Advertisement

ಪದ್ಮಭೂಷಣ ಪುರಸ್ಕೃತ, ಬಂಗಾಳದ ಖ್ಯಾತ ಕವಿ ಶಂಖಾ ಘೋಷ್‌ ನಿಧನ

07:44 PM Apr 21, 2021 | Team Udayavani |

ಕೋಲ್ಕತಾ:  89 ವರ್ಷದ ಬಂಗಾಳದ ಖ್ಯಾತ ಕವಿ, ಪದ್ಮಭೂಷಣ, ಜ್ಞಾನಪೀಠ ಪುರಸ್ಕೃತ ಶಂಖಾ ಘೋಷ್‌ ಬುಧವಾರ ಬೆಳಗ್ಗೆ ಕೊರೊನಾದಿಂದ ಮೃತಪಟ್ಟಿದ್ದಾರೆ.

Advertisement

ಏ.14ರಂದು ಅವರಿಗೆ ಕೊರೊನಾ ತಗುಲಿತ್ತು. ಆದ್ದರಿಂದ ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

ಕೊರೊನಾ ಅಲ್ಲದೇ ಅವರಿಗೆ ಹಲವು ದೈಹಿಕ ಸಮಸ್ಯೆಗಳು ಇದ್ದವು. ಆದ್ದರಿಂದ ಅವರು ಕೆಲವು ತಿಂಗಳುಗಳ ಮುನ್ನವೇ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ :ಚಾರ್‌ಧಾಮ್‌ ಯಾತ್ರೆಗೆ ಕಠಿಣ ಕ್ರಮ ಕೈಗೊಳ್ಳಿ : ಉತ್ತರಾಖಂಡ ಸರ್ಕಾರಕ್ಕೆ ಹೈ ಕೋರ್ಟ್ ಆದೇಶ

Advertisement
Advertisement

Udayavani is now on Telegram. Click here to join our channel and stay updated with the latest news.

Next