Advertisement

Mamata Banerjee: ಕೋಲಾಹಲ- ಅತ್ಯಾ*ಚಾರ ತಡೆ ಮಸೂದೆ ಮಂಡಿಸಿದ ಪಶ್ಚಿಮಬಂಗಾಳ ಸರ್ಕಾರ

03:46 PM Sep 03, 2024 | Team Udayavani |

ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ (ಸೆ.03) ವಿಧಾನಸಭೆ ಕಲಾಪದಲ್ಲಿ ಅತ್ಯಾ*ಚಾರ ತಡೆ (ಅಪರಾಜಿತಾ) ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ.

Advertisement

ಅಪ್ರಾಪ್ತೆಯರ ವಿರುದ್ಧ ಲೈಂಗಿಕ ಕಿರುಕುಳ, ಸಾಮೂಹಿಕ ಅತ್ಯಾ*ಚಾರ, ಅತ್ಯಾ*ಚಾರದಂತಹ ಪ್ರಕರಣದ ಕಾಯ್ದೆಗೆ ತಿದ್ದುಪಡಿ ತಂದ ಮೊದಲ ರಾಜ್ಯ ಪಶ್ಚಿಮಬಂಗಾಳವಾಗಿದೆ.

ಅಂಗೀಕೃತ ಮಸೂದೆಯನ್ನು ಇನ್ನು ಪಶ್ಚಿಮಬಂಗಾಳ ರಾಜ್ಯಪಾಲ ಸಿವಿ ಆನಂದ್‌ ಬೋಸ್‌ ಅವರಿಗೆ ಕಳುಹಿಸಲಾಗುವುದು, ನಂತರ ಅದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತಕ್ಕಾಗಿ ಕಳುಹಿಸಲಾಗುತ್ತದೆ.

ಈ ಮಸೂದೆ ಕಳೆದ ತಿಂಗಳು ಸರ್ಕಾರಿ ಆಡಳಿತದ ಆರ್‌ ಜಿ ಕರ್‌ ಮೆಡಿಕಲ್‌ ಸೆಂಟರ್‌ ಮತ್ತು ಆಸ್ಪತ್ರೆಯಲ್ಲಿ ಅತ್ಯಾ*ಚಾರಕ್ಕೊಳಗಾಗಿ ಕೊ*ಲೆಯಾದ ಟ್ರೈನಿ ವೈದ್ಯೆಗೆ ಗೌರವಾರ್ಥವಾಗಿದ್ದು, ಇದೊಂದು ಐತಿಹಾಸಿಕ ಹಾಗೂ ಮಾದರಿಯಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಬಣ್ಣಿಸಿರುವುದಾಗಿ ವರದಿ ವಿವರಿಸಿದೆ.

Advertisement

ಈ ತಿದ್ದುಪಡಿ ಮಸೂದೆ, “ಅಪರಾಜಿತಾ ಮಹಿಳಾ ಮತ್ತು ಮಕ್ಕಳ ಮಸೂದೆ(ಪಶ್ಚಿಮಬಂಗಾಳ ಕ್ರಿಮಿನಲ್‌ ಕಾಯ್ದೆ ಮತ್ತು ತಿದ್ದುಪಡಿ) 2024ರ ಪ್ರಕಾರ, ಒಂದು ವೇಳೆ ಅತ್ಯಾ*ಚಾರ ಪ್ರಕರಣದಲ್ಲಿ ವ್ಯಕ್ತಿಯ ಮೇಲಿನ ಆರೋಪ ಸಾಬೀತಾಗಿ ಅಪರಾಧಿ ಎಂದಾದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next