Advertisement

ಸ್ಟೋಕ್ಸ್‌ ಇಲ್ಲದೆಯೂ ಇಂಗ್ಲೆಂಡ್‌ಆ್ಯಶಸ್‌ ಗೆಲ್ಲಬಲ್ಲದು: ಮೊಯಿನ್‌

07:20 AM Oct 02, 2017 | Team Udayavani |

ಲಂಡನ್‌: ಬೆನ್‌ ಸ್ಟೋಕ್ಸ್‌ ಇಲ್ಲದೇ ಹೋದರೆ ಇಂಗ್ಲೆಂಡಿಗೆ ಆ್ಯಶಸ್‌ ಉಳಿಸಿಕೊಳ್ಳಲಾಗದು ಎಂದು ಇಯಾನ್‌ ಚಾಪೆಲ್‌ ಇತ್ತೀಚೆಗಷ್ಟೇ ತಮ್ಮ ಅಂಕಣವೊಂದರಲ್ಲಿ ಪ್ರಸ್ತಾವಿಸಿದ್ದರು. ಇದರ ಬೆನ್ನಲ್ಲೇ ಆಂಗ್ಲ ತಂಡದ ಸವ್ಯಸಾಚಿ ಮೊಯಿನ್‌ ಅಲಿ ಹೇಳಿಕೆಯೊಂದನ್ನು ನೀಡಿದ್ದು, ಸ್ಟೋಕ್ಸ್‌ ಗೈರಲ್ಲೂ ಆ್ಯಶಸ್‌ ಗೆಲ್ಲುವ ಸಾಮರ್ಥ್ಯ ಇಂಗ್ಲೆಂಡಿಗಿದೆ ಎಂದಿದ್ದಾರೆ.

Advertisement

“ಬೆನ್‌ ಸ್ಟೋಕ್ಸ್‌ ನಮ್ಮ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಪಂದ್ಯದ ಗತಿಯನ್ನೇ ಬದಲಿಸಲಬಲ್ಲ ಕ್ರಿಕೆಟಿಗ. ಅವರು ತಂಡದಲ್ಲಿರುವುದೇ ದೊಡ್ಡ ಸಂಗತಿ. ಆದರೆ ಏನಾಗಲಿದೆ ಎಂದು ಕಾದು ನೋಡೋಣ. ಸ್ಟೋಕ್ಸ್‌ ಆ್ಯಶಸ್‌ ಸರಣಿಗೆ ಇಲ್ಲದೇ ಹೋದರೆ ನಾವೆಲ್ಲರೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಸ್ಟೋಕ್ಸ್‌ ಇಲ್ಲದೆಯೂ ಆ್ಯಶಸ್‌ ಗೆಲ್ಲುವ ಸಾಮರ್ಥ್ಯ ನಮ್ಮ ಈಗಿನ ತಂಡಕ್ಕಿದೆ’ ಎಂದಿದ್ದಾರೆ ಮೊಯಿನ್‌ ಅಲಿ.

ಅ. 28ರಂದು ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯದತ್ತ ಪ್ರಯಾಣ ಬೆಳೆಸಲಿದೆ. 5 ಪಂದ್ಯಗಳ ಆ್ಯಶಸ್‌ ಸರಣಿ ನ. 23ರಿಂದ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next