲ್ಲದೇ ಹೊರಗುತ್ತಿಗೆ ನೌಕರಿ ಕೆಲಸಕ್ಕೆ ಸೇರಿಸಿ, 18 ತಿಂಗಳ ನಂತರ ಕೆಲಸ ಕಾಯಂ ಆಗಲಿದೆಯೆಂದು ಹೇಳಿದ್ದರು. ಬಳಿಕ ಅದನ್ನು ಇಲಾಖೆಗೆ ಹೋಗಿ ತೋರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ.

Advertisement

ವಂಚನೆ ಆಗಿದ್ದು ಹೇಗೆ?  ಬೆಸ್ಕಾ, ರೈಲ್ವೆ ಉದ್ಯೋಗಿ ಎಂದು ಹೇಳಿಕೊಂಡಿದ್ದ ಆರೋಪಿಗಳು  ಉದ್ಯೋಗ ಆಕಾಂಕ್ಷಿಗಳಿಗೆ ನಕಲಿ ಗುರುತಿನ ಚೀಟಿ ತೋರಿಸಿದ್ದರು  ನೌಕರಿ ಕೊಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಂದ 23 ಲಕ್ಷ ರೂ. ವಸೂಲಿ  ಬಳಿಕ ಕೆಲವರಿಗೆ ಉದ್ಯೋಗದ ನಕಲಿ ನೇಮಕಾತಿ ಪತ್ರ ನೀಡಿದ್ದರು  ಇಲಾಖೆಗೆ ಹೋಗಿ ನೇಮಕಾತಿ ಪತ್ರ ತೋರಿಸಿದಾಗ ವಂಚನೆ ಬೆಳಕಿಗೆ

Advertisement

Udayavani is now on Telegram. Click here to join our channel and stay updated with the latest news.

Next