ಲಂಡನ್: ಜೋ ರೂಟ್ ಅವರ ರಾಜೀನಾಮೆಯಿಂದ ತೆರವಾದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನ ಸ್ಥಾನಕ್ಕೆ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ನೇಮಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಜೋ ರೂಟ್ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ), ” ಬೆನ್ ಸ್ಟೋಕ್ಸ್ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಿದೆ. ಅವರು ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ 81 ನೇ ನಾಯಕರಾಗುವಲ್ಲಿ ಜೋ ರೂಟ್‌ಗೆ ಉತ್ತರಾಧಿಕಾರಿಯಾಗಿದ್ದಾರೆ. ಇಸಿಬಿ ಮಧ್ಯಂತರ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈ ನೇಮಕಾತಿಯನ್ನು ಅನುಮೋದಿಸಿದ್ದಾರೆ” ಎಂದು ಹೇಳಿದೆ.
64 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ರೂಟ್, 27 ಪಂದ್ಯಗಳನ್ನು ಜಯಿಸಿ 26 ಪಂದ್ಯಗಳಲ್ಲಿ ಸೋಲನುಭವಿಸಿದ್ದರು. ಸತತ ಸೋಲುಗಳ ಕಾರಣದಿಂದ ರೂಟ್ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು.
ಇದನ್ನೂ ಓದಿ:ಪಿಕೆ, ಟೈಗರ್ ಜಿಂದಾ ಹೈ, ಸಂಜು ದಾಖಲೆಗಳನ್ನು ಮುರಿದ ಕೆಜಿಎಫ್ 2 ಹಿಂದಿ ವರ್ಷನ್
2013ರ ಡಿಸೆಂಬರ್ ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಕ್ರಿಕೆಟ್ ತಂಡ ಅತ್ಯುತ್ತಮ ಮ್ಯಾಚ್ ವಿನ್ನರ್ ಗಳಲ್ಲಿ ಒಬ್ಬರು. 77 ಪಂದ್ಯಗಳನ್ನಾಡಿರುವ ಸ್ಟೋಕ್ಸ್ 5061 ರನ್ ಮತ್ತು 174 ವಿಕೆಟ್ ಗಳನ್ನು ಸಂಪಾದಿಸಿದ್ದಾರೆ. 2017ರ ಫೆಬ್ರವರಿಯಿಂದ ಸ್ಟೋಕ್ಸ್ ಟೆಸ್ಟ್ ತಂಡದ ಉಪನಾಯಕನಾಗಿದ್ದಾರೆ.