Advertisement
ಆದರೆ ಪಶ್ಚಿಮ ಬಂಗಾಲ ವಿಧಾನಸಭೆಯ ಅಧಿವೇಶನವನ್ನು ಮಾರ್ಚ್ 7ರ ಬೆಳಗ್ಗೆ 2 ಗಂಟೆಗೆ ಕರೆದಿರುವುದಾಗಿ ರಾಜ್ಯಪಾಲ ಜಗದೀಪ್ ಧನ್ಕರ್ ಅಧಿಸೂಚನೆ ಹೊರಡಿಸಿದ್ದಾರೆ.
ಇದನ್ನು ಸರಿಪಡಿಸುವ ವಿಚಾರ ಸಂಪುಟಕ್ಕೆ ಬಿಟ್ಟದ್ದು. ಸಂಪುಟ ವಿಧಾನಸಭೆ ಅಧಿವೇಶನದ ಪರಿಷ್ಕೃತ ವೇಳಾಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ ಹೊಸದಾಗಿ ಅಧಿಸೂಚನೆಯನ್ನು ಹೊರಡಿಸಬಹುದು ಎಂದು ತಿಳಿಸಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಮತ್ತು ರಾಜ್ಯಪಾಲ ಧನ್ಕರ್ ನಡುವೆ ಪದೇಪದೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತಿರುವ ನಡುವೆಯೇ ಈ ಅಧಿಸೂಚನೆ ರಾಜಕೀಯವಾಗಿ ಒಂದಿಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವುದಂತೂ ಸುಳ್ಳಲ್ಲ.