Advertisement
ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ಎ ಎನ್ ಐ ನೊಂದಿಗೆ ಮಾತನಾಡಿದ ಘೋಷ್, ಕಳೆದ ಏಳು ವರ್ಷಗಳಲ್ಲಿ 175 ಬಿಜೆಪಿ ಕಾರ್ಯಕರ್ತರು ಹಿಂಸಾಚಾರದಿಂದ ಮೃತಪಟ್ಟಿದ್ದಾರೆ. ಪಕ್ಷಕ್ಕಾಗಿ ಕಾರ್ಯ ನಿರ್ವಹಿಸಿದ ಕಾರ್ಯಕರ್ತರ ಸಾವಿಗೆ ಯಾವುದೇ ರೀತಿಯ ನ್ಯಾಯ ದೊರಕಿಲ್ಲ. ರಾಜ್ಯದಲ್ಲಿ ಹಿಂಸಾಚಾರ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಹಾಗಾಗಿ ರಾಜ್ಯ ಬಿಜೆಪಿ ಘಟಕ ರಾಷ್ಟ್ರ ರಾಜಧಾನಿಯ ರಾಜ್ ಘಾಟ್ ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಮಾಹಿತ ನೀಡಿದ್ದಾರೆ.
Related Articles
Advertisement
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ದೆಹಲಿ ಭೇಟಿಯ ಬಗ್ಗೆ ಸುದ್ದಿ ಸಂಸ್ಥೆ ಎಎನ್ ಐ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2019 ರ ಲೋಕಸಭೆಯ ಮೊದಲು ಅವರು ಕೋಲ್ಕತ್ತಾದ ಎಲ್ಲಾ ಪಕ್ಷಗಳನ್ನು ಕರೆದು ದೊಡ್ಡ ಪ್ರತಿಭಟನೆ ನಡೆಸಿದರು. ಫಲಿತಾಂಶವೇನಾಯಿತು ? ಲೋಕಸಭಾ ಚುನಾವಣೆಯಲ್ಲಿ ಅವರು ತಮ್ಮ 12 ಸ್ಥಾನಗಳನ್ನು ಕಳೆದುಕೊಂಡರು. ಅವರ ಪಕ್ಷವು ಪತನದ ಹಾದಿಯಲ್ಲಿದೆ. ಅವರು ಪ್ರಧಾನಿಯಾಗಬೇಕು ಮತ್ತು ದೇಶವನ್ನು ಮುನ್ನಡೆಸಬೇಕು ಎಂದು ಕನಸು ಕಂಡಿದ್ದರು. ಅದು ಆಗಲಿಲ್ಲ. ತ್ರಿಪುರ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿಯೂ ಅಸ್ತಿತ್ವ ಕುಗ್ಗುತ್ತಿದೆ. ರಾಜ್ಯದಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಸರ್ಕಾರವು ತನ್ನ ಆಡಳಿತದಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಬಂಗಾಳದಲ್ಲಿ ಹಿಂಸಾಚಾರ ಮತ್ತು ಭ್ರಷ್ಟಾಚಾರಗಳು ವಿಪರೀತವಾಗಿವೆ. ರಾಜ್ಯ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಅವರು ದೆಹಲಿಗೆ ಬರುತ್ತಿದ್ದಾರೆ. ಬರಲಿ ಮಾಧ್ಯಮಗಳ ಪ್ರಚಾರವನ್ನು ಪಡೆದುಕೊಳ್ಳಲಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಪೆಗಾಸಸ್:ಬಿಜೆಪಿಯ ಅಭಿವೃದ‍್ದಿ ಯೋಜನೆಗಳನ್ನು ಕಾಂಗ್ರೆಸ್ ಗೆ ಸಹಿಸಿಕೊಳ್ಳಲಾಗುತ್ತಿಲ್ಲ: ಧಾಮಿ