Advertisement

ಉಪ್ಪಿಂದ ಬಂದ ಲಾಭ!

04:50 AM Jun 15, 2020 | Lakshmi GovindaRaj |

ಒಂದು ಹೋಟೆಲಿನಲ್ಲಿ ಮಾಲೀಕರು, ಹೊಸ ಬಗೆಯ ಸಮಸ್ಯೆಯನ್ನು ಎದುರಿಸತೊಡಗಿದ್ದರು. ಹೋಟೆಲಿನಲ್ಲಿ ಉಪ್ಪಿನ ಖರ್ಚು ಹೆಚ್ಚತೊಡಗಿತ್ತು ಆ ಖರ್ಚಿನ ಮೂಲ ಎಲ್ಲಿದೆ ಎಂದು ಪರಿಶೀಲಿಸಿದಾಗ ಅದು ಸಾಲ್ಟ್ ಶೇಕರ್ಸ್‌ ನಿಂದ  ಎಂದು ತಿಳಿದುಬಂದಿತು. ಸಾಲ್ಟ್‌ ಶೇಕರ್ಸ್‌ ಎಂದರೆ, ಟೇಬಲ್‌ ಮೇಲಿಡುವ ಉಪ್ಪಿನ ಬಾಟಲ್‌ ಆ ಪುಟ್ಟ ಉಪ್ಪಿನ ಬಾಟಲ್‌ನಿಂದ ನಷ್ಟ ವಾಗುವ ವಿಚಾರ ಅಚ್ಚರಿ ಮೂಡಿಸುವಂಥದ್ದು.

Advertisement

ಆದರೆ ಯಾವ ರೀತಿ ಪೈಸೆ ಪೈಸೆ ಸೇರಿಯೇ ಸಂಪತ್ತು  ಶೇಖರಣೆಯಾಗುವುದೋ, ಆದೇ ಮಾತು ನಷ್ಟಕ್ಕೂ ಅನ್ವಯಿಸುತ್ತದೆ. ಸ್ವಲ್ಪ ಸ್ವಲ್ಪವಾಗಿಯೇ ಆಗುವ ನಷ್ಟವೂ, ಕಾಲಾಂತರದಲ್ಲಿ ಭಾರೀ ಹಾನಿಯುಂಟು ಮಾಡಬಲ್ಲುದು. ಆ ಹೋಟೆಲಿನಲ್ಲಿ ಗ್ರಾಹಕರು ಅಗತ್ಯ ಕ್ಕಿಂತ ಹೆಚ್ಚಿನ ಪ್ರಮಾಣದ ಉಪ್ಪನ್ನು ಬಳಸಿ, ವ್ಯರ್ಥ ಮಾಡುತ್ತಿ ದ್ದಿದ್ದು ಮ್ಯಾನೇಜರ್‌ ಗಮನಕ್ಕೆ ಬಂದಿತು. ಇದನ್ನು ತಡೆಯಲು ಅವರು ಒಂದು ಉಪಾಯ ಹೂಡಿದರು.

ಅದುವರೆಗೂ ಹೋಟೆಲಿನಲ್ಲಿ ಬಳಸುತ್ತಿದ್ದ ಉಪ್ಪಿನ ಬಾಟಲಿಯ ಮುಚ್ಚಳದಲ್ಲಿ ಹತ್ತಕ್ಕೂ  ಹೆಚ್ಚು ತೂತುಗಳಿದ್ದವು. ಅದರಿಂದಾಗಿ ಹೆಚ್ಚಿನ ಪ್ರಮಾಣದ ಉಪ್ಪು ಸೋರಿಕೆಯಾಗುತ್ತಿತ್ತು. ಹಾಗಾಗಿ ನಾಲ್ಕೈದು ತೂತುಗಳನ್ನು ಹೊಂದಿದ್ದ ಬಾಟಲಿಯನ್ನು ತಂದು, ಹಳೆಯದನ್ನು ಬದಲಾಯಿಸಲಾಯಿತು. ಇದರಿಂದಾಗಿ ಗ್ರಾಹಕರು  ತಮಗೆ ಬೇಕಾದಷ್ಟೇ ಪ್ರಮಾಣದ ಉಪ್ಪು ಬಳಸುವಂತಾಯಿತು. ಇದರಿಂದಾಗಿ ಉಪ್ಪು ವ್ಯರ್ಥವಾಗುವುದು ತಪ್ಪಿ, ಹೋಟೆಲಿನವರಿಗೆ ಆಗುತ್ತಿದ್ದ ನಷ್ಟವೂ ತಪ್ಪಿತು.

Advertisement

Udayavani is now on Telegram. Click here to join our channel and stay updated with the latest news.

Next