Advertisement

Bengaluru: ಹೂಡಿಕೆಯಲ್ಲಿ ಹಣ ದ್ವಿಗುಣ ಆಮಿಷ ತೋರಿಸಿ 35.35 ಲಕ್ಷ ರೂ. ವಂಚನೆ

03:17 PM Oct 19, 2024 | Team Udayavani |

ಬೆಂಗಳೂರು: ಅಂತಾರಾಜ್ಯ ವ್ಯಕ್ತಿಗಳ ಜೊತೆಗೆ ಸೇರಿಕೊಂಡು ಹವಾಲ ದಂಧೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಹುಬ್ಬಳಿ ಮೂಲದ ಅಮನ್‌, ಅಹಮದಾಬಾದ್‌ ಮೂಲದ ಗುರು ಬಾಯ್‌, ಭರತ್‌ ಬಾಯಿ ಬಂಧಿತರು.

ಎಚ್‌ಎಸ್‌ಆರ್‌ ಲೇಔಟ್‌ನ ವೆಂಕಟಾಪುರದ ವ್ಯಕ್ತಿ ಯೊಬ್ಬರನ್ನು ವಾಟ್ಸಆ್ಯಪ್‌ ಮೂಲಕ ಸಂಪರ್ಕಿಸಿದ ಆರೋಪಿಗಳು, ಗಣೇಶ ಗ್ರೀನ್‌ ಭಾರತ್‌ ಲಿ. ಐಪಿಒ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹಣ ದ್ವಿಗುಣ ವಾಗಿ ಹೆಚ್ಚಿನ ಹಣ ಸಂಪಾದಿಸಬಹುದೆಂದು ಆಮಿಷವೊಡ್ಡಿದ್ದರು.

ನಂತರ ಹಂತ ಹಂತವಾಗಿ 35.35 ಲಕ್ಷ ರೂ. ಅನ್ನು ವಿವಿಧ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಆಗ್ನೇಯ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಇಎನ್‌ ಠಾಣೆ ಪೊಲೀಸರ ತನಿಖೆ ವೇಳೆ ದೂರುದಾರರಿಂದ ದೇಶದ ವಿವಿಧ ರಾಜ್ಯಗಳ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಕಂಡು ಬಂದಿತ್ತು. ಆ ಹಣವನ್ನು ವಿತ್‌ ಡ್ರಾ ಮಾಡಿದ ಇಬ್ಬರುವ ಆರೋಪಿಗಳನ್ನು ಹೈದರಾಬಾದ್‌ ನಲ್ಲಿ ವಶಕ್ಕೆ ಪಡೆದಿದ್ದಾರೆ.

Advertisement

ಆ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ, ಒಬ್ಬನ ಸಹೋದರ ದುಬೈನಲ್ಲಿ ವಾಸವಾಗಿದ್ದು, ಆತನು ಆರೋಪಿಗಳಿಬ್ಬರ ಜೊತೆ ಸೇರಿಕೊಂಡು ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಸಿರುವುದು ಗೊತ್ತಾಗಿದೆ. ನಂತರ ಆರೋಪಿಗಳು ದೂರುದಾರರಿಗೆ ಆಮಿಷವೊಡ್ಡಿ ವಿವಿಧ ಖಾತೆಗಳಿಗೆ ಹಣ ಸಂದಾಯ ಮಾಡಿಸಿದ್ದರು. ಈ ರೀತಿ ಸಂದಾಯ ಮಾಡಿದ ಹಣವನ್ನು ಈ ಮೂವರು ವ್ಯಕ್ತಿಗಳ ಮೂಲಕ ಡ್ರಾ ಮಾಡಿಸಿ, ನಂತರ ಹವಾಲ ಮೂಲಕ ದುಬೈನಲ್ಲಿ ಹಣ ಪಡೆದುಕೊಳ್ಳುತ್ತಿದ್ದ ವಿಚಾರ ತನಿಖೆಯಲ್ಲಿ ಕಂಡು ಬಂದಿದೆ.

ಶೇ.3ರಷ್ಟು ಹಣ ಹವಾಲ ಏಜೆಂಟರಿಗೆ

ಇತರೆ ವಿವಿಧ ಬ್ಯಾಂಕ್‌ ಖಾತೆಗಳ ಕೆವೈಸಿ ಹಾಗೂ ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲಿಸಿ ದಾಗ ಹುಬ್ಬಳ್ಳಿ ಮೂಲದ ವ್ಯಕ್ತಿ ಇದರಲ್ಲಿ ಭಾಗಿ ಯಾಗಿರುವುದು ಗೊತ್ತಾಗಿತ್ತು. ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಆ ವೇಳೆ ಈ ರೀತಿ ಕಳುಹಿಸುತ್ತಿದ್ದ ಹಣಕ್ಕೆ ಶೇ.3ರಷ್ಟು ಹಣವನ್ನು ಅಹಮದಾಬಾದ್‌ನಲ್ಲಿರುವ ವ್ಯಕ್ತಿಯು ಹವಾಲಾ ಏಜೆಂಟರಿಗೆ ಕಳುಹಿಸುತ್ತಿದ್ದ. ನಂತರ ಸ್ನೇಹಿತರೊಂದಿಗೆ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಚೆಕ್‌ ಮೂಲಕ ಹಣವನ್ನು ವಿತ್‌ ಡ್ರಾ ಮಾಡಿಕೊಂಡಿರುತ್ತಾರೆ. ಎಟಿಎಂಗಳಲ್ಲಿಯೂ ಸಹ ಹಣ ವಿತ್‌ ಡ್ರಾ ಮಾಡಿಕೊಳ್ಳುತ್ತಿದ್ದರು. ಎಟಿಎಂ ಕಾರ್ಡ್‌ ನ ಮಿತಿ ಮುಗಿದಾಗ ಸ್ಥಳೀಯ ಪೆಟ್ರೋಲ್‌ ಬಂಕ್‌ ಗಳಲ್ಲಿ ಎಟಿಎಂ ಕಾರ್ಡ್‌ ಬಳಸಿ ಕೊಂಡು ಹಣ ಪಡೆದು ಮಾಲಿಕರಿಗೆ ಶೇ.3 ರಷ್ಟು ಕಮಿಷನ್‌ ನೀಡುತ್ತಿದ್ದ ಸಂಗತಿಯೂ ಹೊರ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next