Advertisement

ಸೈಕ್ಲಿಂಗ್‌ನ ಪ್ರಯೋಜನಗಳು

09:32 PM Mar 16, 2020 | mahesh |

ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸೈಕ್ಲಿಂಗ್‌ ಅತ್ಯುತ್ತಮ ಮಾರ್ಗ. ಅಧ್ಯಯನದ ಪ್ರಕಾರ ಸೈಕ್ಲಿಂಗ್‌ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸುವ ಜತೆಗೆ ಮನಸ್ಥಿತಿ,ವಿಲ್‌ ಪವರ್‌ ವೃದ್ಧಿಗೆ ಇದು ಸಹಕಾರಿ. ಸೈಕ್ಲಿಂಗ್‌ನಿಂದಾಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ.

Advertisement

ಒತ್ತಡ ನಿವಾರಣೆ
ಸೈಕ್ಲಿಂಗ್‌ ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ. ಸೈಕ್ಲಿಂಗ್‌ ಮಾಡುತ್ತಾ ನೀವು ಹೊಸ ಹೊಸ ಜಾಗಕ್ಕೆ ಭೇಟಿ ನೀಡಬಹುದು. ಇದು ನಿಮ್ಮ ಮನಸ್ಸಿನ ಮೇಲೆ ಸಕರಾತ್ಮಕವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ದಿನದ ಸ್ವಲ್ಪ ಸಮಯವನ್ನು ಸೈಕ್ಲಿಂಗ್‌ಗೆ ಮೀಸಲಿಡಿ.

ಕೊಬ್ಬು ಕರಗಿಸುತ್ತದೆ
ಸೈಕ್ಲಿಂಗ್‌ನಿಂದ ಕೊಬ್ಬು ಕರಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಒಂದು ಗಂಟೆ ಸೈಕಲ್‌ ತುಳಿಯುವುದರಿಂದ ಸುಮಾರು 400ರಿಂದ 1,000 ಕ್ಯಾಲರಿ ಕರಗುತ್ತದೆ ಎಂದು ಅಧ್ಯಯನ ತಿಳಿಸುತ್ತದೆ.

ಹೃದಯ ಆರೋಗ್ಯಕ್ಕೂ ಉತ್ತಮ
ಸೈಕಲ್‌ ತುಳಿಯುವುದರಿಂದ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಜತೆಗೆ ಹೃದಯಕ್ಕೆ ಸರಬರಾಜಾಗುವ ರಕ್ತದ ಪ್ರಮಾಣವೂ ಉತ್ತಮಗೊಳ್ಳುತ್ತದೆ. ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಕಡಿಮೆ.

ಉತ್ತಮ ನಿದ್ದೆ
ನಿದ್ರಾ ಹೀನತೆಯಿಂದ ಬಳಲುವವರಿಗೆ ಸೈಕ್ಲಿಂಗ್‌ ಪರಿಹಾರ ವಾಗಬಲ್ಲದು. ಜಾರ್ಜಿಯಾ ವಿಶ್ವ ವಿದ್ಯಾಲಯದ ಅಧ್ಯಯನ ಕಂಡುಕೊಂಡ ಪ್ರಕಾರ ನಿದ್ರೆಗೂ ಸೈಕ್ಲಿಂಗ್‌ಗೂ ನೇರ ಸಂಬಂಧವಿದೆ. ಸೈಕ್ಲಿಂಗ್‌ ಮಾಡುವವರು ಚೆನ್ನಾಗಿ ನಿದ್ರಿಸಿರುವುದು ಕಂಡುಬಂದಿದೆ. ಸೈಕ್ಲಿಂಗ್‌ ಒತ್ತಡ ನಿವಾರಿಸುವ ಜತೆಗೆ ಆತಂಕವನ್ನೂ ಕಡಿಮೆಗೊಳಿಸುವ ಶಕ್ತಿ ಹೊಂದಿದೆ.

Advertisement

ಸ್ನಾಯು ದೃಢಗೊಳಿಸುತ್ತದೆ
ಸೈಕ್ಲಿಂಗ್‌ ಸ್ನಾಯು ದೃಢಗೊಳಿಸಲೂ ಸಹಾಯ ಮಾಡುತ್ತದೆ. ನಿತ್ಯ ಸೈಕ್ಲಿಂಗ್‌ ಮಾಡುವುದರಿಂದ ಉತ್ತಮ ಆಕಾರದ ಶರೀರ ನಿಮ್ಮದಾಗುತ್ತದೆ.

ಸೈಕಲ್‌ ತುಳಿದ ಅನಂತರ ರಕ್ತ ಪ್ರವಹಿಸುವ ಪ್ರಮಾಣ ಶೇ. 40ರಷ್ಟು ಹೆಚ್ಚಾಗಿರುವುದ ಅಧ್ಯಯನದಿಂದ ಕಂಡು ಬಂದಿದೆ. ಜತೆಗೆ ಸ್ಮರಣ ಶಕ್ತಿ ಹೆಚ್ಚಳಕ್ಕೂ ಕಾರಣವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next