ಕೋಲ್ಕತ್ತಾ: ಬಂಗಾಳದ ಮನರಂಜನಾ ಉದ್ಯಮದಲ್ಲಿ ಮತ್ತೊಂದು ಆಘಾತಕಾರಿ ಸಾವು ಸಂಭವಿಸಿದೆ. ಟಿವಿ ನಟಿ ಪಲ್ಲವಿ ಡೇ ಅವರು ಕೋಲ್ಕತ್ತಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೆಲವು ದಿನಗಳ ನಂತರ, 21 ವರ್ಷದ ರೂಪದರ್ಶಿ-ನಟಿ ಬಿದಿಶಾ ಡಿ ಮಜುಂದಾರ್ ಅವರು ಬುಧವಾರ ಸಂಜೆ ಕೋಲ್ಕತ್ತಾದ ಡುಮ್‌ಡಮ್ ಪ್ರದೇಶದ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೇ 25 ರಂದು ನೆರೆಹೊರೆಯವರು ಬಾಗಿಲು ಒಡೆದು ಮನೆಗೆ ಪ್ರವೇಶಿಸಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಡೆಲ್ ಬಿದಿಶಾ ಕೋಲ್ಕತ್ತಾದ ಉತ್ತರದ ಉಪನಗರದವರು. ವಧುವಿನ ಮೇಕಪ್ ಫೋಟೋ ಶೂಟ್‌ಗಳಲ್ಲಿ ಜನಪ್ರಿಯ ಮುಖವಾಗಿದ್ದರು. ಬಿದಿಶಾ ಡಿ ಮಜುಂದಾರ್ ಅವರು 2021 ರಲ್ಲಿ ‘ಭಾರ್- ದಿ ಕ್ಲೌನ್’ ಎಂಬ ಕಿರುಚಿತ್ರದಲ್ಲಿ ಮೊದಲ ಬಾರಿ ನಟನೆಯಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:ವೀಲ್‌ಚೇರ್‌ನಲ್ಲಿ ಹೊಸ ಪ್ರೇಮ ಪುರಾಣ: ವಿಭಿನ್ನ ಕಾನ್ಸೆಪ್ಟ್ ನ ಸಿನಿಮಾವಿದು..
ಮೃತದೇಹವನ್ನು ಈಗಾಗಲೇ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆರ್‌ಜಿಕೆ ಆಸ್ಪತ್ರೆಗೆ ರವಾನಿಸಿದ್ದಾರೆ. ಆಕೆಯ ನಿವಾಸದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ನಟಿಯ ಆತ್ಮಹತ್ಯೆಗೆ ಕಾರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೃತ್ತಿ ಅವಕಾಶಗಳ ಕೊರತೆಯಿಂದಾಗಿ ತಾನು ಈ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು, ಟಿವಿ ನಟಿ ಪಲ್ಲವಿ ಡೇ ಅವರು ಮೇ 15 ರಂದು ಕೋಲ್ಕತ್ತಾದ ಗರ್ಫಾ ಪ್ರದೇಶದಲ್ಲಿನ ಅವರ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ಕುರಿತು ಪೊಲೀಸ್ ತನಿಖೆ ಇನ್ನೂ ಮುಂದುವರೆದಿದೆ.