ಕೆ.ಆರ್.ನಗರ: ಸರ್ಕಾರ ಸಾಲ ಮನ್ನ ಮಾಡಿದ್ದರಿಂದ ತಾಲೂಕಿನ ಸುಮಾರು 9, 500 ಮಂದಿ ರೈತರು 31 ಕೋಟಿ ರೂಗಳಷ್ಟು ಯೋಜನೆಯ ಲಾ¸ವನ್ನು ಪಡೆದಿದ್ದಾರೆ ಎಂದು ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿಪಂ ಸದಸ್ಯ ಅಮಿತ್.ವಿ.ದೇವರಹಟ್ಟಿ ಹೇಳಿದರು.
ಅಂಬಾ ಭವಾನಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಆಸರೆ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನುಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೇವಲ 6 ಸಹಕಾರ ಸಂಘಗಳು ಇದ್ದು ಎಚ್.ವಿಶ್ವನಾಥ್ ಸಹಕಾರ ಮಂತ್ರಿಯಾದ ನಂತರ ಹೆಚ್ಚುವಾರಿಯಾಗಿ 16 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಆರಂಭಿಸಿ ರೈತರು ಬೆಲೆ ಸಾಲ ಪಡೆಯಲು ಅನುಕೂಲ ಕಲ್ಪಿಸಿದರು ಎಂದು ತಿಳಿಸಿದರು.
ಸಹಕಾರ ಸಂಘಗಳು ಷೇರುದಾರ ಸದಸ್ಯರ ಹಣದಿಂದ ನಡೆಯುತ್ತಿದ್ದು ರೈತರು ಸಹಕಾರ ಸಂಘಗಳ ಮೇಲೆ ನಂಬಿಕೆ ಇಟ್ಟು ಷೇರು ಕಟ್ಟುವುದರ ಜತೆಗೆ ಇತರ ಆರ್ಥಿಕ ಚಟುವಟಿಕೆಯನ್ನು ನಡೆಸಬೇಕೆಂದು ಕೋರಿದ ಅವರು ಸರ್ಕಾರ ನೀಡುವ ಕಡಿಮೆ ಬಡ್ಡಿದರದ ಸಾಲಸೌಲಭ್ಯ ಸೇರಿದಂತೆ ಇತರ ಸವಲತ್ತುಗಳನ್ನು ಪಡೆಯಬಹುದಾಗಿದೆ.
ಆದರೆ ಸಾಲಮನ್ನಾದಿಂದ ಲಾಭ ಪಡೆದ ರೈತರುಗಳು ಸರ್ಕಾರಕ್ಕೆ ಮತ್ತು ತಾಲೂಕಿನಲ್ಲಿ ಹೆಚ್ಚು ಸಹಕಾರ ಸಂಘಗಳು ಸ್ಥಾಪನೆಯಾಗಲು ಕಾರಣಕರ್ತರಾದವರಿಗೆ ಕೃತಜ್ಞತೆ ಸಲ್ಲಿಸುವ ಬದಲಿಗೆ ನಿತ್ಯ 100-200 ನೀಡುವ ರಾಜಕೀಯ ಮುಖಂಡರನ್ನು ವೈಭವೀಕರಿಸುತ್ತಿರುವುದು ದುರದುಷ್ಟಕರ ಎಂದರು.
ಆಸರೆ ಸಹಕಾರ ಸಂಘ ಷೇರುದಾರ ಸದಸ್ಯ ಅಕಾಲಿಕ ಮರಣಕ್ಕೆ ತುತ್ತಾದರೆ 2 ಸಾವಿರ ರೂ ಸಹಾಯಧನ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಯೋಜನೆಯನ್ನು ಜಿಲ್ಲಾ ಬ್ಯಾಂಕ್ ಅಳವಡಿಸಿಕೊಳ್ಳುವಂತೆ ಸಂಘದ ಸಬೆಯಲ್ಲಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ ಸಂಘದಲ್ಲಿ ಕೇವಲ 302 ಮಂದಿ ಷೇರುದಾರ ಸದಸ್ಯರು ಇದ್ದು 4. 62 ಲಕ್ಷ ರೂ. ಬಂಡವಾಳವನ್ನು ಹೊಂದಿದ್ದು ಸಂಘ 52 ಸಾವಿರ ನಿವ್ವಳ ಲಾಭವನ್ನು ಗಳಿಸಿದೆ ಎಂದರು. ಉಪಾಧ್ಯಕ್ಷೆ ಆರ್.ಎನ್.ಪದ್ಮ, ನಿರ್ದೇಶಕರಾದ ಜಿ.ಕೆ.ಸುಮ್ಮತಿ, ಡಿ.ಎನ್.ದಿನೇಶ್, ಸ್ವಾಮಿಗೌಡ, ಹೆಚ್.ಜೆ.ಲಕ್ಷ್ಮಣ, ಎಂ.ನಾಗರಾಜು, ನಾಗೇಗೌಡ, ಲತಾ, ರಾಜಶೇಖರ್, ಕೃಷ್ಣೇಗೌಡ, ಬಿ.ಎಲ್.ರಾಜಶೇಖರ್ ಇತರರಿದ್ದರು.