Advertisement
ಎ.17ರ ರಾಮನವಮಿಯಂದು ಸರಕಾರಿ ರಜೆ ಘೋಷಿಸಿರುವುದಾಗಿ ಶನಿವಾರ ರಾಜ್ಯ ಸರಕಾರ ಅಧಿ ಸೂ ಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ವಿಪಕ್ಷ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿ, ಜನವರಿ 15ರಂದು ರಾಜ್ಯ ಸರಕಾರವು ರಜಾ ದಿನಗಳ ಪೈಕಿ ರಾಮನವಮಿಯನ್ನು ಬಿಟ್ಟಿರುವುದನ್ನು ನಾನು ಪ್ರಶ್ನಿಸಿದ್ದೆ. ಅದೇ ತಿಂಗಳು ಜ.22ರಂದು ರಾಮಮಂದಿರ ಉದ್ಘಾಟನೆ ದಿನವೇ ರಾಮನವಮಿಗೆ ರಜೆ ಘೋಷಿಸಬಹುದಿತ್ತು. ಆ ಎಲ್ಲ ಸಮಯವನ್ನು ಬಿಟ್ಟು ಟಿಎಂಸಿ ಸರಕಾರಕ್ಕೆ ಈಗ ರಾಮಭಕ್ತರು ನೊಂದುಕೊಂಡಿ ದ್ದಾರೆಂದು ತಿಳಿಯಿತೇ? ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಸಿಎಂ ಮಮತಾ ಬ್ಯಾನರ್ಜಿ ಅವರ ಹಿಂದೂ ವಿರೋಧಿ ಹಣೆಪಟ್ಟಿ ಕಳಚಿಕೊಳ್ಳಲು ಈ ತಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. Advertisement
Ramnavami ಬಂಗಾಲ ಸರಕಾರ ರಜೆ ಘೋಷಣೆ: ಗಿಮಿಕ್ ಎಂದ ಬಿಜೆಪಿ
12:19 AM Mar 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.