Advertisement

Halim Seeds: ಪೌಷ್ಠಿಕಾಂಶದ ಶಕ್ತಿ ಕೇಂದ್ರ… ಹಲೀಮ್‌ ಬೀಜಗಳ ಪ್ರಯೋಜನವೇನು?

04:14 PM Dec 06, 2023 | Team Udayavani |

ಹಲೀಮ್ ಬೀಜಗಳು ಪೌಷ್ಠಿಕಾಂಶದ ಶಕ್ತಿ ಕೇಂದ್ರ ಎಂದೇ ಜನಪ್ರಿಯ. ಈ ಸಣ್ಣ ಬೀಜಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ತುಂಬಿದೆ. ಹಲೀಮ್ ಬೀಜಗಳಲ್ಲಿ ಪೌಷ್ಠಿಕಾಂಶ ಮಾತ್ರವಲ್ಲದೇ ಖನಿಜಗಳು, ವಿಟಮಿನ್ ಇ, ಎ, ಸಿ, ಕೆ, ಫೋಲಿಕ್ ಆಮ್ಲ, ಪ್ರೋಟೀನ್, ಕಬ್ಬಿಣ, ಫೋಲೇಟ್, ಕ್ಯಾಲ್ಸಿಯಂ, ಫಾಸ್ಫರಸ್, ಮೆಗ್ನೀಶಿಯಮ್ ಮತ್ತು ಫೈಬರ್‌ಗಳು ಕೂಡಾ ಇವೆ.

Advertisement

ಹಲೀಮ್ ಬೀಜಗಳು ಆಳ್ವಿ ಬೀಜಗಳು, ಅಲಿವ್ ಬೀಜಗಳು ಅಥವಾ ಗಾರ್ಡನ್ ಕ್ರೆಸ್ ಬೀಜಗಳು ಎಂದೂ ಕರೆಯಲ್ಪಡುತ್ತದೆ.

ಎಲ್ಲರ ಆರೋಗ್ಯ ಕಾಪಾಡುವ ಈ ಸಣ್ಣ ಕೆಂಪು ಬಣ್ಣದ ಬೀಜಗಳು ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅನಿಯಮಿತ ಮುಟ್ಟಿನ ಸಮಸ್ಯೆ, ಹಾರ್ಮೋನ್‌ ಅಸಮತೋಲನ, ಸ್ತನ ಕ್ಯಾನ್ಸರ್‌, ನಿಯಂತ್ರಿಸಲು ಹಲೀಮ್ ಬೀಜದ ಪಾನೀಯ ಅತೀ ಅಗತ್ಯ.

ರೋಗನಿರೋಧಕ ಶಕ್ತಿ, ರಕ್ತಹೀನತೆ, ಮಲಬದ್ಧತೆ, ತೂಕ ಕಳೆದುಕೊಳ್ಳಲು, ಮಧುಮೇಹ.. ಹೀಗೆ ಹಲವು ಸಮಸ್ಯೆಗಳೆಗೆ ಹಲೀಮ್ ಬೀಜಗಳು ಸಹಾಯ ಮಾಡುತ್ತದೆ. ಇದರ ಕುರಿತು ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ..

ಮಧುಮೇಹ ನಿಯಂತ್ರಣ:

Advertisement

ದಿನನಿತ್ಯ ನಿಯಮಿತವಾಗಿ ಹಲೀಮ್ ಬೀಜಗಳ ಸೇವನೆ ಮಧುಮೇಹ ಇರುವವರಿಗೆ ಸಹಾಯಕ. ಈ ಬೀಜಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆ ಮಾಡುತ್ತದೆ ಹಾಗೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಎದೆಹಾಲಿನ ಉತ್ಪಾದನೆಗೆ:

ಹಲೀಮ್ ಬೀಜಗಳು ಗ್ಯಾಲಕ್ಟಾಗೋಗ್ ಎಂಬ ಅಂಶ ಹೊಂದಿದ್ದು, ಅದು ಹಾಲುಣಿಸುವ ಮಹಿಳೆಯರಲ್ಲಿ ಎದೆಹಾಲಿನ ಉತ್ಪಾದನೆ ಸುಧಾರಿಸುತ್ತದೆ. ಮಗುವಿಗೆ ಬೇಕಾದಷ್ಟು ಹಾಲು ಇಲ್ಲದ ಮಹಿಳೆಯರು ಹೆರಿಗೆಯ ನಂತರ, ತಜ್ಞರ ಸಲಹೆಯೊಂದಿಗೆ ಇದನ್ನು ಸೇವಿಸಬಹುದು. ಹೆರಿಗೆಯ ನಂತರ ದೇಹಕ್ಕೆ ಶಕ್ತಿ ನೀಡಲು ಆಳ್ವಿ ಬೀಜಗಳನ್ನು ಬೆಲ್ಲದ ಜತೆಗೆ ಸೇವಿಸುವುದು ಉತ್ತಮ.

ಹೃದಯದ ಆರೋಗ್ಯಕ್ಕೆ:

ಹಲೀಮ್‌ ಬೀಜಗಳ ದೈನಂದಿನ ಸೇವನೆ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನಲಾಗಿದೆ. ಇದು ಒಮೆಗಾ-3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲ ಈ ಹಲೀಮ್‌ ಬೀಜ. ಇದು ಹೃದಯವನ್ನು ಆರೋಗ್ಯಕರವಾಗಿ ಮತ್ತು ಪಾರ್ಶ್ವವಾಯುಗಳಿಂದ ರಕ್ಷಿಸುತ್ತದೆ.

ಆಸ್ತಮಾ ರೋಗಿಗಳು ಹಲೀಮ್‌ ಬೀಜ ಸೇವಿಸುವುದರಿಂದ ಶ್ವಾಸಕೋಶದ ಪ್ರಚೋದನೆ ಹೆಚ್ಚಿಸುತ್ತದೆ ಹಾಗೂ ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸುತ್ತದೆ ಎಂದು ವರದಿಯೊಂದು ತಿಳಿಸಿದೆ.

ತೂಕ ನಿಯಂತ್ರಣ:

ಹಲೀಮ್ ಬೀಜಗಳು ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಈ ಬೀಜ ಸೇವಿಸುವುದರಿಂದ ದೇಹ ಹೆಚ್ಚು ಶಕ್ತಿ ಪಡೆಯುತ್ತದೆ. ದೀರ್ಘಕಾಲದವರೆಗೆ ಹಸಿವು ಇರುವುದಿಲ್ಲ. ಪದೆ-ಪದೆ ತಿನ್ನುವುದರಿಂದ ದೂರವಿರಲು ಹಾಗೂ ತೂಕ ನಿಯಂತ್ರಣದಲ್ಲಿಡಲು ಈ ಹಲೀಮ್ ಬೀಜಗಳು ಉತ್ತಮ. ಬೆಳಿಗ್ಗೆ ಅಥವಾ ಊಟದ ನಡುವೆ ಖಾಲಿ ಹೊಟ್ಟೆಯಲ್ಲಿ ಹಲೀಮ್‌ ಬೀಜ ಸೇವಿಸುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.

ಪೌಷ್ಟಿಕಾಂಶ ಹೆಚ್ಚಳ:

ಹಲೀಮ್‌ ಬೀಜಗಳು ಪ್ರೋಟೀನ್ ಮತ್ತು ಕೊಬ್ಬಿನ ಉತ್ತಮ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ. ಮಕ್ಕಳು ಮತ್ತು ಹದಿಹರೆಯದವರಿಗೆ ಅವರ ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸಲು ಈ ಬೀಜ ಸೇವಿಸಬಹುದು.

ರಕ್ತಹೀನತೆ ಸಮಸ್ಯೆಗೆ:

ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಹಲೀಮ್‌ ಬೀಜ ಉತ್ತಮ. ಇದರಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ. ಇದರಲ್ಲಿರುವ ಕಬ್ಬಿಣ ಮತ್ತು ಫೋಲಿಕ್ ಆಮ್ಲ ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತಾರೆ.

1 ಚಮಚ ಹಲೀಮ್‌ ಬೀಜ 12 ಮಿಗ್ರಾಂ ಕಬ್ಬಿಣವನ್ನು ನೀಡುತ್ತದೆ. ದೀರ್ಘಕಾಲದ ರಕ್ತಹೀನತೆಯಿಂದ ಬಳಲುತ್ತಿದ್ದರೆ ಅಥವಾ ಕಡಿಮೆ ಹಿಮೋಗ್ಲೋಬಿನ್ ಮಟ್ಟ ಹೊಂದಿದ್ದರೆ ಹಲೀಮ್‌ ಬೀಜಗಳನ್ನು ಅಗತ್ಯವಾಗಿ ಸೇವಿಸಬೇಕು.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ:

ಹಲೀಮ್‌ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಮಲಬದ್ಧತೆ, ಉಬ್ಬುವುದು ಮತ್ತು ಅಜೀರ್ಣದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ:

ಹಲೀಮ್ ಬೀಜಗಳಲ್ಲಿ ವಿಟಮಿನ್ ಸಿ, ಎ, ಇ, ರೋಗನಿರೋಧಕ ಮತ್ತು ಫೋಲಿಕ್ ಆಮ್ಲಗಳು ಸಮೃದ್ಧವಾಗಿವೆ. ಈ ಬೀಜ ಸೇವಿಸುವುದರಿಂದ ದೇಹ ಬಲಗೊಳ್ಳುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಚರ್ಮ ಮತ್ತು ಕೂದಲಿಗೆ:

ಇದು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಲೀಮ್ ಬೀಜ ತಿನ್ನುವುದರಿಂದ ಚರ್ಮದ ಸಡಿಲತೆ ಕಡಿಮೆಯಾಗುತ್ತದೆ. ಚರ್ಮದಲ್ಲಿನ ಸುಕ್ಕು ದೂರವಾಗುತ್ತದೆ. ‌ಹಲೀಮ್‌ ಬೀಜ ತಿನ್ನುವುದರಿಂದ ಕೂದಲು ಉದುರುವಿಕೆಯ ಎಲ್ಲಾ ಸಮಸ್ಯೆಗಳನ್ನು ಪರಿಹಾರ ನೀಡುತ್ತದೆ.

ಗಮನಿಸಬೇಕಾದ ಅಂಶ:

ಅತಿಯಾದರೆ ಅಮೃತವೂ ವಿಷ ಎಂಬಂತೆ .. ಹಲೀಮ್‌ ಬೀಜಗಳನ್ನು ಕೂಡಾ ಅತಿಯಾಗಿ ಬಳಸದೆ, ದಿನನಿತ್ಯ ನಿಯಮಿತವಾಗಿ ಬಳಸಬೇಕು.

ಅಲಿವ್ ಬೀಜಗಳು ದೇಹದಿಂದ ಪೊಟ್ಯಾಸಿಯಮ್ ಅನ್ನು ಹೊರಹಾಕುವಿಕೆಯನ್ನು ಹೆಚ್ಚಿಸಬಹುದು. ಆದ್ದರಿಂದ, ಪೊಟ್ಯಾಸಿಯಮ್ ಕೊರತೆಯಿರುವ ಜನರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದನ್ನು ತಪ್ಪಿಸಬೇಕು.

ಪ್ರತಿದಿನ ಹಲೀಮ್ ಬೀಜಗಳನ್ನು ಸೇವಿಸುವ ಮೊದಲು ಹಲವಾರು ಅಂಶಗಳನ್ನು ಪರಿಗಣಿಸಬೇಕು. ವ್ಯಕ್ತಿಯ ವಯಸ್ಸು, ಆರೋಗ್ಯ, ಅಲರ್ಜಿಗಳು ಮತ್ತು ಇತರ ಪೂರ್ವ ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಪರಿಗಣಿಸಬೇಕು.

ಅಲಿವ್ ಬೀಜಗಳನ್ನು ಜೇನುತುಪ್ಪ ಅಥವಾ ನಿಂಬೆ ನೀರಿನೊಂದಿಗೆ ಗಿಡಮೂಲಿಕೆ ಚಹಾದಂತಹ ವಿವಿಧ ಪಾನೀಯಗಳಲ್ಲಿ ಬೆರೆಸಬಹುದು.

ರಾತ್ರಿಯಿಡೀ ನೀರಿನಲ್ಲಿ ಒಂದು ಚಮಚ ಬೀಜಗಳನ್ನು ನೆನೆಸಿ ಮತ್ತು ಬೆಳಿಗ್ಗೆ ನಿಂಬೆ ರಸದೊಂದಿಗೆ ಸೇವಿಸಬಹುದು.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next