Advertisement

ಬೆನಕನಹಳ್ಳಿ ಹನುಮಂತ ದೇವಾಲಯ ಲೋಕಾರ್ಪಣೆ

12:40 PM May 10, 2017 | |

ಹೊನ್ನಾಳಿ: ಶಾಸಕನಾದ ನಂತರ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ನೀಡಿದ್ದ ಭರವಸೆಗಳಲ್ಲಿ ಶೇ. 75ರಷ್ಟನ್ನು ಈಡೇರಿಸಿದ್ದು, ಉಳಿದ ಒಂದು ವರ್ಷದ ಅವಧಿಧಿಯಲ್ಲಿ ಉಳಿದ ಬೇಡಿಕೆಗಳನ್ನು ಈಡೇರಿಸುವುದಾಗಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. 

Advertisement

ಬೆನಕನಹಳ್ಳಿಯಲ್ಲಿ ನೂತನ ಹನುಮಂತ ದೇವಾಲಯದ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಯಾದ ಯೋಜನೆಗಳನ್ನು ವಿವರಿಸಿ ಅವುಗಳ ಪ್ರಯೋಜನ ಪಡೆಯಲು ಜನತೆ ಮುಂದಾಬೇಕು.

ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ನಡೆದು ಸಹೋದರರಂತೆ ಹೊಂದಾಣಿಕೆಯಿಂದ ಬದುಕಬೇಕೆಂದರು. ಸಾನ್ನಿಧ್ಯ ವಹಿಸಿದ್ದ ರಾಂಪುರ ಬೃಹನ್ಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಆಶೀರ್ವಚನ ನೀಡಿ, ದೇವಾಲಯಗಳು, ಮಠ ಮಾನ್ಯಗಳು ಶಾಂತಿ-ನೆಮ್ಮದಿಯ ನೆಲೆಗಳಾಗಿದ್ದು, ಅವುಗಳನ್ನು ಸ್ವತ್ಛವಾಗಿ ನಿರ್ವಹಣೆ ಮಾಡಬೇಕೆಂದರು. 

ಹಿರೇಕಲ್ಮಠದ ಪಟ್ಟಾಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಾಲಯಗಳು ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯನ್ನು ಹೊಂದಿವೆ. ಅವುಗಳು ಧರ್ಮ, ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸುವ ತಾಣಗಳಾಗಿವೆ ಎಂದರು. 

ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗದ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಹನುಮಂತ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಟಿ.ಜಿ. ಮಲ್ಲೇಶಪ್ಪ, ಪಟ್ಟಣಶೆಟ್ಟಿ ವೀರಣ್ಣ, ತಿತ್ತಿ ಗಣೇಶಣ್ಣ,

Advertisement

ಮಳಲಿ ಸಿದ್ದಣ್ಣ ಮಾಸ್ತರ್‌, ಬಿಳಿಯಣ್ಣಾರ ಹನುಮಂತಣ್ಣ ಮಾಸ್ತರ್‌, ಬಿ.ಜಿ. ಬೆನಕಣ್ಣ, ಒಂಭತ್‌ರೊಟ್ಟಿ ಟಿ. ರಂಗಣ್ಣ, ಕುಂದೂರು ಸಿದ್ದಣ್ಣ, ಮೌರಜ್ಜಿ ಹನುಮಂತಣ್ಣ, ಮಡಿವಾಳರ ಗಂಗಣ್ಣ ಸೇರಿದಂತೆ ಗ್ರಾಮದ ನಾನಾ ದೇವಾಲಯಗಳ ಸಮಿತಿ ಅಧ್ಯಕ್ಷರು ಹಾಗೂ ಹನುಮಂತ ದೇವಾಲಯ ನಿರ್ಮಾಣಕ್ಕೆ ಸಹಕರಿಸಿದ ಗ್ರಾಮಸ್ಥರನ್ನು ಶ್ರೀಗಳು ಸನ್ಮಾನಿಸಿದರು. ಟಿ.ಜಿ. ರೇಷ್ಮಾರುದ್ರೇಶ್‌ ನಿರೂಪಿಸಿದರು. 

ಎಚ್‌.ಎನ್‌. ರುದ್ರೇಶ್‌ ಸ್ವಾಗತಿಸಿದರು. ಬಿ.ಜಿ. ಪಟಾಟೆಗೌಡ ವಂದಿಸಿದರು. ದೇವಾಲಯ ಪ್ರವೇಶೋತ್ಸವ ಸಂಬಂಧ ಮೂರು ದಿನಗಳ ಕಾಲ ನಾನಾ ಧಾರ್ಮಿಕ ವಿಧಿವಿಧಾನಗಳು ನಡೆದು ಮೂರನೇ ದಿನ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಶ್ರೀ ಆಂಜನೇಯ ಪ್ರಾಣಪ್ರತಿಷ್ಠಾಪನೆ ಹಾಗೂ ದೇವಾಲಯದ ಕಲಶ  ಪ್ರತಿಷ್ಠಾಪನೆ ನೆರವೇರಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next