Advertisement
ಕಾಶಿನಗರ ನಿವಾಸಿ ತೇಜಸ್ (14) ಹತ್ಯೆಗೀಡಾದ ಬಾಲಕ. ಕೃತ್ಯ ಎಸಗಿದ ಆತನ ತಂದೆ ರವಿಕುಮಾರ್ (44)ನನ್ನು ಬಂಧಿಸಲಾಗಿದೆ. ಆರೋಪಿ ರವಿ ಕುಮಾರ್, ಪತ್ನಿ ಶಶಿಕಲಾ ಮತ್ತು ಇಬ್ಬರು ಮಕ್ಕಳಾದ ತೇಜಸ್ ಮತ್ತು ವಿಶಾಲ್ ಜತೆ ಕಾಶಿನಗರದಲ್ಲಿ ವಾಸವಾಗಿದ್ದರು. ಆರೋಪಿ ಮರಗೆಲಸ ಮಾಡುತ್ತಿದ್ದು ಹಿರಿಯ ಪುತ್ರ ವಿಶಾಲ್ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿ. 2ನೇ ಪುತ್ರ ತೇಜಸ್ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ದುಶ್ಚಟಗಳ ದಾಸನಾಗಿದ್ದ. ಇತ್ತ ತಂದೆ ರವಿಕುಮಾರ್ ಮದ್ಯ ವ್ಯಸನಿಯಾಗಿದ್ದು ಸರಿಯಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲ. ಶುಕ್ರವಾರ ಬೆಳಗ್ಗೆ ಮೊಬೈಲ್ ರಿಪೇರಿ ವಿಚಾರವಾಗಿ ತೇಜಸ್ ಪೋಷಕರ ಜತೆ ಗಲಾಟೆ ಮಾಡಿದ್ದಾನೆ. ಅದರಿಂದ ಕೋಪಗೊಂಡ ತಂದೆ ಹಿಗ್ಗಾಮುಗ್ಗ ಥಳಿಸಿದ್ದರಿಂದ ಮೃತಪಟ್ಟಿದ್ದಾನೆ. Advertisement
Bengaluru; ಮೊಬೈಲ್ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !
01:23 AM Nov 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.