Advertisement

ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಬೆನೆಲ್ಲಿ ಡಾಂಗ್ ಎಲೆಕ್ಟ್ರಿಕ್ ಸ್ಕೂಟರ್

01:47 PM May 08, 2021 | Team Udayavani |

ಪ್ರಸ್ತುತ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕಲ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇ-ಕಾರು ಹಾಗೂ ಸ್ಕೂಟರ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಬೆನೆಲ್ಲಿ ಕಂಪನಿ ಕೂಡ ತನ್ನ ಹೊಚ್ಚ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಲಾಂಚ್ ಮಾಡಿದೆ.

Advertisement

ಇತ್ತೀಚಿಗೆ ಇಂಡೋನೇಷಿಯಾ ಮಾರುಕಟ್ಟೆಗೆ ಈ ಸ್ಕೂಟರ್ ಪರಿಚಯಿಸಲಾಗಿದೆ. ಅಲ್ಲಿ ಇದರ ಆನ್‌ರೋಡ್‌ ಬೆಲೆ 36,800,000 ರೂ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 1.90 ಲಕ್ಷ ರೂ ಮೌಲ್ಯವನ್ನು ಹೊಂದಿದೆ. ಇ-ಸ್ಕೂಟರ್ ಅನ್ನು ಬೆನೆಲ್ಲಿ ಚೀನಿ ಮೂಲ ಕಂಪನಿ ಕಿಯಾಂಜಿಯಾಂಗ್ ಗ್ರೂಪ್ ಅಭಿವೃದ್ಧಿಪಡಿಸಿದೆ.

ಪುಟ್ಟ ಆಕಾರದ ಡಾಂಗ್ ಸ್ಕೂಟರ್ ತನ್ನ ವಿಭಿನ್ನ ಲುಕ್‌ನಿಂದಲೇ ಗಮನ ಸೆಳೆಯುತ್ತದೆ. ಅಲ್ಲದೇ ಅತ್ಯಂತ ಕೈಗೆಟಕುವ ರೀತಿಯಲ್ಲಿ ಇ-ಸ್ಕೂಟರ್ ವಿನ್ಯಾಸ ಮಾಡಲಾಗಿದೆ. ಈ ಡಾಂಗ್ ಇ-ಸ್ಕೂಟರ್ ನ ಹಿಂಭಾಗವು ತೇಲುವ ರೀತಿಯಲ್ಲಿದೆ. ಅಲ್ಯೂಮಿನಿಯಂ ಚೌಕಟ್ಟಿನಿಂದ ಮಧ್ಯದ ಭಾಗ ಹೊಂದಿಕೊಂಡಿದೆ. ಇದೇ ಚೌಕಟ್ಟು ಸ್ವಿಂಗ್ ಆರ್ಮ್ ಅನ್ನು ಹಿಂಬದಿಯ ಚಕ್ರ ಹಾಗೂ ಹಬ್ ಮೌಂಟೆಡ್ ಮೋಟಾರಿಗೆ ಕನೆಕ್ಟ್‌ ಮಾಡುತ್ತದೆ. ಈ ಡಾಂಗ್ ಎಲೆಕ್ಟ್ರಿಕಲ್ ಸ್ಕೂಟರ್ ಸಿಲಿಂಡರಿನ ಆಕಾರದಲ್ಲಿದ್ದು, ಬ್ಯಾಟರಿ ಮತ್ತು ಮೋಟಾರ್ ಒಳಗೊಂಡಿರುವ ಅಂಡರ್ ಸೀಟ್ ಪ್ಯಾನಲ್‌ನ ವೈಶಿಷ್ಟ್ಯತೆಯೊಂದಿಗೆ ಕೂಡಿದೆ.

ನಯವಾದ ಮತ್ತು ಆಕರ್ಷಕವಾದ ಮುಂಭಾಗದ ವಿನ್ಯಾಸವಿದ್ದು, ಡಾಂಗ್‌ನ ಸೌಂದರ್ಯವನ್ನು ಅದ್ಭುತಗೊಳಿಸಿದೆ. ಅಲ್ಲದೇ ಹೆಡ್‌ ಲ್ಯಾಂಪ್‌ನಲ್ಲಿ ಎಲ್‌ಇಡಿ ಲೈಟಿಂಗ್ ಹೊಂದಿದೆ. ಯುವ ಮನಸ್ಸುಗಳ ಜೊತೆಗೆ ಹೊಂದಿಕೊಳ್ಳುವಂತಹ ಫಂಕಿ ಥೀಮ್‌ ಅನುಗುಣವಾಗಿಟ್ಟುಕೊಂಡು ಎಲ್‌ಇಡಿ ವಿನ್ಯಾಸ ಮಾಡಲಾಗಿದೆ. ಆ ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ.

ಮೂರು ಬಣ್ಣಗಳಲ್ಲಿ ಲಭ್ಯ :

Advertisement

ಡಾಂಗ್ ಇ-ಸ್ಕೂಟರ್ ನೀಲಿ, ಗಾಢವಾದ ಬೂದು ಮತ್ತು ಬಿಳಿ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಡಾಂಗ್ 1.2 ಕಿಲೋವ್ಯಾಟ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಗಂಟೆಗೆ 45 ಕಿ.ಮೀ ವೇಗವನ್ನು ಹೊಂದಿದ್ದು, ಇದು ಕೃತಕ ಧ್ವನಿ ವೈಶಿಷ್ಟ್ಯವನ್ನು ಒಳಗೊಂಡಿರುವುದು ಮತ್ತೊಂದು ವಿಶೇಷ. ಸಂಪೂರ್ಣವಾಗಿ ಒಮ್ಮೆ ಚಾರ್ಜ್ ಮಾಡಿದರೆ 1.56 ಕಿಲೋವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿ ಸಾಮಾರ್ಥ್ಯವಿರುವುದರಿಂದ 60 ಕಿ.ಮೀವರೆಗೆ ಪ್ರಯಾಣಿಸಬಹುದು.

ಭಾರತಕ್ಕೆ ಯಾವಾಗ :

ಹಲವಾರು ವರದಿಗಳ ಪ್ರಕಾರ ಡಾಂಗ್ ಇ – ಸ್ಕೂಟರ್ ವಿಶೇಷವಾಗಿ ಏಷ್ಯಾ ಮಾರುಕಟ್ಟೆಗೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಾರತದ ಮಾರುಕಟ್ಟೆಗೂ ಇ-ಸ್ಕೂಟರ್ ಬರಬಹುದು, ಆದರೆ ಈ ಬಗ್ಗೆ ಇನ್ನೂ ದೃಢೀಕರಿಸಿಲ್ಲ. 2019 ರಲ್ಲಿ ಬೆನೆಲ್ಲಿಯ ಭಾರತದ ವ್ಯವಸ್ಥಾಪಕ ನಿರ್ದೇಶಕರು 2022ರಷ್ಟರಲ್ಲಿ ಭಾರತದಲ್ಲೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ತರುವ ಯೋಜನೆಗಳನ್ನು ಬಹಿರಂಗಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next