Advertisement

ಸಾವಯವ ಕೃಷಿಯಿಂದ ಲಾಭ-ನೆಮ್ಮದಿ; ಮಹಿಮಾ ಪಟೇಲ

06:16 PM Apr 16, 2022 | Team Udayavani |

ಅಥಣಿ: ಸಾವಯವ ಕೃಷಿಯಿಂದಲೇ ಉತ್ತಮ ಆರೋಗ್ಯ, ಖುಶಿ, ನೆಮ್ಮದಿ, ಸಮೃದ್ಧಿ ಪಡೆಯಲು ಸಾಧ್ಯ ಎಂದು ಚೆನ್ನಗಿರಿ ಮಾಜಿ ಶಾಸಕ, ಚಿಂತಕ ಮಹಿಮಾ ಪಟೇಲ ಹೇಳಿದರು.

Advertisement

ಅವರು ಸ್ಥಳೀಯ ಗಾಂಧಿ ಗುರುಕುಲ ಮತ್ತು ದಿ.ಬಿಂದುರಾವ್‌ ಕುಲಕರ್ಣಿ ಕೃಷಿ ಪ್ರತಿಷ್ಠಾನನದ ಸಂಯುಕ್ತಾಶ್ರಯದಲ್ಲಿ ದಿ| ಸಂಪದಾ ನಚಿಕೇತ ಖಾತವಟೆ ಸ್ಮರಣಾರ್ಥ ಸ್ಥಳೀಯ ಡಾ.ಆರ್‌.ಎಚ್‌.ಕುಲಕರ್ಣಿ ಸಭಾ ಭವನದಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಮತ್ತು ಸಾವಯವ ಬದುಕು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾವಯವ ಪದ್ಧತಿ ಕೃಷಿಗೆ ಹೆಚ್ಚು ವೆಚ್ಚ ತಗಲುವುದಿಲ್ಲ. ಅತೀ ಕಡಿಮೆ ವೆಚ್ಚದಲ್ಲಿಯೇ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ಉತ್ಪಾದಿಸಲು ಸಾಧ್ಯ. ಸಾವಯವ ಆಹಾರ ಬಳಸಿದಲ್ಲಿ ಒಳ್ಳೆಯ ಆರೋಗ್ಯ ಅಷ್ಟೇ ಅಲ್ಲ, ಧನಾತ್ಮಕ ಮಾನಸಿಕತೆಯನ್ನೂ ಕೂಡ ಹೊಂದಲು ಸಾಧ್ಯವಾಗುತ್ತದೆ. ಇವೆಲ್ಲದರೊಂದಿಗೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದ ಅವರು, ಕೃಷಿಯಲ್ಲಿ ರಾಸಾಯನಿಕ ಬಳಕೆಯಿಂದ ಮುಂದೊಂದು ದಿನ ಭೂಮಿ ಬರಡಾಗುತ್ತದೆ ಎಂದು ಹೇಳಿದರು.

ನಮ್ಮ ರೈತರು ಸಾವಯವ ಕೃಷಿ ಪದ್ಧತಿ ಹಂತ ಹಂತವಾಗಿ ಅಳವಡಿಸಿಕೊಳ್ಳುತ್ತ ಹೋಗಬೇಕು. ಆಗ ಮಾತ್ರ ಭೂಮಿಯ ಫಲವತ್ತತೆಯ ಜೊತೆಗೆ ಉತ್ತಮ ಆದಾಯವನ್ನೂ ಸಹ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮುದೇನೂರಿನ ಸಹಜ ಬೇಸಾಯ ತಜ್ಞ ಶಂಕರೇಗೌಡ ಮಾತನಾಡಿ, ಇತ್ತೀಚಿಗೆ ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ರೈತರು ಖರ್ಚು ಹೆಚ್ಚಾದರೂ ಪರವಾಗಿಲ್ಲ ಆದರೆ ಕಡಿಮೆ ಅವ ಧಿಯಲ್ಲಿ ಉತ್ತಮ ಇಳುವರಿ ಬರಬೇಕು ಎನ್ನುವ ಅತೀ
ಆಸೆಗೆ ಬಲಿಯಾಗಿದ್ದಾರೆ. ಇದರಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ.

ರೈತರು ಮಿಶ್ರ ಬೆಳೆ ಬದಲು ಏಕ ಬೆಳೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದರಿಂದ ಲಾಭದ ಜೊತೆಗೆ ಹಾನಿಯನ್ನೂ ಕೂಡ ಅನುಭವಿಸಬೇಕಾಗುತ್ತದೆ ಎಂದ ಅವರು, ಕೇವಲ 16 ಎಕರೆಯಲ್ಲಿ ಮಿಶ್ರ ಬೆಲೆ ಬೆಳೆಯುವ ಮೂಲಕ ನಾನೇ ಸ್ವತಃ ನೆಮ್ಮದಿಯಿಂದ 20 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತೇನೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶೇಗುಣಸಿಯ ಸಾವಯವ ಕೃಷಿಕ ಕಲ್ಮೇಶ ಯಲ್ಲಡಗಿ ಮಾತನಾಡಿ, ನಮ್ಮ ತಾಲೂಕಿನಲ್ಲಿ ಕೆಲ ದಶಕಗಳಿಂದ ರೈತರು ಕಬ್ಬು ಬೆಳೆಯುತ್ತಿದ್ದಾರೆ.

Advertisement

ಇದರಿಂದಾಗಿಯೇ ರೈತರು ಸೋಮಾರಿಗಳಾಗಿದ್ದಾರೆ. ಇದಕ್ಕಾಗಿಯೇ ಕಬ್ಬಿನ ಬೆಳೆಯನ್ನು ಸೋಮಾರಿ ಬೆಳೆ ಎಂದು ಕರೆಯುತ್ತಾರೆ. ನಾನು ಕಳೆದ ಅನೇಕ ವರ್ಷಗಳಿಂದ ಸಾವಯವ ಕೃಷಿ ಅಳವಡಿಸಿಕೊಂಡಿದ್ದೇನೆ. ಜೊತೆಗೆ ಸಾವಯವ ಬೆಲ್ಲವನ್ನೂ ತಯಾರಿಸುತ್ತೇನೆ. ಈ ಬೆಲ್ಲಕ್ಕೆ ಸಾಕಷ್ಟು ಬೇಡಿಕೆ ಕೂಡ ಬಂದಿದೆ ಎಂದರು.

ದಿ| ಬಿಂದುರಾವ್‌ ಶ್ರೀನಿವಾಸರಾವ್‌ ಕುಲಕರ್ಣಿ ಕೃಷಿ ಪ್ರತಿಷ್ಠಾನದ ಡಾ| ರಾಮ್‌ ಕುಲಕರ್ಣಿ ಮಾತನಾಡಿ, ರಾಸಾಯನಿಕ ಕೃಷಿ ಪದ್ಧತಿಯಿಂದಲೇ ರೈತರು ಸಾಲಗಾರರಾಗುತ್ತಿದ್ದಾರೆ. ಸಾಲದ ಹೊರೆಯಿಂದ ಹೊರ ಬರಲು ರೈತರು ಸಾವಯವ ಅಥವಾ ಸಹಜ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಚಿಂತಕ, ಲೇಖಕ ಸು ಧೀಂದ್ರ ಕುಲಕರ್ಣಿ, ಧಾರವಾಡದ ಡಾ| ಸಂಜೀವ ಕುಲಕರ್ಣಿ, ಪ್ರಗತಿ ಪರ ಕೃಷಿಕ ಸತೀಶ ಕುಲಕರ್ಣಿ, ಆರ್‌.ಎಸ್‌.ಎಸ್‌. ಸಹ ಸಂಘಚಾಲಕ ಅರವಿಂದರಾವ ದೇಶಪಾಂಡೆ, ಮುದೇನೂರಿನ ಸುನೀತಕ್ಕಾ, ಮುಂಬೈಯ ಡಾ| ಕಾಮಾಕ್ಷಿ ಭಾಟೆ, ನ್ಯಾಯವಾದಿ ಸುಹಾಸ ದಾತಾರ, ಡಾ| ಶ್ರೀವತ್ಸ ಕುಲಕರ್ಣಿ, ಮಂದಾರ ಖಾತವಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next