Advertisement

ಉಡದ ಗುಪ್ತಾಂಗ ಮಾರುತ್ತಿದ್ದ ಇಬ್ಬರ ಸೆರೆ

09:51 AM Dec 16, 2018 | |

ಚಿಕ್ಕಮಗಳೂರು: ಉಡದ ಗುಪ್ತಾಂಗಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ
ಯಶಸ್ವಿಯಾಗಿದೆ. ಆಯುರ್ವೇದಿಕ್‌ ಮತ್ತು ಗಿಡಮೂಲಿಕೆ ಮಾರಾಟಗಾರರೆಂದು ಹೇಳಿಕೊಂಡು ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಸಮೀಪ ವನ್ಯಜೀವಿಗಳ ಬಿಡಿಭಾಗಗಳನ್ನು ಮಾರುತ್ತಿದ್ದಾರೆಂದು ವನ್ಯಜೀವಿ ಕಾರ್ಯಕರ್ತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

Advertisement

ಖಚಿತ ಮಾಹಿತಿ ಆಧರಿಸಿ ವಲಯ ಅರಣ್ಯಾಧಿಕಾರಿ ಶಿಲ್ಪಾ ನೇತೃತ್ವದಲ್ಲಿ ಅರಣ್ಯ ರಕ್ಷಕರಾದ ಎನ್‌.ಎಂ.ಆಸೀಫ್‌, ನಾರಾಯಣ, ಇಮ್‌ತಿಹಾಸ್‌ ಬಾಬು, ಅಬ್ದುಲ್‌ ರಶೀದ್‌, ಸಿದ್ದಪ್ಪ ಮತ್ತು ವಾಹನ ಚಾಲಕ ಮಹಮದ್‌ ಮತ್ತಿತರರು ವ್ಯಾಪಾರ ಮಾಡುವ ಸೋಗಿನಲ್ಲಿ ತೆರಳಿ, ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ರಾಮು ಮತ್ತು ವೆಂಕಟೇಶ ಎಂಬುವರನ್ನು ಬಂಧಿಸಿದ್ದಾರೆ.

ಇವರು ಹಲವಾರು ದಿನಗಳಿಂದ ನಗರದ ವಿವಿಧೆಡೆ ಸುಮಾರು 30 ರಿಂದ 40 ಸ್ಟೀಲ್‌ ಡಬ್ಬಿಗಳನ್ನು ಇಟ್ಟುಕೊಂಡು ಔಷಧಿ ಸಸ್ಯಗಳ ಮಾರಾಟದಲ್ಲಿ ತೊಡಗಿದ್ದರು. ಎಲ್ಲ ಕಡೆ ದಾಳಿ ನಡೆಸಿ ವನ್ಯಪ್ರಾಣಿಗಳ ಬಿಡಿಭಾಗಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಆರು ಗಂಡು ಉಡದ ಗುಪ್ತಾಂಗ ಭಾಗಗಳು, ಚಿಪ್ಪು ಹಂದಿಯ 3 ಚಿಪ್ಪುಗಳು ಇನ್ನಿತರ ವನ್ಯಜೀವಿಗಳ ಅಂಗಾಂಗಗಳು, ಪಕ್ಷಿ ಹಿಡಿಯಲು ಬಳಸುವ ಬಲೆಗಳನ್ನು ವಶಕ್ಕೆ ಪಡೆಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next