Advertisement

ODI World Cup ಆಡಲು ಬೆನ್‌ ಸ್ಟೋಕ್ಸ್‌  ನಿರ್ಧಾರ?

11:03 PM Aug 14, 2023 | Team Udayavani |

ಲಂಡನ್‌: ಇಂಗ್ಲೆಂಡ್‌ ಟೆಸ್ಟ್‌ ನಾಯಕ ಮತ್ತು ಖ್ಯಾತ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರು ನಿವೃತ್ತಿಯಿಂದ ಹಿಂದೆ ಸರಿದು ಮುಂಬರುವ ದಿನಗಳಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ ಎಂದು ಬ್ರಿಟನ್‌ನ ಪತ್ರಿಕೆಯೊಂದು ಬರೆದಿದೆ.

Advertisement

ಬೆನ್‌ ಸ್ಟೋಕ್ಸ್‌ ಅವರು ಏಕದಿನ ಕ್ರಿಕೆಟಿಗೆ ನೀಡಿದ ನಿವೃತ್ತಿ ನಿರ್ಧಾರವನ್ನು ಬದಲಿಸಿ ಮುಂಬರುವ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಪ್ರಶಸ್ತಿ ಉಳಿಸಿಕೊಳ್ಳಲು ನೆರವಾಗಲಿದ್ದಾರೆ.

ಈ ನಡುವೆ ಅವರು ಮುಂದಿನ ವರ್ಷದ ಐಪಿಎಲ್‌ ತಪ್ಪಿಸುವ ಸಾಧ್ಯತೆಯಿದೆ. ಒಂದು ವೇಳೆ ಜಾಸ್‌ ಬಟ್ಲರ್‌ ವಿಶ್ವಕಪ್‌ನಲ್ಲಿ ಆಡು ವಂತೆ ಕೇಳಿಕೊಂಡರೆ ಸ್ಟೋಕ್ಸ್‌ ಆಡಲು ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಮುಂದಿನ ವರ್ಷದ ಜನವರಿ 25ರಿಂದ ಮಾರ್ಚ್‌ 11ರ ವರೆಗೆ ಭಾರತದಲ್ಲಿ ಐದು ಪಂದ್ಯ ಗಳ ಟೆಸ್ಟ್‌ ಸರಣಿಯಲ್ಲಿ ಸ್ಟೋಕ್ಸ್‌ ಪಾಲೊÛಳ್ಳುವ ಕಾರಣ ಐಪಿಎಲ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಒಂದು ವೇಳೆ ಐಪಿಎಲ್‌ನಲ್ಲಿ ಆಡಿದರೆ ಅವರು ಒಟ್ಟಾರೆ 5 ತಿಂಗಳು ಭಾರತದಲ್ಲಿ ಇರಬೇಕಾ ಗುತ್ತದೆ. ಇದು ಅವರಿಗೆ ಸ್ವಲ್ಪಮಟ್ಟಿಗೆ ಕಷ್ಟವಾಗಲಿದೆ ಎನ್ನಲಾಗಿದೆ. ಹೀಗಾಗಿ ಐಪಿಎಲ್‌ ಕೂಟ ತಪ್ಪಿಸಲು ಅವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next