Advertisement

ಡೈರಿ ಎಫೆಕ್ಟ್ ಕೊನೆಗೂ ವಿವಾದಿತ ಸ್ಟೀಲ್‌ ಫ್ಲೈ ಓವರ್‌ ಯೋಜನೆ ರದ್ದು?

11:57 AM Mar 02, 2017 | Team Udayavani |

ಬೆಂಗಳೂರು : ಕಿಕ್‌ ಬ್ಯಾಕ್‌ ಸೇರಿದಂತೆ ಹಲವು ಬಗೆಯ ವಿವಾದಗಳಿಗೆ ಗುರಿಯಾಗಿದ್ದ ಸುಮಾರು 1,800 ಕೋಟಿ ರೂ. ವೆಚ್ಚದ ಸ್ಟೀಲ್‌ ಫ್ಲೈ ಓವರ್‌ ಯೋಜನೆಗೆ ಎಳ್ಳು ನೀರು ಬಿಡಲು ರಾಜ್ಯ ಸರಕಾರ ನಿರ್ಧರಿಸಿರುವುದಾಗಿ ವರದಿಯಾಗಿದೆ.

Advertisement

ರಾಜ್ಯ ರಾಜಕೀಯ ರಂಗದಲ್ಲಿ ಹಲವು ಕಂಪನಗಳನ್ನು ಮೂಡಿಸಿದ್ದ ಗೋವಿಂದರಾಜು ಡೈರಿಯಲ್ಲಿ ಈ ಯೋಜನೆಗೆ 65 ಕೋಟಿ ರೂ. ಕಿಕ್‌ ಬ್ಯಾಕ್‌ ಸಂದಾಯವಾಗಿರುವುದಾಗಿ ಬರೆಯಲಾಗಿತ್ತು. 

ಎಲ್ಲ ಬಗೆಯ ವಿವಾದಗಳಿಂದ ಮುಕ್ತವಾಗಲು ಈಗ ಸ್ಟೀಲ್‌ ಫ್ಲೈ ಓವರ್‌ ಯೋಜನೆಯನ್ನೇ ಕೈಬಿಡಲು ಸರಕಾರ ಮುಂದಾಗಿರುವುದಾಗಿ ತಿಳಿದುಬಂದಿದೆ. ಈ ಕುರಿತಾದ ಅಂತಿಮ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಗೊತ್ತಾಗಿದೆ.

ಸ್ಟೀಲ್‌ ಫ್ಲೈ ಓವರ್‌ ಯೋಜನೆಗೆ ಬೆಂಗಳೂರಿನ ಪ್ರಜ್ಞಾವಂತ ನಾಗರಿಕರು, ಪರಿಸರ ಪ್ರೇಮಿಗಳು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ಈ ಯೋಜನೆಯನ್ನು ತಾನು ಕೈಗೊಂಡೇ ಸಿದ್ಧ ಎಂದು ಸರಕಾರ ಹೇಳಿಕೊಂಡಿತ್ತು. ತದನಂತರದಲ್ಲಿ ಗೋವಿಂದರಾಜು ಡೈರಿಯಲ್ಲಿ 65 ಕೋಟಿ ರೂ. ಹಣ ಈ ಯೋಜನೆಗಾಗಿ ಸಂದಾಯವಾಗಿದೆ ಎಂದು ಬರೆಯಲಾಗಿದ್ದುದು ಕಂಡು ಬಂದಿತ್ತು. ಇದು ನೇರವಾಗಿ ಮುಖ್ಯಮಂತ್ರಿಗೇ ಸಂದಾಯವಾಗಿರುವ ಕಿಕ್‌ ಬ್ಯಾಕ್‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next