Advertisement

ಬೆಂಗಳೂರು: ಪೊಲೀಸರಿಗೆ ಸವಾಲು ಎಸೆದು ದಂಡ ಕಟ್ಟಿದ ಯುವಕ!

12:15 PM Oct 23, 2022 | Team Udayavani |

ಬೆಂಗಳೂರು: ಸಿಗ್ನಲ್‌ ಬಳಿಯಿರುವ ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ದಂಡ ವಿಧಿಸಿದ್ದ ಸಂಚಾರ ಪೊಲೀಸರಿಗೆ ಯುವಕನೊಬ್ಬ ಸವಾಲು ಎಸೆದು, ಬಳಿಕ ದಂಡ ಕಟ್ಟಿದ ಪ್ರಸಂಗ ನಡೆದಿದೆ.

Advertisement

ಹೆಲ್ಮೆಟ್‌ ಧರಿಸದೆ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಫಿಲಿಕ್ಸ್‌ ರಾಜ್‌ ವಾಹನದ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅದಕ್ಕೆ ಯುವಕ ಸ್ಲಿಪ್‌ ಅನ್ನು ಟ್ವೀಟ್‌ ಮಾಡಿ, ನಾನು ಹೆಲ್ಮೆಟ್‌ ಧರಿಸಿಲ್ಲ ಎಂಬುವುದಕ್ಕೆ ಸೂಕ್ತ ಸಾಕ್ಷಿ ಇಲ್ಲ. ದಯವಿಟ್ಟು ಸರಿಯಾದ ಸಾಕ್ಷಿ ನೀಡಿ ಎಂದು ಸವಾಲು ಹಾಕಿದ್ದಾನೆ. ಫಿಲೆಕ್ಸ್‌ ರಾಜ್‌ ಅ.2 ರ ಮಧ್ಯಾಹ್ನ 3.15 ರ ಸಮಯದಲ್ಲಿ ಹೆಲ್ಮೆಟ್‌ ಧರಿಸದೆ ಸ್ಕೂಟರ್‌ನಲ್ಲಿ ಸಂಚರಿಸಿದ್ದನು. ಅದಕ್ಕೆ ಟ್ರಾಫಿಕ್‌ ಪೊಲೀಸರು ಫಿಲೆಕ್ಸ್‌ ರಾಜ್‌ಗೆ ದಂಡದ ರಸೀದಿಯನ್ನು ಕಳುಹಿಸಿದ್ದಾರೆ. ಆದರೆ, ರಾಜ್‌ ದಂಡ ಕಟ್ಟದೆ ಆ ಸ್ಕೂಟರ್‌ನಲ್ಲಿ ಇದ್ದಿದ್ದು ನಾನೇ ಎಂಬುವುದಕ್ಕೆ ಏನು ಸಾಕ್ಷಿ, ನಾನು ದಂಡ ಕಟ್ಟಲ್ಲ ಎಂದು ಟ್ವೀಟ್‌ ಮಾಡಿದ್ದಾನೆ.

ನಾನು ಹೆಲ್ಮೆಟ್‌ ಧರಿಸಿಲ್ಲ ಎಂಬುವುದಕ್ಕೆ ಸೂಕ್ತ ಸಾಕ್ಷಿ ಇಲ್ಲ. ದಯವಿಟ್ಟು ಸರಿಯಾದ ಸಾಕ್ಷಿ ನೀಡಿ. ಈ ಹಿಂದೆಯೂ ಇದೆ ರೀತಿಯಾಗಿತ್ತು. ಆಗ ನಾನು ದಂಡ ಕಟ್ಟಿದ್ದೆ. ಆದರೆ ಈಗ ನಾನು ದಂಡ ಕಟ್ಟಲ್ಲ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾನೆ.

ಕೆಲವು ನಿಮಿಷಗಳ ನಂತರ ಅದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಸಂಚಾರ ಪೊಲೀಸರು, ರಾಜ್‌ ಹೆಲ್ಮೆಟ್‌ ಇಲ್ಲದೆ ಸಂಚರಿಸುತ್ತಿದ್ದ ಭಾವಚಿತ್ರವನ್ನು ರಾಜ್‌ಗೆ ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದಾರೆ. ನಂತರ ಫಿಲೆಕ್ಸ್‌ ರಾಜ್‌ ಅದಕ್ಕೆ ಪ್ರತಿಕ್ರಿಯಿಸಿ, ಬೆಂಗಳೂರು ಸಂಚಾರ ಪೊಲೀಸರಿಗೆ ಧನ್ಯವಾದಗಳು. ಈ ರೀತಿ ಪ್ರಶ್ನೆ ಮಾಡುವುದು ಸಾರ್ವಜನಿಕರ ಹಕ್ಕು. ಬೆಂಗಳೂರು ಸಂಚಾರ ಪೊಲೀಸರಿಗೆ ನಾನು ಅಭಿನಂದಿಸುತ್ತೇನೆ. ನಾನು ದಂಡವನ್ನು ಕಟ್ಟುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next