ಕೋಲ್ಕತಾ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಜತೆ ಪಶ್ಚಿಮಬಂಗಾಳದ ಚುನಾವಣಾ ಅಧಿಕಾರಿಯೊಬ್ಬರು ಸೋಮವಾರ(ಏಪ್ರಿಲ್ 05) ರಾತ್ರಿ ತೃಣಮೂಲ ಕಾಂಗ್ರೆಸ್ ನಾಯಕನ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ:ಸಾರಿಗೆ ನೌಕರರ ಮನವೊಲಿಕೆ ಪ್ರಯತ್ನವೇ ಇಲ್ಲ, ಪರ್ಯಾಯ ಮಾರ್ಗವಿದೆ: ಸರ್ಕಾರದ ದೃಢ ನಿರ್ಧಾರ
ಪಶ್ಚಿಮಬಂಗಾಳದ 3ನೇ ಹಂತದ ವಿಧಾನಸಭೆ ಚುನಾವಣೆಯ ಮತದಾನ ಮಂಗಳವಾರ(ಏಪ್ರಿಲ್ 06) ಬೆಳಗ್ಗೆ ಆರಂಭಗೊಂಡಿದೆ. ಇಂದಿನ ಮತದಾನದ ವೇಳೆ ಈ ಇವಿಎಂ ಯಂತ್ರ ಹಾಗೂ ವಿವಿಪ್ಯಾಟ್ ಅನ್ನು ಬಳಸಿಕೊಂಡಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಪಶ್ಚಿಮಬಂಗಾಳದ ಹೌರಾ ಸೆಕ್ಟರ್ 17ರ ಉಲವೇರಿಯಾ ಉತ್ತರದಲ್ಲಿ ನೇಮಕಗೊಂಡಿದ್ದ ಚುನಾವಣಾ ಅಧಿಕಾರಿ ತಪನ್ ಸರ್ಕಾರ್, ಟಿಎಂಸಿ ರಾಜಕಾರಣಿ, ಸಂಬಂಧಿ ಮನೆಯಲ್ಲಿ ಇವಿಎಂ ಯಂತ್ರಗಳ ಜತೆ ವಾಸ್ತವ್ಯ ಹೂಡಿರುವುದಾಗಿ ವರದಿ ತಿಳಿಸಿದೆ.
ಚುನಾವಣಾ ಅಧಿಕಾರಿ ವಿರುದ್ಧ ಇನ್ನಷ್ಟೇ ಗಂಭೀರವಾದ ಪ್ರಕರಣವನ್ನು ದಾಖಲಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಭಾರತದ ಚುನಾವಣಾ ಆಯೋಗದ ನಿರ್ದೇಶನ ಉಲ್ಲಂಘಿಸಿದ ಪ್ರಕರಣವಾಗಿದೆ. ಈ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸುವಂತೆ ಆದೇಶ ನೀಡಲಾಗಿದೆ ಎಂದು ಆಯೋಗ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.