Advertisement
ಇದೇ ಸಂದರ್ಭದಲ್ಲಿ ಆಕೆಯ 2ನೇ ಪತಿಗೆ ಜನಿಸಿದ ಮಗುವನ್ನೂ ಕೊಲ್ಲಲು ಯತ್ನಿಸಿದ್ದು, ಆದರೆ, ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಸಾರಾಯಿ ಪಾಳ್ಯದಲ್ಲಿ ಪ್ರಕರಣ ನಡೆದಿದ್ದು, ಪಶ್ಚಿಮ ಬಂಗಾಳದ ಕೋಲ್ಕತಾ ಮೂಲದ ತಬ್ಸೆನ್ ಬೇಬಿ (32) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಪತಿ ಶೇಕ್ ಸುಹೈಲ್ನನ್ನು ಬಂಧಿಸಲಾಗಿದೆ.
ಮಕ್ಕಳನ್ನು ತಬ್ಸೆನ್ ಬೇಬಿ ಸಾಕುತ್ತಿದ್ದಳು ಎಂದು ಪೊಲೀಸರು ಹೇಳಿದರು.
Related Articles
ಇದೇ ವೇಳೆ ಮೊದಲ ಪತ್ನಿ ತಬ್ಸೆನ್ ಬೇಬಿ ನದೀಮ್ನಿಂದ ಒಂದು ಮಗು ಪಡೆದುಕೊಂಡಿದ್ದಾಳೆ ಎಂಬ ವಿಚಾರ ತಿಳಿದ ಶೇಕ್, ಆಕೆಗೆ ಕರೆ ಮಾಡಿ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಪೊಲೀಸರು ಹೇಳಿದರು.
Advertisement
ಮನೆಗೆ ಬಂದು ಕೊಲೆಕೆಲ ದಿನಗಳ ಹಿಂದೆ ಪತ್ನಿಗೆ ಕರೆ ಮಾಡಿದ ಶೇಕ್ ಸುಹೈಲ್ ಮನೆಗೆ ಬರುವುದಾಗಿ ಹೇಳಿದ್ದಾನೆ. ಸೋಮವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಆರೋಪಿ, ನದೀಮ್ನಿಂದ ಮಗು ಪಡೆದ ವಿಚಾರಕ್ಕೆ ತಬ್ಸೆನ್ ಬೇಬಿ ಜತೆ ವಾಗ್ವಾದ ನಡೆಸಿ, ಹಲ್ಲೆಗೆ ಯತ್ನಿಸಿದ್ದಾನೆ. ಆಗ 15 ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದ ತಬ್ಸೆನ್ ಬೇಬಿ ಸಹೋದರಿ ಗಲಾಟೆ ಬಿಡಿಸಲು ಯತ್ನಿಸಿದ್ದಾಳೆ. ಆಕೆ ಮೇಲೂ ಹಲ್ಲೆ ನಡೆಸಿದ ಆರೋಪಿ, ಕೃತ್ಯ ಎಸಗಲೆಂದೆ ತಂದಿದ್ದ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಹತ್ಯೆಗೈದಿದ್ದಾನೆ.