Advertisement
ಬೆಂದ್ರ್ ತೀರ್ಥದ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಅಧ್ಯಯನ ನಡೆಸಿದ್ದು, ದಕ್ಷಿಣ ಭಾರತದಲ್ಲಿರುವ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಎಂದು ಗುರುತಿಸಿದೆ. ತುಳು ಭಾಷೆಯಲ್ಲಿ “ಬೆಂದ್ರ್’ ಎಂದರೆ ಬಿಸಿ ಎಂದರ್ಥ. ಬೆಂದ್ರ್ ತೀರ್ಥ ಪುತ್ತೂರು ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ.
ಇರ್ದೆ ಗ್ರಾಮದಲ್ಲಿ ವಿಷ್ಣುಮೂರ್ತಿ ದೇವಸ್ಥಾನ ಇದೆ. ಹಿಂದೆ ಕಣ್ವ ಮುನಿಗಳ ಶಿಷ್ಯರು ಈ ಭಾಗದ ದಟ್ಟ ಕಾಡುಗಳಲ್ಲಿ ಸಂಚರಿಸುವಾಗ ಹುಲಿಗಳು ಇತರೆ ಪ್ರಾಣಿಗಳೊಂದಿಗೆ ಸಾಮರಸ್ಯ ಬದುಕುತ್ತಿರುವುದನ್ನು ನೋಡಿ ಅಚ್ಚರಿ ಪಟ್ಟಿದ್ದರು ಎಂಬುದು ಇತಿಹಾದ ತಿಳಿಸುತ್ತದೆ. ಈ ಪ್ರದೇಶದಲ್ಲಿ ಜಾನು ವಾರುಗಳು ಹೆಚ್ಚು ಕಂಡು ಬರುತ್ತಿದ್ದವು. ಆದರಿಂದ ಗೋಪಾಲ ಕ್ಷೇತ್ರ ಎಂದು ಕರೆದಿದ್ದರು. ತೀರ್ಥ ಪ್ರದೇಶದ ಸಮೀಪ ದಲ್ಲಿ ಸೀರೆ ನದಿ ಉಕ್ಕಿ ಹರಿಯುತ್ತಿದೆ. ಬೆಂದ್ರ್ ತೀರ್ಥವನ್ನು ದೇವಸ್ಥಾನದಲ್ಲಿ ತೀರ್ಥವಾಗಿ ಬಳಸಲಾಗುತ್ತಿದೆ. ಬೆಂದ್ರ್ ತೀರ್ಥ ಪ್ರದೇಶದಲ್ಲಿ ಅಶ್ವತ್ಥ ಮರ ಮತ್ತು ಅರಳೀ ಮರ ಇರುವುದು ಧಾರ್ಮಿಕತೆಯ ಸಂಕೇತವಾಗಿದೆ. ಸೋಣ ಅಮಾವಾಸ್ಯೆ ದಿನ ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ನಡೆಸಿದ ಅನಂತರ ತೀರ್ಥದ ಕೆರೆಯಲ್ಲಿ ಆಸ್ತಿಕರು ತೀರ್ಥ ಸ್ನಾನ ಮಾಡುತ್ತಾರೆ. ನೂರಾರು ಭಕ್ತರು ತೀರ್ಥ ಸ್ನಾನ ಮಾಡಿ ಪುನೀತರಾಗುತ್ತಾರೆ.
Related Articles
Advertisement
ಇರ್ದೆ-ಬೆಂದ್ರ್ ತೀರ್ಥ ರಸ್ತೆ ಅಭಿವೃದ್ಧಿ ಆಗಲಿಬೆಂದ್ರ್ ತೀರ್ಥವನ್ನು ಸಂಪರ್ಕಿಸುವ ಇರ್ದೆ ಸಮೀಪದಿಂದ ಪೇರಲ್ತಡ್ಕದ ವರೆಗೆ ಡಾಮರು ರಸ್ತೆ ಇದೆ. ಸುಮಾರು 2 ಕಿ.ಮೀ. ರಸ್ತೆ ನಾದುರಸ್ತಿಯಲ್ಲಿದೆ. ಈ ರಸ್ತೆಯ ಒಂದು ಭಾಗವನ್ನು ಕಳೆದ ವರ್ಷ ಶಾಸಕ ಸಂಜೀವ ಮಠಂದೂರು ಅವರ ಅನುದಾನದಿಂದ ಕಾಂಕ್ರೀಟ್ ಹಾಕಿ ಅಭಿವೃದ್ಧಿ ಮಾಡಲಾಗಿದೆ. ಪೂರ್ತಿ ರಸ್ತೆ ಅಭಿವೃದ್ಧಿ ಆಗಬೇಕಿದೆ. ಬೆಂದ್ರ್ ತೀರ್ಥದಲ್ಲಿ ಬಿಸಿ ನೀರಿನ ತೀವ್ರತೆ ಇತ್ತೀಚಿನ ವರ್ಷಗಳಲ್ಲಿ ಇಳಿಕೆಯಾಗಿದೆ. ಹಲವು ವರ್ಷಗಳಿಂದ ವಿದೇಶಿ ಪ್ರವಾಸಿಗರು ಪ್ರವಾಸಿ ತಾಣ ವೀಕ್ಷಣೆಗೆ ಬರುತ್ತಿದ್ದಾರೆ. ಸ್ಥಳೀಯ ಪಂಚಾಯತ್ ಸದಸ್ಯರಾದ ರಕ್ಷಣ್ ರೈ, ಪ್ರಕಾಶ್ ರೈ ಬೈಲಾಡಿ ಕ್ಷೇತ್ರದ ಬಗ್ಗೆ ಆಂಗ್ಲ ಭಾಷೆಯಲ್ಲಿ ವಿವರಣೆ ಕೊಡುತ್ತಾರೆ. ಉತ್ತಮ ನಿರ್ವಹಣೆ ಇದ್ದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು. ಉಷ್ಣಾಂಶದ ಇಳಿಕೆ ಕಾರಣವಾದ ಅಂಶವನ್ನು ಅಧ್ಯಯನ ನಡೆಸಿ, ಹಿಂದಿನ ಉಷ್ಣಾಂಶಕ್ಕೆ ಮರಳಿ ತರುವಲ್ಲಿ ಅಧಿಕಾರಿಗಳು ಶ್ರಮಿಸಬೇಕಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಪ್ರವಾಸೋದ್ಯಮ ಇಲಾಖೆ ಯು ಬೆಂದ್ರ್ ತೀರ್ಥದ ಬಳಿಯೇ ಇರುವ ಸೀರೆ ನದಿಯಲ್ಲಿ ಬೋಟಿಂಗ್ ವ್ಯವಸ್ಥೆಗೂ ಅವಕಾಶವಿದೆ. ಶಾಸಕರೊಂದಿಗೆ ಚರ್ಚೆ
ಬೆಂದ್ರ್ ತೀರ್ಥ ಅಭಿವೃದ್ಧಿ ತುರ್ತು ಆಗಬೇಕಾಗಿದೆ. ಪಂಚಾಯತ್ ಅನುದಾನ ಸಾಲದು. ಕ್ಷೇತ್ರವು ಅಭಿವೃದ್ಧಿ ಹೊಂದಿದರೆ ಪ್ರವಾಸಿ ಗರಿಗೆ ಅನುಕೂಲ ವಾಗಲಿದೆ. ಶಾಸಕ ಸಂಜೀವ ಮಠಂದೂರು ಅವರಲ್ಲಿ ಮಾತನಾಡಿ ಅಭಿವೃದ್ಧಿಗೊಳಿಸುವ ಬಗ್ಗೆ ಚಿಂತನೆ ಮಾಡಲಾಗುವುದು.
– ಬೇಬಿ ಜಯರಾಮ ಪೂಜಾರಿ, ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷರು ನಿರ್ವಹಣೆಯೇ ಸಮಸ್ಯೆ
ಐದು ವರ್ಷಗಳ ಹಿಂದೆ 20 ಲಕ್ಷ ರೂ. ವೆಚ್ಚದ ಕಟ್ಟಡ ಕಾಮಗಾರಿ ಮುಗಿದಿದೆ. ನಿರ್ವಹಣೆಯ ಬಗ್ಗೆ ಗ್ರಾ.ಪಂ. ಮುತುವರ್ಜಿ ವಹಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ನಿರ್ವಹಣೆ ಸಾಧ್ಯವಾಗಿಲ್ಲ. ಸ್ಥಳೀಯ ಯುವಕ ಮಂಡಲ ನಿರ್ವಹಣೆಯ ಬಗ್ಗೆ ಆಸಕ್ತಿ ವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಉದಯ ಶೆಟ್ಟಿ
ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ದ.ಕ. – ಮಾಧವ ನಾಯಕ್ ಕೆ.