Advertisement

Bengaluru; ಹಲವರ ಮೇಲೆ ದಾಳಿ: ಭೀತಿ ಮೂಡಿಸಿದ್ದ ಚಿರತೆ ಗುಂಡಿಗೆ ಬಲಿ

04:54 PM Nov 01, 2023 | Team Udayavani |

ಬೆಂಗಳೂರು: ಬೊಮ್ಮನಹಳ್ಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಪ್ರತ್ಯಕ್ಷವಾಗುತ್ತ ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬಂದಿ ನಡೆಸಿದ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಗುಂಡೇಟು ತಗುಲಿ ಮೃತಪಟ್ಟಿದೆ.

Advertisement

ಕಳೆದ ಮೂರು ದಿನಗಳಲ್ಲಿ ಹಲವೆಡೆ ಪ್ರತ್ಯಕ್ಷವಾಗಿ ಭೀತಿ ಮೂಡಿಸಿ ಜನರನ್ನು ಕಂಗಾಲಾಗಿಸಿತ್ತು. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದರೂ ಸುಲಭದಲ್ಲಿ ಬಲೆಗೆ ಬಿದ್ದಿರಲಿಲ್ಲ. ಬುಧವಾರ ಬೆಳಗ್ಗೆ ಅರಿವಳಿಕೆ ಚುಚ್ಚುಮದ್ದು ನೀಡುತ್ತಿದ್ದ ವೈದ್ಯ ಕಿರಣ್ ಅವರ ಕತ್ತಿನ ಭಾಗಕ್ಕೆ ಪರಚಿತ್ತು, ಲೆಪರ್ಡ್​ ಟಾಸ್ಕ್​ಫೋರ್ಸ್ ​ಶಾರ್ಪ್​ ಶೂಟರ್​ ಧನ್​ರಾಜ್ ಮೇಲೆಯೂ ಎರಗಿತ್ತು, ಅವರ ಕಾಲು ಮತ್ತು ಭುಜಕ್ಕೆ ಗಾಯವಾಗಿದೆ. ಕಾರ್ಯಾಚರಣೆಗೆ ನೆರವಾಗುತ್ತಿದ್ದ ಬಿಬಿಎಂಪಿ ಸಿಬಂದಿ ಮಹೇಶ್ ಅವರಿಗೂ ಪರಚಿ ಕಾಲಿಗೆ ಗಾಯಮಾಡಿತ್ತು.

ಕೊನೆಗೂ ರಣತಂತ್ರ ನಡೆಸಿದ ಅರಣ್ಯ ಇಲಾಖೆ ಸಿಬಂದಿಗಳು ಮೈಸೂರು ಲೆಪರ್ಡ್ ಟಾಸ್ಕ್ ಫೋರ್ಸ್ ನೆರವಿನಿಂದ ಕಾರ್ಯಾಚರಣೆ ನಡೆಸಿ ಥರ್ಮಲ್ ಡ್ರೋನ್ ಬಳಸಿ ಕೂಡ್ಲುಗೇಟ್ ಬಳಿ ಪಾಳುಬಿದ್ದ ಕಟ್ಟಡದಲ್ಲಿದ್ದ ಚಿರತೆಯನ್ನು ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದಿದ್ದರು. ಈ ವೇಳೆ ಗುಂಡು ಹಾರಿಸಲಾಗಿದ್ದು ಗಾಯಗೊಂಡಿದ್ದ ಚಿರತೆ ಯನ್ನು ಬೋನ್ ನಲ್ಲಿ ಹಾಕಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.

ಅರಣ್ಯ ಇಲಾಖೆ ಡಿಸಿಎಫ್ ರವೀಂದ್ರ ಅವರು ಬೆಳಗ್ಗೆಯಿಂದಲೂ ಕಾರ್ಯಚರಣೆ ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡಿದ್ದರು. ಶಾಸಕ ಶಾಸಕ ಸತೀಶ್ ರೆಡ್ಡಿ ಸ್ಥಳಕ್ಕೆ ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next