Advertisement
ಇಲ್ಲಿನ ಮೋತಿಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ಬುಲ್ಸ್ 24-20 ರಿಂದ ಪುನೇರಿ ತಂಡವನ್ನು ಮಣಿಸಿತು. ಬೆಂಗಳೂರು ಗೆಲುವಿಗೆ ಕಾರಣವಾಗಿದ್ದು ಡಿಫೆಂಡರ್‌ಗಳ ಆಟ. ಅದರಲ್ಲೂ ಸುನೀಲ್ ಜೈಪಾಲ್ (4 ಅಂಕ), ಮಹೀಂದರ್ ಸಿಂಗ್ (4 ಅಂಕ) ಹಾಗೂ ಅಜಯ್ ಕುಮಾರ್ (3 ಅಂಕ) ಬುಲ್ಸ್ ಗೆಲುವಿನ ರೂವಾರಿಗಳು. ತಾರಾ ರೈಡರ್ ರೋಹಿತ್ ಕುಮಾರ್ ಮೊದಲ ಅವಧಿಯಲ್ಲಿ ಸಂಪೂರ್ಣ ವಿಫಲರಾದರೂ ಈ ಅವಧಿಯಲ್ಲಿ ಬುಲ್ಸ್ ರಕ್ಷಿಸಿದ್ದು ಡಿಫೆಂಡರ್‌ಗಳ ಆಟ. ಆದರೆ 2ನೇ ಅವಧಿಯಲ್ಲಿ ರೋಹಿತ್ (3 ಅಂಕ) ಮರಳಿ ಫಾರ್ಮ್ಗೆ ಬಂದಾಗ ಡಿಫೆಂಡರ್‌ಗಳ ಹೋರಾಟ ಮತ್ತಷ್ಟು ಬಲವಾಯಿತು. ಇದು ಬೆಂಗಳೂರು ಗೆಲುವಿಗೆ ಪ್ರಮುಖ ಕಾರಣವಾಯಿತು.
ಮೊದಲ ಅವಧಿಯಲ್ಲಿ 8-10 ರಿಂದ ಹಿನ್ನಡೆಯಲ್ಲಿದ್ದ ಬೆಂಗಳೂರು 2ನೇ ಅವಧಿಯ ಆರಂಭದಲ್ಲೇ ಸಿಡಿಯಲು ಶುರು ಮಾಡಿತು. ಫಾರ್ಮ್ ಕಳೆದುಕೊಂಡಿದ್ದ ಬುಲ್ಸ್‌ನ ರೈಡರ್ ರೋಹಿತ್ ಕುಮಾರ್ ಮತ್ತೆ ಚಾರ್ಜ್ ಆದರು. ಹೀಗಾಗಿ ಬೆಂಗಳೂರು 20-15 ರಿಂದ ಮುನ್ನಡೆ ಪಡೆದುಕೊಂಡಿತ್ತು. ಅಷ್ಟೇ ಅಲ್ಲ ಇದೇ ಅಂತರವನ್ನು ಕೊನೆ ತನಕ ಕಾಪಾಡಿಕೊಂಡಿತು. ಮೊದಲ ಅವಧಿಯಲ್ಲಿ ರೋಹಿತ್ ಶೂನ್ಯ:
ಇದಕ್ಕೂ ಮೊದಲು ಬೆಂಗಳೂರು ನಾಯಕ ರೋಹಿತ್ ಕುಮಾರ್ ಮೊದಲ ಅವಧಿಯ ಆಟದಲ್ಲಿ ಸಂಪೂರ್ಣ ವಿಫಲರಾದರು. ರೋಹಿತ್ ಒಟ್ಟಾರೆ ಮೊದಲ ಅವಧಿಯಲ್ಲಿ 6 ರೈಡಿಂಗ್ ಮಾಡಿದರು. 4 ರೈಡಿಂಗ್ ಔಟ್ ಹಾಗೂ 2 ರೈಡಿಂಗ್ ಅನ್ನು ವ್ಯರ್ಥ ಮಾಡಿದರು. ಇವರ ಅನುಪಸ್ಥಿತಿಯಲ್ಲಿ ಡಿಫೆಂಡರ್‌ಗಳಾದ ಸುನಿಲ್ ಜೈಪಾಲ್ ಟ್ಯಾಕಲ್‌ನಿಂದ ಅಂಕ ತಂದುಕೊಟ್ಟರು. ಇವರಿಗೆ ಮಹೀಂದರ್ ಹಾಗೂ ಅಜಯ್ ಕುಮಾರ್ ಟ್ಯಾಕಲ್ ಮೂಲಕ ಸಾಥ್ ನೀಡಿದರು.
Related Articles
ಕನ್ನಡಿಗ ಬಿ.ಸಿ.ರಮೇಶ್ ಗರಡಿಯಲ್ಲಿ ಪಳಗಿರುವ ಪುನೇರಿ ಪಲ್ಟಾನ್ ತಂಡ ಮೊದಲ ಅವಧಿಯಲ್ಲಿ 10-8ರಿಂದ ಮುನ್ನಡೆ ಹೊಂದಿತ್ತು. ಆದರೆ ನಂತರದ ಹಂತದಲ್ಲಿ ತಾರಾ ಆಟಗಾರರಾದ ದೀಪಕ್ ಹೂಡಾ (2 ಅಂಕ), ರಾಜೇಶ್ ಮೊಂದಲ್ (2 ಅಂಕ) ವಿಫಲರಾದರು. ಸ್ವಲ್ಪ ಮಟ್ಟಿಗೆ ಟ್ಯಾಕಲ್‌ನಲ್ಲಿ ಧರ್ಮರಾಜ್ ಚೆರಾÉಥನ್ (4 ಅಂಕ) ಹಾಗೂ ಸಂದೀಪ್ ನರ್ವಲ್ (3 ಅಂಕ) ಪುನೇರಿ ಗೆಲುವಿಗೆ ಪ್ರಯತ್ನ ನಡೆಸಿದರಾದರೂ ಅದು ಸಾಧ್ಯವಾಗಲಿಲ್ಲ.
Advertisement
– ಹೇಮಂತ್ ಸಂಪಾಜೆ