ನವ ದೆಹಲಿ : ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು, ಪ್ರಧಾನಿ ನರೇಂದ್ರ ಮೋದಿ ಅವರು ಆನ್ ಲೈನ್‌ನಲ್ಲಿ ಖರೀದಿಸಿದ ಹಲವಾರು ರಾಜ್ಯಗಳ ಸಾಂಪ್ರದಾಯಿಕ ಕರಕುಶಲ ವಸ್ತುಗಳ ಪಟ್ಟಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನ ಮಂತ್ರಿಗಳ ಶಾಪಿಂಗ್ ಪಟ್ಟಿಯಲ್ಲಿ ತಮಿಳುನಾಡು ಬುಡಕಟ್ಟು ಜನಾಂಗದವರು ತಯಾರಿಸಿದ ಕಸೂತಿ ಶಾಲು, ಕರಕುಶಲ ಗೋಂಡ್ ಪೇಪರ್ ಪೈಂಟಿಂಗ್, ನಾಗಾಲ್ಯಾಂಡ್ ನ ಸಾಂಪ್ರದಾಯಿಕ ಶಾಲು, ಬಂಗಾಳದಿಂದ ಸೆಣಬಿನ ಫೈಲ್ ಫೋಲ್ಡರ್, ಅಸ್ಸಾಂನಿಂದ ಗಮುಸಾ ಮತ್ತು ಕೇರಳದ ಕ್ಲಾಸಿಕ್ ಪಾಮ್ ಕ್ರಾಫ್ಟ್ ಸೇರಿವೆ.
ಓದಿ : ಮದುವೆಯಾಗುತ್ತೀಯಾ ಎಂದು ಕೇಳಿರಲಿಲ್ಲ..! : ಬೋಬ್ಡೆ ಸ್ಪಷ್ಟನೆ
“ಆತ್ಮನಿರ್ಭರ್ ಆಗಬೇಕೆಂಬ ಭಾರತದ ಪ್ರಯತ್ನದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನದಂದು, ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ನಾವು ಬದ್ಧರಾಗೋಣ. ಇಂದು ನಾನು ಮಹಿಳಾ ಉದ್ಯಮ, ಸೃಜನಶೀಲತೆ ಮತ್ತು ಭಾರತದ ಸಂಸ್ಕೃತಿಯನ್ನು ಆಚರಿಸುವ ಕೆಲವು ಉತ್ಪನ್ನಗಳನ್ನು ಖರೀದಿಸಿದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಓದಿ : ಕಾಂಗ್ರೆಸ್ ನಲ್ಲಿದ್ದಿದ್ದರೆ ಸಿಂದಿಯಾ ಮುಖ್ಯಮಂತ್ರಿಯಾಗಬಹುದಿತ್ತು : ರಾಹುಲ್ ಗಾಂಧಿ