ಬೆಂಗಳೂರು: ಅಡುಗೆ ಪಾತ್ರೆಯಲ್ಲಿ ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ ಮಾದಕ ವಸ್ತು ಸಾಗಿಸುತ್ತಿದ್ದ ಪ್ರಕರಣವನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ.
ಸುಮಾರು 9.23 ಕೋಟಿ ರೂ. ಮೌಲ್ಯದ 46.7 ಕೆ.ಜಿ. ತೂಕದ ಎಫೆಡ್ರಿನ್ ಎಂಬ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಇಂಟೆಲಿಜೆನ್ಸ್ ಆ್ಯಂಡ್ ಇನ್ ವೆಸ್ಟಿಗೇಷನ್ ಬ್ರಾಂಚ್, ಏರ್ ಕಾರ್ಗೊ ಕಮಿಷನರೇಟ್ ಅಧಿಕಾರಿಗಳು, ವಿಮಾನ ನಿಲ್ದಾಣದ ಎಕ್ಸ್‌ಪೋರ್ಟ್ ಶೆಡ್‌ನಲ್ಲಿ ತಪಾಸಣೆ ಮಾಡುವಾಗ ಈ ಮಾದಕ ವಸ್ತು ಸಿಕ್ಕಿದೆ. ಚೆನ್ನೈ ಮೂಲದ ವ್ಯಕ್ತಿ, ಊಟದ ಸ್ಟಿಲ್ ಡಬ್ಬಿಗಳಲ್ಲಿ ಮಾದಕವಸ್ತು ತುಂಬಿ ಆಸ್ಟ್ರೇಲಿಯಾಗೆ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ.
ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ : ಕಾಪು: ಮಲ್ಲಾರು – ಪಕೀರಣಕಟ್ಟೆ ಗುಜರಿ ಅಂಗಡಿಯಲ್ಲಿ ಸ್ಪೋಟ, ಇಬ್ಬರ ಸಜೀವ ದಹನ ಶಂಕೆ ?