Advertisement

ಪತ್ನಿಯ ಮಾಜಿ ಪತಿ ಕೊಲೆಗೆ ಯತ್ನ : ರೌಡಿಶೀಟರ್‌ ಸೇರಿ ಆರು ಮಂದಿ ಬಂಧನ

08:45 PM Mar 26, 2022 | Team Udayavani |

ಬೆಂಗಳೂರು: ಚಿಕ್ಕಪ್ಪನ ಸಾವಿನ ಸುದ್ದಿ ತಿಳಿಸಲು ಮಾಜಿ ಪತ್ನಿಗೆ ಕರೆ ಮಾಡಿದವನಿಗೆ ಹಲ್ಲೆ ನಡೆಸಿ ಕೊಲೆಗೈಯಲು ಯತ್ನಿಸಿದ ಮಹಿಳೆಯ ಪತಿ, ರೌಡಿಶೀಟರ್‌ ಹಾಗೂ ಆತನ ಐವರು ಸಹಚರರನ್ನುಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ರಿಯಲ್‌ ಎಸ್ಟೇಟ್‌ ಉದ್ಯಮಿ ಮರಿಯನಪಾಳ್ಯದ ಶ್ರೀಕಾಂತ್‌ ಹಲ್ಲೆಗೊಳಗಾದವರು. ಕೃತ್ಯ ಎಸಗಿದ ಚಂದ್ರಲೇಔಟ್‌ ನಿವಾಸಿ ರೌಡಿಶೀಟರ್‌ ಅರುಣ್‌ ನಾಯ್ಡು, ಆತನ ಸಹಚರರಾದ ಕಾರ್ತಿಕ್‌ ಜೆರಾಲ್ಡ್‌, ಯಶವಂತ, ವಿಶಾಲ್‌, ಸಂಜಯ್‌, ಉಮೇಶ್‌ನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಏನಿದು ಪ್ರಕರಣ?

ಮರಿಯಪ್ಪನ ಪಾಳ್ಯದಲ್ಲಿ ಪೋಷಕರ ಜತೆ ವಾಸವಾಗಿದ್ದ ಶ್ರೀಕಾಂತ್‌, ಚಂದ್ರಲೇಔಟ್‌ನಲ್ಲಿ ತನ್ನ ಚಿಕ್ಕಪ್ಪ ಕುಮಾರ್‌ಗೆ ಸೇರಿ ಸಾಯಿರಾಂ ಇನ್ಸ್‌ಟ್ಯೂಟ್‌ ಕ್ಲಬ್‌ನಲ್ಲಿ ಶ್ರೀಕಾಂತ್‌ ಕೆಲಸ ಮಾಡುತ್ತಿದ್ದರು. ಈ ವೇಳೆ ವಿಚ್ಛೇತ ಮಹಿಳೆಯೊಬ್ಬರು ಪರಿಚಯವಾಗಿದ್ದು, ಅವರೊಂದಿಗೆ ಸಲುಗೆ ಬೆಳೆಸಿಕೊಂಡಿದ್ದರು. ಏಳು ವರ್ಷಗಳ ಹಿಂದೆ ಆಕೆಯನ್ನು ಮದುವೆಯಾಗಿ ಉಲ್ಲಾಳದ ದೊಡ್ಡಬಸ್ತಿಯಲ್ಲಿ ಮನೆ ಮಾಡಿ ಇರಿಸಿದ್ದರು. ಆದರೆ, ಶ್ರೀಕಾಂತ್‌ ತಂದೆ ತಾಯಿಗೆ ತಿಳಿದು ಕುಟುಂಬದಲ್ಲಿ ಜಗಳವಾಗಿ ಮಹಿಳೆಯನ್ನು ಬಿಟ್ಟುಬಿಡುವಂತೆ ಸೂಚಿಸಿದ್ದರು. ಹೀಗಾಗಿ ಆಕೆಯಿಂದ ಶ್ರೀಕಾಂತ್‌ ಅಂತರ ಕಾಯ್ದುಕೊಂಡಿದ್ದರು. ಈ ನಡುವೆ ಮಹಿಳೆಯನ್ನು ಮೂರು ವರ್ಷಗಳ ಹಿಂದೆ ಉತ್ತರಹಳ್ಳಿಯ ಚಿಕ್ಕಕಲ್ಲಸಂದ್ರದ ರೌಡಿಶೀಟರ್‌ ಅರುಣ್‌ ನಾಯ್ಡು ವಿವಾಹವಾಗಿದ್ದ.

ಇದನ್ನೂ ಓದಿ :ಪರಿವೀಕ್ಷಕರನ್ನು ಕಪ್ಪುಪಟ್ಟಿಗೆ ಸೇರಿಸಲು ಇದು ಸಕಾಲ: ಹೈಕೋರ್ಟ್‌

Advertisement

ಈಮಧ್ಯೆ ಮಾ.19ರಂದು ಶ್ರೀಕಾಂತ್‌ ಚಿಕ್ಕಪ್ಪ ಕುಮಾರ್‌ ನಿಧನರಾದ ಹಿನ್ನೆಲೆಯಲ್ಲಿ ಎಲ್ಲರಿಗೂ ವಿಷಯ ತಿಳಿಸುವಂತೆ ತನ್ನ ಮಾಜಿ ಪತ್ನಿಗೂ ಕೂಡ ಸಾವಿನ ವಿಷಯ ತಿಳಿಸಲು ಮಧ್ಯರಾತ್ರಿಯಲ್ಲಿ ಮಹಿಳೆಗೆ ಕರೆ ಮಾಡಿದ್ದರು. ಆದರೆ, ಕರೆ ಸ್ವೀಕರಿಸಿರಲಿಲ್ಲ. ಅದನ್ನು ತಪ್ಪಾಗಿ ಅರ್ಥೈಸಿಕೊಂಡ  ಅರುಣ್‌ ನಾಯ್ಡು ತನ್ನ ಸಹಚರರ ಜತೆ ಸೇರಿ ಮರು ದಿನ ಶ್ರೀಕಾಂತ್‌ನನ್ನು ಕರೆದೊಯ್ದ “ಏಕೆ ಮಧ್ಯ ರಾತ್ರಿಯಲ್ಲಿ ತನ್ನ ಪತ್ನಿಗೆ ಕರೆ ಮಾಡಿದ್ದೀಯಾ? ಎಂದು ಹಲ್ಲೆ ನಡೆಸಿದ್ದ. ಅಲ್ಲದೆ, ತಾನು ರಾಜಾಜಿನಗರ ಪೊಲೀಸ್‌ ಠಾಣೆ ರೌಡಿಶೀಟರ್‌, ನನ್ನ ತಂಟೆಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಸಿ, ಪರಾರಿಯಾಗಿದ್ದರು. ಈ ಸಂಬಂಧ ಶ್ರೀಕಾಂತ್‌ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next