Advertisement

Bengaluru: ಪುರುಷ ವೇಷ ಧರಿಸಿ ಕನ್ನ ಹಾಕುತ್ತಿದ್ದ ಕಳ್ಳಿ ಸೆರೆ!

02:34 PM Aug 24, 2024 | Team Udayavani |

ಬೆಂಗಳೂರು: ಪುರುಷರ ವೇಷ ಧರಿಸಿ ಮನೆ, ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರು ಮಹಿಳೆಯರ ಗ್ಯಾಂಗ್‌ನ ಓರ್ವ ಸದಸ್ಯೆ ಬಾಗಲಗುಂಟೆ ಠಾಣಾ ಪೊಲೀಸರ ಬಲೆಗೆ ಬಿದ್ದಿದ್ದು, ಆಕೆಯಿಂದ 5 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಬಾಗಲಗುಂಟೆಯ ನಿಲೂಪರ್‌ (22) ಬಂಧಿತೆ.

Advertisement

ಆರೋಪಿತ ಮಹಿಳೆ ನಿಲೂಪರ್‌ ಅಪ್ರಾಪ್ತ ಬಾಲಕಿ ಸಹಿತ ನಾಲ್ವರು ಮಹಿಳೆಯರ ತಂಡ ಹೊಂದಿದ್ದಳು. ಈ ಪೈಕಿ ತಂಡದಲ್ಲಿದ್ದ ಮೂವರು ಮಹಿಳೆಯರು ಪುರುಷರ ವೇಷ ಧರಿಸಿ ಆಟೋ ಚಲಾಯಿಸಿಕೊಂಡು ಬಂದು ಅಂಗಡಿ ಮನೆಗಳಲ್ಲಿ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಅದೇ ಸಮಯದಲ್ಲಿ ಆರೋಪಿಗಳ ಗುಂಪಿನಲ್ಲಿರುವ ಅಪ್ರಾಪ್ತ ಬಾಲಕಿಯು ಮನೆ ಅಥವಾ ಅಂಗಡಿಗಳಲ್ಲಿ ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದಳು.

ಸಿಕ್ಕಿ ಬಿದ್ದಿದ್ದು ಹೇಗೆ?: ಆ.2ರಂದು ಬಾಗಲಗುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಗಡಿಗೆ ಹೊಂದಿಕೊಂಡಿರುವ ಮನೆಯೊಂದರಲ್ಲಿ ಆರೋಪಿಗಳು ಇದೇ ರೀತಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆ.15ರಂದು ಡಿ.ಜೆ. ಹಳ್ಳಿ ಸಮೀಪದ ಶಾಂಪುರ ಬಳಿ ನಿಲೂಪರ್‌ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇನ್ನೂ 55 ಗ್ರಾಂ ಚಿನ್ನದ ಒಡವೆಗಳನ್ನು ತಲೆಮರೆಸಿಕೊಂಡಿರುವ ಆರೋಪಿತೆಯರ ಪೈಕಿ ಓರ್ವಳು ತೆಗೆದುಕೊಂಡು ಹೋಗಿರುವುದಾಗಿ ನಿಲೂಪರ್‌ ಮಾಹಿತಿ ನೀಡಿದ್ದಾಳೆ. ಇನ್ನು ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next