Advertisement

ಲಡ್ಡು ತಯಾರಿಗೆ ಬೆಂಗಳೂರಿನ ತುಪ್ಪ!

04:27 AM Aug 06, 2020 | Hari Prasad |

ಅಯೋಧ್ಯೆ: ರಾಮಮಂದಿರದ ಭೂಮಿಪೂಜೆ ನೆರವೇರಿದ ಸಂಭ್ರಮವನ್ನು ಆಚರಿಸುವ ಸಲುವಾಗಿ ಪಟ್ನಾ ಮೂಲದ ಮಹಾವೀರ ಮಂದಿರ ಟ್ರಸ್ಟ್‌ ಬರೋಬ್ಬರಿ 1.25 ಲಕ್ಷ ರಘುಪತಿ ಲಡ್ಡುಗಳನ್ನು ವಿತರಿಸಿದೆ.

Advertisement

ವಿಶೇಷವೆಂದರೆ, ಈ ಲಡ್ಡುಗಳನ್ನು ತಯಾರಿಸಲು ಬೆಂಗಳೂರಿನಿಂದ ತರಿಸಲಾದ ಶುದ್ಧ ತುಪ್ಪವನ್ನು ಬಳಸಲಾಗಿತ್ತು.

ದೇಶದ ವಿವಿಧ ಮೂಲೆಗಳಿಂದ ಸಾಮಗ್ರಿಗಳನ್ನು ತರಿಸಿ ಲಡ್ಡುಗಳನ್ನು ಸಿದ್ಧಪಡಿಸಲಾಗಿತ್ತು.

ಬೆಂಗಳೂರಿನ ಶುದ್ಧ ತುಪ್ಪ, ಕಾಶ್ಮೀರದ ಪುಲ್ವಾಮಾ ದಿಂದ ಕೇಸರಿ, ಕೇರಳದಿಂದ ಗೋಡಂಬಿ, ಪಟ್ನಾದಿಂದ ಒಣದ್ರಾಕ್ಷಿ, ಸಕ್ಕರೆ ಮತ್ತು ಏಲಕ್ಕಿಯನ್ನು ತರಿಸಿ ಈ ವಿಶೇಷ ಲಡ್ಡು ತಯಾರಿಸಲಾಗಿತ್ತು.

ಇನ್ನೂ ವಿಶೇಷವೆಂದರೆ, ಲಡ್ಡು ಮಾಡಲು ಬಳಸಿದ ಕಡಲೆಹಿಟ್ಟನ್ನು ದೂರದ ಆಸ್ಟ್ರೇಲಿಯಾದಿಂದ ತರಿಸಲಾಗಿತ್ತು. ಒಟ್ಟು 1.25 ಲಕ್ಷ ಲಡ್ಡುಗಳ ಪೈಕಿ 51,000 ಲಡ್ಡುಗಳನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ.

Advertisement

ಉಳಿದ ಲಡ್ಡುಗಳನ್ನು ಬಿಹಾರದ ಸೀತಾಮಡಿ ಹಾಗೂ ಶ್ರೀರಾಮನಿಗೆ ಸಂಬಂಧಿಸಿದ 25 ಯಾತ್ರಾ ಸ್ಥಳಗಳಿಗೆ ನೀಡಲಾಗಿದೆ. ಜತೆಗೆ, ಬಿಹಾರದಲ್ಲಿನ ರಾಮಭಕ್ತರಿಗೆ ವಿತರಿಸಲಾಗಿದೆ ಎಂದು ಟ್ರಸ್ಟ್‌ ತಿಳಿಸಿದೆ.

ರಂಗೋಲಿ ಬಿಡಿಸಿದ ಸಚಿವೆ ನಿರ್ಮಲಾ


ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಪ್ರಯುಕ್ತ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ತಮ್ಮ ಮನೆಯಲ್ಲಿ ರಂಗೋಲಿ ಬಿಡಿಸಿ ಗಮನ ಸೆಳೆದಿದ್ದಾರೆ. ರಂಗೋಲಿ ಚಿತ್ರವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಅವರು, ‘ಬಹುತೇಕ ಮನೆಗಳಲ್ಲಿ ಅಕ್ಕಿ ಹಿಟ್ಟಿನ ಮೂಲಕ ಪ್ರತಿ ದಿನವೂ ತಾಜಾ ರಂಗೋಲಿ ಬಿಡಿಸಲಾಗುತ್ತದೆ. ಇಂದು, ನನ್ನ ಮನೆಯ ಪುಟ್ಟ ದೇಗುಲದಲ್ಲಿ ಬಿಡಿಸಿದ ರಂಗೋಲಿ ಇದು’ ಎಂದು ತಿಳಿಸಿದ್ದಾರೆ. ಸಂಸ್ಕೃತದಲ್ಲಿ ಶ್ರೀ ರಾಮ್‌ ಜಯಂ ಎಂದು ರಂಗೋಲಿಯಲ್ಲಿ ಬರೆದಿದ್ದಾರೆ.

ಫೋಟೋ ಟ್ವೀಟ್‌ ಮಾಡಿದ ಪ್ರಸಾದ್‌


ಭೂಮಿ ಪೂಜೆ ನೆರವೇರಿಸುವ ಕೆಲವೇ ಗಂಟೆಗಳ ಮುನ್ನ ಕೇಂದ್ರ ಕಾನೂನು ಸಚಿವರಾದ ರವಿಶಂಕರ್‌ ಪ್ರಸಾದ್‌, ಸಂವಿಧಾನದ ಮೂಲ ಪ್ರತಿಯಲ್ಲಿರುವ ರಾಮ, ಸೀತೆ, ಲಕ್ಷ್ಮಣರ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಈ ಚಿತ್ರ, ಲಂಕೆಯನ್ನು ಜಯಿಸಿದ ಅನಂತರ ಶ್ರೀರಾಮ, ಸೀತಾ ಮಾತೆ ಹಾಗೂ ಲಕ್ಷ್ಮಣರು ವಿಜಯ ದುಂಧುಬಿಯ ಜತೆಗೆ ಅಯೋಧ್ಯೆಗೆ ಹಿಂದಿರುಗಿರುವುದನ್ನು ತೋರಿಸುತ್ತದೆ. ಸಂವಿಧಾನದ ಮೂಲ ಪ್ರತಿಯಲ್ಲಿನ ಮೂಲಭೂತ ಹಕ್ಕುಗಳ ಅಧ್ಯಾಯದ ಮೊದಲ ಪುಟದಲ್ಲಿ ಇದನ್ನು ಮುದ್ರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next