Advertisement

ಸಾಗುವಳಿ ಪತ್ರಕ್ಕಾಗಿ ಜಿಲ್ಲಾಡಳಿತಕ್ಕೆ ಬೇನಾಳ ಗ್ರಾಮಸ್ಥರ ಮನವಿ

05:47 PM Dec 22, 2021 | Shwetha M |

ವಿಜಯಪುರ: ಭಾರತೀಯ ದಲಿತ ಪ್ಯಾಂಥರ್‌ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಸಂಘದಿಂದ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಗರ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ-ಸಾಗುವಳಿ ಚೀಟಿ ವಿತರಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳಗ್ರಾಮದ ಆಸ್ತಿ ನಂ. 221 ಕ್ಷೇತ್ರ 109-34 ಗುಂಟೆ ಬೇನಾಳ ಗ್ರಾಮದಲ್ಲಿ ಆಸ್ತಿ ಇದೆ. ಈಗ ಸಂಬಂಧಪಟ್ಟ ಜಮೀನುಗಳಲ್ಲಿ ಸುಮಾರು ವರ್ಷಗಳಿಂದ ಕಚ್ಚಾವಹಿವಾಟು ಸಾಗುವಳಿ ಮಾಡುತ್ತ ಬಂದಿದ್ದು ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ಇದಲ್ಲದೇ ಸರ್ಕಾರಿ ಆದೇಶದಂತೆ ಬಗರ ಹುಕುಂ ಸಾಗುವಳಿದಾರರ ಪ್ರತಿ ಕುಟುಂಬಕ್ಕೆ 2 ಎಕರೆಯಂತೆ 55 ಕುಟುಂಬಗಳಿಗೆ 57 ಅರ್ಜಿ ಸಲ್ಲಿಸಲಾಗಿದೆ. ಕಾರಣ ಈ ಕುಟುಂಬಗಳಿಗೆ ಹಕ್ಕುಪತ್ರ ಸಾಗುವಳಿ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.

ನಿಂಗರಾಜ ತಳವಾರ, ರಮೇಶ ಆಲಮಟ್ಟಿ, ಬಾಬಾ ತಳವಾರ, ಬಸವರಾಜ ಗುಡಿಮನಿ, ಪವಾಡೆಪ್ಪ ಆಲಮಟ್ಟಿ, ಸೋಮಪ್ಪ ಗುಡಿಮನಿ, ಭೀಮಪ್ಪ ಆಲಮಟ್ಟಿ, ಮಹಾದೇವಪ್ಪ ತಳವಾರ, ಹನುಮಂತ ಗುಡಿಮನಿ, ನಾಗಪ್ಪ ಗುಡಿಮನಿ, ಲಕ್ಷ್ಮಣ ತಳವಾರ, ಗದ್ದೆಪ್ಪ ಮಾದರ, ಚಾಮರಾ ತಳವಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next