Advertisement
ಅದರಲ್ಲೂ ಸ್ಕಿಪ್ಪಿಂಗ್ ಮಾಡುವುದು ತುಂಬಾ ಉಪಕಾರಿ ಎಂದೇ ಹೇಳಲಾಗುತ್ತದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ದೇಹಕ್ಕೆ ಸಂಪೂರ್ಣ ವ್ಯಾಯಾಮ ನೀಡುವ ಕಾರಣದಿಂದಾಗಿ ದೇಹ ಫಿಟ್ ಆಗಿರುತ್ತದೆ.
Related Articles
Advertisement
ಶ್ವಾಸಕೋಶ ಆರೋಗ್ಯ:
ಸ್ಕಿಪ್ಪಿಂಗ್ ಮಾಡಿದ ನಂತರ ಉಸಿರಾಟ ವೇಗವಾಗುತ್ತದೆ. ಇದರಿಂದ ಶ್ವಾಸಕೋಶಗಳ ಆರೋಗ್ಯ ಕಾಪಾಡಿಕೊಳ್ಳಬಹುದು.
ತೂಕ ಇಳಿಕೆಗೆ ಸಹಕಾರಿ:
ಅಧಿಕ ತೂಕ ಹೊಂದಿರುವವರಿಗೆ ಸ್ಕಿಪ್ಪಿಂಗ್ ತುಂಬಾ ಉಪಯುಕ್ತ. ಪ್ರತಿನಿತ್ಯ ಸ್ಕಿಪ್ಪಿಂಗ್ ಮಾಡಿದರೆ ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬು ಕರಗುತ್ತದೆ. ಪ್ರತಿದಿನ ಕನಿಷ್ಠ ಅರ್ಧ ಗಂಟೆ ಸ್ಕಿಪ್ಪಿಂಗ್ ಆಡಿದರೆ 300 ಕ್ಯಾಲೋರಿ ಬರ್ನ್ ಆಗುತ್ತದೆ ಎನ್ನಲಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಸ್ಕಿಪ್ಪಿಂಗ್ ಅಭ್ಯಾಸ ಮಾಡುವುದರಿಂದ ಉತ್ತಮ ಫಲಿತಾಂಶ ಕಂಡುಕೊಳ್ಳಬಹುದು. ಹತ್ತು ನಿಮಿಷ ಸ್ಕಿಪ್ಪಿಂಗ್ ಮಾಡುವುದು 2 ಕಿ.ಮೀ ದೂರ ಓಡುವುದಕ್ಕೆ ಸಮ ಎನ್ನುತ್ತಾರೆ ಆರೋಗ್ಯ ತಜ್ಷರು.
ಹೃದಯದ ಆರೋಗ್ಯ:
ಸ್ಕಿಪ್ಪಿಂಗ್ ಮಾಡುವುದು ಹೃದಯದ ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಇದು ಹೃದಯ ಬಡಿತ ಹೆಚ್ಚಿಸುತ್ತದೆ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ. ಪ್ರತಿನಿತ್ಯ ಸ್ಕಿಪ್ಪಿಂಗ್ ಮಾಡುವುದರಿಂದ ಬಹುತೇಕ ಹೃದಯದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.
ಮೆದುಳು ಕ್ರಿಯಾಶೀಲವಾಗುತ್ತದೆ: ಸ್ಕಿಪ್ಪಿಂಗ್, ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರತಿದಿನ ತಪ್ಪದೆ ಸ್ಕಿಪ್ಪಿಂಗ್ ಮಾಡಿದರೆ ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ದೇಹದ ಮೂಳೆ ಆರೋಗ್ಯಕ್ಕೆ:
ದೇಹದ ಮೂಳೆಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದರಿಂದ ಮಣಿಗಂಟುಗಳಿಗೆ ಗಾಯ ಮತ್ತು ಇತರ ಯಾವುದೇ ಗಾಯದ ಸಮಸ್ಯೆ ನಿವಾರಣೆ ಮಾಡುತ್ತದೆ.
ಒತ್ತಡ ನಿವಾರಣೆ:
ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಕಿಪ್ಪಿಂಗ್ ಮಾಡುವುದರಿಂದ ಒತ್ತಡ ನಿವಾರಿಸಬಹುದು. ಆದ್ದರಿಂದ ದಿನದ ಅರ್ಧ ಗಂಟೆ ಸ್ಕಿಪ್ಪಿಂಗ್ ಮಾಡಲು ಮೀಸಲಿಡಿ. ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಅಸ್ವಸ್ಥತೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸೂಚನೆ: ಹೃದಯದ ಸಮಸ್ಯೆ, ಯಾವುದೇ ಶಸ್ತ್ರಚಿಕಿತ್ಸೆ, ಅಧಿಕ ರಕ್ತದೊತ್ತಡವಿದ್ದರೆ ಅಥವಾ ಗಂಭೀರ ಗಾಯಗೊಂಡ ಬಳಿಕ ಸ್ಕಿಪ್ಪಿಂಗ್ ಅಭ್ಯಾಸ ಮಾಡಬಾರದು. ವೈದ್ಯರು ಅನುಮತಿ ಮುಂದುವರೆಯುವುದು ಉತ್ತಮ.