ಹೊಸದಿಲ್ಲಿ: ದೇಶದ ಜನರು ಡಿ. 13ರ ಮಧ್ಯರಾತ್ರಿ ಮತ್ತು ಡಿ. 14ರ ಮುಂಜಾನೆ ಆಕಾಶದಲ್ಲಿ ಸ್ಪಷ್ಟವಾಗಿ ಉಲ್ಕಾಪಾತ ನೋಡುಬಹುದಾಗಿದೆ.
ಡಿ. 13ರ ಮಧ್ಯರಾತ್ರಿ 2 ಗಂಟೆಯಿಂದ 3 ಗಂಟೆ ಸಮಯಕ್ಕೆ ಉಲ್ಕಾಪಾತ ತನ್ನ ಉತ್ತುಂಗಕ್ಕೆ ತಲುಪಲಿದೆ. ಇದನ್ನು ನೋಡಲು ದೂರದರ್ಶಕದ ಆವಶ್ಯಕತೆ ಇಲ್ಲ. ಬರಿ ಕಣ್ಣಿನಿಂದ ಇದನ್ನು ವೀಕ್ಷಿಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ವರ್ಷ ಡಿ. 13ರ ಮಧ್ಯರಾತ್ರಿ 100 ಕ್ಕೂ ಹೆಚ್ಚು ಉಲ್ಕಾಪಾತಗಳು ಭೂಮಿಯ ಸಮೀಪ ಬರಲಿವೆ. ಮೋಡವಿಲ್ಲದೆ, ವಾತಾವರಣ ತಿಳಿಯಾಗಿದ್ದರೆ ಹಾಗೂ ಚಂದ್ರನ ಬೆಳಕು ಕಡಿಮೆ ಇದ್ದರೆ ಇದನ್ನು ಸ್ಪಷ್ಟವಾಗಿ ನಾಗರಿಕರು ನೋಡಬಹುದಾಗಿದೆ.
ಉಲ್ಕಾಪಾತವನ್ನು ವೀಕ್ಷಿಸಲು ಬೆಂಗಳೂರಿನ ಜವಾಹರಲಾಲ್ ತಾರಾಲಯದಲ್ಲಿ ಅಂದು ವಿಶೇಷವಾದ ವ್ಯವಸ್ಥೆ ಮಾಡಲಾಗಿದೆ.